ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ವಿಶ್ವದ ಅತಿ ವೇಗದ ಕ್ರೀಡಾ ಬಳಕೆಯ ವಾಹನವಾಗಿರುವ (ಎಸ್‌ಯುವಿ) ಬೆಂಟ್ಲಿ ಬೆನ್ ಟೈಗಾ ಭಾರತೀಯ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಆರಂಭಿಕ ಬೆಲೆ: 3.85 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ಹಿಂದಿನ ಬೆಂಟ್ಲಿ ಮಾದರಿಗಳಿಗೆ ಹೋಲಿಸಿದಾಗ ಹೊಸತಾದ ಬೆನ್ ಟೈಗಾ ಶೇಕಡಾ 12ರಷ್ಟು ಕಡಿಮೆ ಇಂಧನ ಬಳಕೆಯಾಗಲಿದೆ. ಮುಂದಿನ ದಿನಗಳಲ್ಲಿ ಡೀಸೆಲ್ ಹೈಬ್ರಿಡ್ ಮಾದರಿಯೂ ಬಿಡುಗಡೆಯಾಗಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಈಗಿನ ಮಾದರಿಗೆ ಸಮಾನವಾದ ವಿನ್ಯಾಸ ತಂತ್ರಗಾರಿಕೆಯನ್ನು ಪಡೆದಿರುವ ನೂತನ ಬೆಂಟ್ಲಿ ಬೆನ್ ಟೈಗಾದಲ್ಲಿ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಪರಿಣಾಮಕಾರಿ ಗ್ರಿಲ್, ಎಲ್ ಇಡಿ ಟೈಲ್ ಲ್ಯಾಂಪ್, ರೂಫ್ ಸ್ಪಾಯ್ಲರ್, ಕ್ರೋಮ್ ಲೈನ್ ಮತ್ತು ಡ್ಯುಯಲ್ ಎಕ್ಸಾಸ್ಟ್ ಟಿಪ್ ಗಳಿರಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಕಾರಿನೊಳಗೆ ಬಹು ಮಾಹಿತಿ ಪರದೆ, ಸ್ಟ್ಯಾರ್ಟ್-ಸ್ಟಾಪ್ ಬಟನ್, ಟರೈನ್ ಸೆಲೆಕ್ಟರ್, ಗೇರ್ ಸೆಲೆಕ್ಟರ್, ಹೊಸ ಸ್ಟೀರಿಂಗ್ ವೀಲ್, ಹೆಡ್ ಅಪ್ ಡಿಸ್ ಪ್ಲೇ ಮುಂತಾದ ಸೇವೆಗಳಿರಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಬೆಂಟ್ಲಿ ಬೆನ್ ಟೈಗಾ ಡ್ಯಾಶ್ ಬೋರ್ಡ್ ನಲ್ಲಿರುವ ಎಂಟು ಇಂಚುಗಳ ಟಚ್ ಸ್ಕ್ರೀನ್ ಸಿಸ್ಟಂ, ಇನ್ ಬಿಲ್ಟ್ 60 ಜಿಬಿ ಹಾರ್ಡ್ ಡ್ರೈವ್ ಒಳಗೊಂಡಿರಲಿದ್ದು, 30 ಭಾಷೆಗಳಿಗೆ ಸಪೋರ್ಟ್ ಮಾಡಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಬೆಂಟ್ಲಿ ಬೆನ್ ಟೈಗಾ ಐಷಾರಾಮಿ ಕಾರಿನಡಿಯಲ್ಲಿ 6.0 ಲೀಟರ್ ಡಬ್ಲ್ಯು12 ಎಂಜಿನ್ ಇರಲಿದ್ದು 900 ಎನ್ ಎಂ ತಿರುಗುಬಲದಲ್ಲಿ 608 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ವಿತರಿಸುವ ಆಲ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಬೆಂಟ್ಲಿ ಬೆನ್ ಟೈಗಾ ಪಡೆದಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಕೇವಲ 4.1 ಸೆಕೆಂಡುಗಳಲ್ಲೇ ಗಂಟೆಗೆ 301 ಕೀ.ಮೀ. ವೇಗವರ್ಧಿಸಲು ಸಾಮರ್ಥ್ಯ ಹೊಂದಿರುವ ಬೆಂಟ್ಲಿ ಬೆನ್ ಟೈಗಾ ವಿಶ್ವದ ಅತಿ ವೇಗದ ಕ್ರೀಡಾ ಬಳಕೆಯ ವಾಹನವೆಂಬ ಖ್ಯಾತಿಗೆ ಪಾತ್ರವಾಗಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

2015 ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಬೆಂಟ್ಲಿ ಬೆನ್ ಟೈಗಾ ವಿತರಣೆ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ವಾರ್ಷಿಕವಾಗಿ 3000 ಯುನಿಟ್ ಗಳನ್ನು ಉತ್ಪಾದಿಸಲಿರುವ ಬೆಂಟ್ಲಿ, ಭಾರತದಲ್ಲಿ 30ರಷ್ಟು ಮಾದರಿಗಳನ್ನು ಮಾರಾಟ ಮಾಡಲಿದೆ.

ವಿಶ್ವದ ಅತಿ ವೇಗದ ಎಸ್‌ಯುವಿ ಬೆಂಟ್ಲಿ ಬೆನ್‌ಟೈಗಾ ಎಂಟ್ರಿ

ಬ್ರಿಟನ್ ರಾಜಕುಮಾರಿ ಕ್ವೀನ್ ಎಲಿಜಬೆತ್ ಬೆಂಟ್ಲಿ ಬೆನ್ ಟೈಗಾ ಕೊಂಡುಕೊಳ್ಳುವ ಮೊದಲ ಗ್ರಾಹಕರಾಗಲಿದ್ದಾರೆ. ಇದು ಕೂಡಾ ಬೆಂಟ್ಲಿ ಪ್ರತಿಷ್ಠೆಯನ್ನು ವೃದ್ಧಿಸಿಕೊಳ್ಳಲಿದೆ.

More from DriveSpark

Article Published On: Friday, April 22, 2016, 17:24 [IST]
English summary
World's Fastest SUV Launched In India By Bentley At A "Shocking!" Pri
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+