ಯಾವ ವಿಭಾಗದಲ್ಲಿ ಯಾವ ಕಾರು ಬೆಸ್ಟ್?

By Nagaraja

ಕಾರು ಖರೀದಿಸಿದ ಬಳಿಕ ಛೆ! ನನ್ನ ಕಾರಿನಲ್ಲಿ ಅದಿಲ್ಲ, ಇದಿಲ್ಲ, ಅದಿದ್ರೆ ಚೆನ್ನಾಗಿರುತ್ತಿತ್ತು, ಇದಿದ್ರೆ ಚೆನ್ನಾಗಿರುತ್ತಿತ್ತು. ಆ ಕಾರು ಖರೀದಿಸಬಹುದಾಗಿತ್ತು ಎಂದು ಗೋಳಾಡುವುದಕ್ಕಿಂತಲೂ ಮೊದಲು ನಿಮಗೆ ಸೂಕ್ತವಾದ ಕಾರು ಯಾವುದು ಎಂಬುದನ್ನು ಮೊದಲು ಮನದಟ್ಟು ಮಾಡಿಕೊಳ್ಳುವುದು ಒಳಿತು.

ಪ್ರತಿಯೊಬ್ಬರು ಕಾರು ಖರೀದಿಸುವಾಗ ಅವರದ್ದೇ ಆದ ಬೇಡಿಕೆ, ಬಯಕೆಗಳಿರುತ್ತದೆ. ನೀವು ವ್ಯಯ ಮಾಡುವ ಒಟ್ಟು ಬಜೆಟ್ ನ ಆಧಾರದಲ್ಲಿ ಅತ್ಯುತ್ತಮ ಕಾರು ಆಯ್ಕೆ ಮಾಡಬಹುದಾಗಿದೆ. ಇಲ್ಲಿ ಎಂಜಿನ್, ನಿರ್ವಹಣೆ, ಆರಾಮ ಮತ್ತು ಅನುಕೂಲತೆಗಳು ಮುಖ್ಯ ಮಾನದಂಡವಾಗಿರುತ್ತದೆ. ಹೀಗೆ ಪ್ರತಿ ವಿಭಾಗದಲ್ಲಿ ಶ್ರೇಷ್ಠ ಬೇಸ್ ವೆರಿಯಂಟ್ ಕಾರುಗಳ ಬಗ್ಗೆ ಇಲ್ಲಿ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ.

ಸಣ್ಣ ಕಾರುಗಳು

ಸಣ್ಣ ಕಾರುಗಳು

ಎಂಟ್ರಿ ಲೆವೆಲ್ ಸಣ್ಣ ಕಾರುಗಳನ್ನು ತೆಗೆದುಕೊಂಡಾಗ ಮಾರುತಿ ಸುಜುಕಿ 800 ಮತ್ತು ಹ್ಯುಂಡೈ ಇಯಾನ್ ಪ್ರಮುಖವಾಗಿ ಬೆಳಕಿಗೆ ಬರುತ್ತದೆ. ಇದು ಮಾರುಕಟ್ಟೆಯಲ್ಲಿ ಬೀರಿರುವ ಪ್ರಭಾವ ಅಷ್ಟಿಷ್ಟಲ್ಲ. ಆದರೆ ಕಳೆದ ವರ್ಷವಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಡ್ ಕಾರನ್ನು ನಾವು ಕಡೆಗಣಿಸುವಂತಿಲ್ಲ.

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ದೇಶದ ಮಧ್ಯಮ ವಿಭಾಗದ ಜನರಿಗೆ ಮತ್ತು ಮೊದಲ ಬಾರಿಗೆ ಕಾರು ಚಾಲನೆ ಮಾಡುವವರಿಗೆ ಸಣ್ಣ ಕಾರುಗಳು ಹೆಚ್ಚು ಸೂಕ್ತವೆನಿಸಲಿದೆ. ಇಲ್ಲಿ ನಿರ್ವಹಣೆ ಹಾಗೂ ಅನುಕೂಲದ ವಿಚಾರದಲ್ಲಿ ಹ್ಯುಂಡೈ ಇಯಾನ್ ಮೇಲುಗೈಯನ್ನು ಸಾಧಿಸಿದೆ.

ಆಲ್ಟೊ 800

ಆಲ್ಟೊ 800

ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳ ಸಾಲಿನಲ್ಲಿ ಕಾಣಿಸಿಕೊಂಡಿರುವ ಮಾರುತಿ ಆಲ್ಟೊ 800 ಈಗಲೂ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಮಾರಾಟದ ಬಳಿಕ ನೀಡುವ ಸೇವೆಯು ಮಾರುತಿಯನ್ನು ಇತರ ಸಂಸ್ಥೆಗಳಿಗಿಂತ ವಿಭಿನ್ನವಾಗಿಸುತ್ತದೆ.

ರೆನೊ ಕ್ವಿಡ್

ರೆನೊ ಕ್ವಿಡ್

ಆಧುನಿಕ ವಿನ್ಯಾಸ, ಎಸ್ ಯುವಿ ಶೈಲಿ, ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್, ಸ್ಥಳಾವಕಾಶ, ಪವರ್ ಡೋರ್ ಲಾಕ್ ಹೀಗೆ ಎಲ್ಲ ಹಂತದಲ್ಲೂ ಸಣ್ಣ ಕಾರು ವಿಭಾಗದಲ್ಲಿ ತಾಜಾತನವನ್ನು ಸೃಷ್ಟಿ ಮಾಡಿರುವ ರೆನೊ ಕ್ವಿಡ್ ಫೆವರಿಟ್ ಎನಿಸಿಕೊಂಡಿದೆ.

ಬೆಲೆ ಹೋಲಿಕೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಹೋಲಿಕೆ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಆಲ್ಟೊ 800 ಸ್ಟ್ಯಾಂಡರ್ಡ್: 2.57 ಲಕ್ಷ ರು.

ಹ್ಯುಂಡೈ ಇಯಾನ್ ಡಿಲೈಟ್: 2.75 ಲಕ್ಷ ರು.

ರೆನೊ ಕ್ವಿಡ್ ಸ್ಟ್ಯಾಂಡರ್ಡ್: 2.62 ಲಕ್ಷ ರು.

ರೇಟಿಂಗ್ (ಗರಿಷ್ಠ 10ರಲ್ಲಿ)

ರೇಟಿಂಗ್ (ಗರಿಷ್ಠ 10ರಲ್ಲಿ)

ಮಾರುತಿ ಆಲ್ಟೊ 800 ಸ್ಟ್ಯಾಂಡರ್ಡ್: 7.5/10

ಹ್ಯುಂಡೈ ಇಯಾನ್ ಡಿಲೈಟ್: 7/10

ರೆನೊ ಕ್ವಿಡ್ ಸ್ಟ್ಯಾಂಡರ್ಡ್: 8/10

ಕಾಂಪಾಕ್ಟ್ ಸೆಡಾನ್

ಕಾಂಪಾಕ್ಟ್ ಸೆಡಾನ್

ಕಾಂಪಾಕ್ಟ್ ಸೆಡಾನ್ ವಿಭಾಗದಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಅಧಿಪತ್ಯವನ್ನು ಮುಂದುವರಿಸಿದರೂ ಈ ವಿಭಾಗಕ್ಕೆ ಅನೇಕ ಆಕರ್ಷಕ ಕಾರುಗಳ ಪ್ರವೇಶವಾಗಿದೆ. ಇವುಗಳಲ್ಲಿ ಹೋಂಡಾ ಅಮೇಜ್, ಹ್ಯುಂಡೈ ಎಕ್ಸ್ ಸೆಂಟ್, ಫೋರ್ಡ್ ಫಿಗೊ ಆಸ್ಪೈರ್, ಫೋಕ್ಸ್ ವ್ಯಾಗನ್ ಎಮಿಯೊ ಮತ್ತು ಟಾಟಾ ಜೆಸ್ಟ್ ಪ್ರಮುಖವಾಗಿದೆ.

 ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಅನೇಕ ಬಾರಿ ಮಾಸಿಕ ಮಾರಾಟದಲ್ಲಿ ಆಲ್ಟೊ 800 ಕಾರನ್ನೇ ಹಿಂದಿಕ್ಕಿರುವ ಸ್ವಿಫ್ಟ್ ಡಿಜೈರ್ ಅತ್ಯುತ್ತಮ ಸ್ಥಳಾವಕಾಶ, ಮೈಲೇಜ್ ಮತ್ತು ಆರಾಮದಾಯಕ ಕಾರು ಹುಡುಕುವವರಿಗೆ ಅತ್ಯುತ್ತಮ ಆಯ್ಕೆಯಾಗಿದ್ದು, ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲೂ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಹೆಚ್ಚಿನ ಬೇಡಿಕೆಯನ್ನು ಕಾಪಾಡಿಕೊಂಡಿದೆ.

ಹ್ಯುಂಡೈ ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್

ಹಾಗೇ ನೋಡುವಾಗ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಒಳಮೈ ಜಾಗ ಮತ್ತು ಎಬಿಎಸ್ ವೈಶಿಷ್ಟ್ಯಗಳಲ್ಲಿ ಲಭ್ಯವಾಗುತ್ತಿರುವ ಹ್ಯುಂಡೈ ಎಕ್ಸ್ ಸೆಂಟ್ ಗ್ರಾಹಕರಿಗೆ ಹೊಸತನವನ್ನು ನೀಡಲಿದೆ.

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ (ಎಲ್‌ಎಕ್ಸ್ ಐ): 5.23 ಲಕ್ಷ ರು.

ಹೋಂಡಾ ಅಮೇಜ್ (ಇ ಎಂಟಿ): 5.30 ಲಕ್ಷ ರು.

ಹ್ಯುಂಡೈ ಎಕ್ಸ್ ಸೆಂಟ್ (ಬೇಸ್): 5.21 ಲಕ್ಷ ರು.

ರೇಟಿಂಗ್

ರೇಟಿಂಗ್

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ (ಎಲ್‌ಎಕ್ಸ್ ಐ): 8/10

ಹೋಂಡಾ ಅಮೇಜ್ (ಇ ಎಂಟಿ): 7.5/10

ಹ್ಯುಂಡೈ ಎಕ್ಸ್ ಸೆಂಟ್ (ಬೇಸ್): 7/10

ಸೆಡಾನ್

ಸೆಡಾನ್

ಮಧ್ಯಮ ವರ್ಗದ ಸೆಡಾನ್ ವಿಭಾಗಕ್ಕೆ ಬಂದಾಗ ದೇಶದೆಲ್ಲ ಮುಂಚೂಣಿಯ ವಾಹನ ಸಂಸ್ಥೆಗಳು ಅತ್ಯುತ್ತಮ ಆಯ್ಕೆಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್ ವ್ಯಾಗನ್ ವೆಂಟೊ, ಮಾರುತಿ ಸುಜುಕಿ ಸಿಯಾಝ್, ಸ್ಕೋಡಾ ರಾಪಿಡ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಹೋಂಡಾ ಸಿಟಿ

ಹೋಂಡಾ ಸಿಟಿ

ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೆಡಾನ್ ಕಾರುಗಳಲ್ಲಿ ಹೋಂಡಾ ಸಿಟಿ ಒಂದಾಗಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಅತ್ಯುತ್ತಮ ಮೈಲೇಜ್, ವೈಶಿಷ್ಟ್ಯ ಮತ್ತು ಎಬಿಎಸ್, ಇಬಿಡಿಗಳಂತಹ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಕಾಪಾಡಿಕೊಂಡಿದೆ.

ಹ್ಯುಂಡೈ ವೆರ್ನಾ

ಹ್ಯುಂಡೈ ವೆರ್ನಾ

ಹೋಂಡಾ ಸಿಟಿಗೆ ನಿಕಟ ಪೈಪೋಟಿಯನ್ನು ಒಡ್ಡುತ್ತಿರುವ ಹ್ಯುಂಡೈ ವೆರ್ನಾ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್, ಡ್ಯುಯಲ್ ಏರ್ ಬ್ಯಾಗ್ ಟರ್ನ್ ಇಂಡಿಕೇಟರ್, ಪವರ್ ಔಟ್ಲೆಟ್ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ.

ಫೋಕ್ಸ್ ವ್ಯಾಗನ್ ವೆಂಟೊ

ಫೋಕ್ಸ್ ವ್ಯಾಗನ್ ವೆಂಟೊ

ಪ್ರೀಮಿಯಂ ವಿನ್ಯಾಸ ಹಾಗೂ ಶೈಲಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ರಿಯರ್ ಫಾಗ್ ಲ್ಯಾಂಪ್ ಇತ್ಯಾದಿ ಅತ್ಯಾವಶ್ಯಕ ವೈಶಿಷ್ಟ್ಯಗಳನ್ನು ಫೋಕ್ಸ್ ವ್ಯಾಗನ್ ವೆಂಟೊ ಪಡೆದಿದೆ.

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಹೋಂಡಾ ಸಿಟಿ (ಇ ಪೆಟ್ರೋಲ್): 7.96 ಲಕ್ಷ ರು.

ಹ್ಯುಂಡೈ ಫ್ಯೂಯಿಡಿಕ್ ವೆರ್ನಾ (ಬೇಸ್): 7.86 ಲಕ್ಷ ರು.

ಫೋಕ್ಸ್ ವ್ಯಾಗನ್ ವೆಂಟೊ (ಟ್ರೆಂಡ್ ಲೈನ್ ಪೆಟ್ರೋಲ್): 7.85 ಲಕ್ಷ ರು.

ರೇಟಿಂಗ್

ರೇಟಿಂಗ್

ಹೋಂಡಾ ಸಿಟಿ (ಇ ಪೆಟ್ರೋಲ್): 8/10

ಹ್ಯುಂಡೈ ಫ್ಯೂಯಿಡಿಕ್ ವೆರ್ನಾ (ಬೇಸ್): 7.5/10

ಫೋಕ್ಸ್ ವ್ಯಾಗನ್ ವೆಂಟೊ (ಟ್ರೆಂಡ್ ಲೈನ್ ಪೆಟ್ರೋಲ್): 7/10

ಸಬ್ ಕಾಂಪಾಕ್ಟ್ ಎಸ್‌ಯುವಿ

ಸಬ್ ಕಾಂಪಾಕ್ಟ್ ಎಸ್‌ಯುವಿ

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ವಿಭಾಗ ಇದಾಗಿದೆ. ಪ್ರಸ್ತುತ ಮಿನಿ ಎಸ್ ಯುವಿ ವಿಭಾಗದಲ್ಲಿ ಸಾಲು ಸಾಲು ಕಾರುಗಳು ಬಿಡುಗಡೆಯಾಗುತ್ತಿದ್ದು, ವಿಶಿಷ್ಟತೆಗೆ ಕಾರಣವಾಗಿದೆ. ಈ ಪೈಕಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿಯುವಿ300 ಗಮನಾರ್ಹ ಸಾಧನೆ ಮಾಡುತ್ತಿದೆ.

ವಿಟಾರಾ ಬ್ರಿಝಾ

ವಿಟಾರಾ ಬ್ರಿಝಾ

ಹಣಕ್ಕೆ ತಕ್ಕ ಮೌಲ್ಯ ನೀಡುತ್ತಿರುವ ಮಾರುತಿ ವಿಟಾರಾ ಬ್ರಿಝಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 20,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ಗಿಟ್ಟಿಸಿಕೊಂಡಿದೆ. ಆಕರ್ಷಕ ವಿನ್ಯಾಸ, ಕ್ಯಾಬಿನ್ ಜಾಗ ಮತ್ತು ವೈಶಿಷ್ಟ್ಯಗಳು ಮಾರುತಿಗೆ ನೆರವಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಸಬ್ ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಗರಿಷ್ಠ ತಂತ್ರಾಂಶಗಳ ಪ್ರಯೋಗವನ್ನು ಇಕೊಸ್ಪೋರ್ಟ್ ಮಾಡಿದೆ. ಅಲ್ಲದೆ ಗ್ರಾಹಕರ ಭದ್ರತೆ ಹಾಗೂ ಸುಲಭ ಸವಾರಿಗೆ ಆದ್ಯತೆ ಕೊಟ್ಟಿದೆ.

ಮಹೀಂದ್ರ ಟಿಯುವಿ300

ಮಹೀಂದ್ರ ಟಿಯುವಿ300

ದೇಶದ ಎಸ್ ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಕಳೆದ ಕೆಲವು ಸಮಯಗಳಲ್ಲಿ ಬಿಡುಗಡೆ ಮಾಡಿರುವ ಅತ್ಯಾಕರ್ಷಕ ಎಸ್‌ಯುವಿಗಳಲ್ಲಿ ಇಂದು ಒಂದಾಗಿದೆ.

ಬೆಲೆ ಹೋಲಿಕೆ(ಎಕ್ಸ್ ಶೋ ರೂಂ ದೆಹಲಿ)

ಬೆಲೆ ಹೋಲಿಕೆ(ಎಕ್ಸ್ ಶೋ ರೂಂ ದೆಹಲಿ)

ಮಾರುತಿ ವಿಟಾರಾ ಬ್ರಿಝಾ ಎಲ್‌ಡಿಐ: 6.99 ಲಕ್ಷ ರು.

ಫೋರ್ಡ್ ಇಕೊಸ್ಪೋರ್ಟ್ (ಆ್ಯಂಬಿಯಂಟ್): 7.29 ಲಕ್ಷ ರು.

ಮಹೀಂದ್ರ ಟಿಯುವಿ300 (ಟಿ4): 7.11 ಲಕ್ಷ ರು.

ರೇಟಿಂಗ್

ರೇಟಿಂಗ್

ಮಾರುತಿ ವಿಟಾರಾ ಬ್ರಿಝಾ ಎಲ್‌ಡಿಐ: 8/10

ಫೋರ್ಡ್ ಇಕೊಸ್ಪೋರ್ಟ್ (ಆ್ಯಂಬಿಯಂಟ್): 8/10

ಮಹೀಂದ್ರ ಟಿಯುವಿ300 (ಟಿ4): 7.5/10

ಕಾಂಪಾಕ್ಟ್ ಎಸ್ ಯುವಿ

ಕಾಂಪಾಕ್ಟ್ ಎಸ್ ಯುವಿ

ಸಬ್ ಕಾಂಪಾಕ್ಟ್ ಎಸ್ ಯುವಿ ಗಿಂತಲೂ ಸ್ವಲ್ಪ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳುವ ಕಾಂಪಾಕ್ಟ್ ಕ್ರೀಡಾ ಬಳಕೆಯ ವಿಭಾಗದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಇಲ್ಲಿ ಡಸ್ಟರ್ ಜೊತೆಗೆ ಮಹೀಂದ್ರ ಸ್ಕಾರ್ಪಿಯೊ ಹಾಗೂ ಹ್ಯುಂಡೈ ಕ್ರೆಟಾ ನಿಕಟ ಪೈಪೋಟಿಯನ್ನು ಒಡ್ಡುತ್ತಿದೆ.

ರೆನೊ ಡಸ್ಟರ್

ರೆನೊ ಡಸ್ಟರ್

ಒಂದು ಅರ್ಥದಲ್ಲಿ ಹೇಳುವುದಾದ್ದಲ್ಲಿ ಡಸ್ಟರ್ ಪ್ರವೇಶದ ಬಳಿಕ ಕಾಂಪಾಕ್ಟ್ ಎಸ್‌ಯುವಿ ವಿಭಾಗದ ಅದೃಷ್ಟವೇ ಬದಲಾಗಿತ್ತು. ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಡಸ್ಟರ್ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದ್ದು, ಅತ್ಯುತ್ತಮ ಕ್ಯಾಬಿನ್ ಜಾಗ, ನಿರ್ವಹಣೆ, ಢಿಕ್ಕಿ ಜಾಗ ಮತ್ತು ಚಾಲನಾ ಅನುಭವದಲ್ಲಿ ಮೇಲುಗೈ ಸಾಧಿಸಿದೆ.

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ

ದೇಶದ ವರ್ಷದ ಕಾರು ಪ್ರಶಸ್ತಿ ಬಾಚಿದಾಗಲೇ ಹ್ಯುಂಡೈ ಕ್ರೆಟಾ ಮೌಲ್ಯವನ್ನು ನೀವು ಮನಗಾಣಬಹುದಾಗಿದೆ. ಶಕ್ತಿಶಾಲಿ ಎಂಜಿನ್, ಆರಾಮ, ಅನುಕೂಲತೆ, ವಿನ್ಯಾಸ ಹೀಗೆ ಎಲ್ಲ ವಿಭಾಗದಲ್ಲೂ ಹ್ಯುಂಡೈ ಕ್ರೆಟಾ ತನ್ನ ಬಲವನ್ನು ಪ್ರದರ್ಶಿಸಿದೆ.

ಮಹೀಂದ್ರ ಸ್ಕಾರ್ಪಿಯೊ

ಮಹೀಂದ್ರ ಸ್ಕಾರ್ಪಿಯೊ

ದೇಶದ ನಂ.1 ಎಸ್‌ಯುವಿ ಕಾರಾಗಿರುವ ಮಹೀಂದ್ರ ಸ್ಕಾರ್ಪಿಯೊ ಬಹಳ ಕಾಲದಿಂದ ತನ್ನ ಸ್ಥಾನವನ್ನು ಭದ್ರವಾಗಿಸಿಟ್ಟುಕೊಂಡಿದೆ. ಒಂಬತ್ತು ಸೀಟುಗಳ ಆಯ್ಕೆಯಲ್ಲೂ ಲಭ್ಯವಿರುವ ಮಹೀಂದ್ರ ಸ್ಕಾರ್ಪಿಯೊ ಅತ್ಯುತ್ತಮ ಮೈಲೇಜ್ ನೀಡುತ್ತಿದೆ.

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ರೆನೊ ಡಸ್ಟರ್ ಆರ್‌ಎಕ್ಸ್‌ಇ: 8.47 ಲಕ್ಷ ರು.

ಹ್ಯುಂಡೈ ಕ್ರೆಟಾ (ಬೇಸ್): 9.15 ಲಕ್ಷ ರು.

ಮಹೀಂದ್ರ ಸ್ಕಾರ್ಪಿಯೊ ಎಸ್2 (2.5 ಎಂ2ಡಿಐ): 9.33 ಲಕ್ಷ ರು.

ರೇಟಿಂಗ್

ರೇಟಿಂಗ್

ರೆನೊ ಡಸ್ಟರ್ ಆರ್‌ಎಕ್ಸ್‌ಇ: 8/10

ಹ್ಯುಂಡೈ ಕ್ರೆಟಾ (ಬೇಸ್): 8.5/10

ಮಹೀಂದ್ರ ಸ್ಕಾರ್ಪಿಯೊ ಎಸ್2 (2.5 ಎಂ2ಡಿಐ): 7.5/10

More from DriveSpark

Article Published On: Thursday, March 24, 2016, 13:02 [IST]
English summary
Are You Booking A Car? Take A Look At Some Of The Best Base Variant Cars
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+