ಬಿಎಂಡಬ್ಲ್ಯು 5 ಸಿರೀಸ್ ಪೆಟ್ರೋಲ್ ಆವೃತ್ತಿ ಬಿಡುಗಡೆ
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಬಿಎಂಡಬ್ಲ್ಯು, ತನ್ನ ಜನಪ್ರಿಯ 5 ಸಿರೀಸ್ ಶ್ರೇಣಿಯ ಕಾರುಗಳನ್ನು ವಿಸ್ತರಿಸಿದ್ದು, ನೂತನ 520ಐ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 54 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಬಿಎಂಡಬ್ಲ್ಯು ನೂತನ 5 ಸಿರೀಸ್ 520ಐ ಭಾರತ ಪ್ರವೇಶ ಪ ಡೆಯಲಿದೆ. ಈ ಮೂಲಕ ದೇಶದಲ್ಲಿ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿಪಡಿಸಲಿದೆ.

2.0 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು 520ಐ 270 ಎನ್ ಎಂ ತಿಗುರುಬಲದಲ್ಲಿ 184 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

ಬಿಎಂಡಬ್ಲ್ಯು ನೂತನ ಕಾರು ಕೇವಲ 7.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 233 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

'ಲಗ್ಷುರಿ ಲೈನ್' ವೆರಿಯಂಟ್ ನಲ್ಲಿ ಲಭ್ಯವಿರುವ ನೂತನ ಬಿಎಂಡಬ್ಲ್ಯು 520ಐ, ಇಂಧನ ಉಳಿತಾಯ ಮಾಡುವಂತಹ ಆಧುನಿಕ ಸ್ಟ್ಯಾರ್ಟ್ ಸ್ಟಾಪ್, ಬ್ರೇಕ್ ಎನರ್ಜಿ ರಿಜನರೇಟಿವ್ ಮತ್ತು ಇಕೊ ಪ್ರೊ ಡ್ರೈವಿಂಗ್ ತಂತ್ರಜ್ಞಾನಗಳನ್ನು ಒಳಗೊಂಡಿರಲಿದೆ.

ಇನ್ನುಳಿದಂತೆ ಕಂಫರ್ಟ್ ಮತ್ತು ಸ್ಪೋರ್ಟ್ ಗಳೆಂಬ ಚಾಲನಾ ವಿಧಗಳನ್ನು ನೂತನ ಬಿಎಂಡಬ್ಲ್ಯು 520ಐ ಪಡೆಯಲಿದೆ.

ಅಡಾಪ್ಟಿವ್ ಎಲ್ ಇಡಿ ಹೆಡ್ ಲ್ಯಾಂಪ್, 18 ಇಂಚುಗಳ ಅಲಾಯ್ ವೀಲ್, 10.2 ಇಂಚುಗಳ ಕಲರ್ ಡಿಸ್ ಪ್ಲೇ, ಐಡ್ರೈವ್ ಇನ್ಪೋಟೈನ್ಮೆಂಟ್ ಸಿಸ್ಟಂ, ನೇವಿಗೇಷನ್, 600 ವಾಟ್ 16 ಸ್ಪೀಕರ್ ಹರ್ಮಾನ್ ಕರ್ಡಾನ್ ಆಡಿಯೋ ಸಿಸ್ಟಂ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಾಗಿ ಪೆಡಲ್ ಶಿಫ್ಟರ್ ವ್ಯವಸ್ಥೆಗಳು ಇರಲಿದೆ.

ಪ್ರಮುಖವಾಗಿಯೂ ಆಡಿ ಎ6 35ಟಿಎಫ್‌ಎಸ್‌ಐ ಮತ್ತು ಮರ್ಸಿಡಿಸ್ ಬೆಂಝ್ ಇ200 ಮುಂತಾದ ಮಾದರಿಗಳಿಗೆ ನೂತನ ಬಿಎಂಡಬ್ಲ್ಯು 520ಐ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications