ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ತ್ರಿವಳಿ ಶೋ

By Nagaraja

ಮುಂಬರುವ 2016 ಆಟೋ ಎಕ್ಸ್ ಪೋಗೆ ಸಕಲ ಸಿದ್ಧತೆಗಳೊಂದಿಗೆ ಮುಂದೆ ಬರುತ್ತಿರುವ ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಬಿಎಂಡಬ್ಲ್ಯು, ಮೂರು ನೂತನ ಮಾದರಿಗಳನ್ನು ಪ್ರದರ್ಶಿಸಲಿದೆ.

ಬಿಎಂಡಬ್ಲ್ಯು ಹೊಸ ಮಾದರಿಗಳು

  • ಆಲ್ ನ್ಯೂ 7 ಸಿರೀಸ್ ಲಗ್ಷುರಿ ಸೆಡಾನ್,
  • 3 ಸಿರೀಸ್ ಸೆಡಾನ್,
  • ಆಲ್ ನ್ಯೂ ಎಕ್ಸ್ ಕಾಂಪಾಕ್ಟ್ ಎಸ್‌ಯುವಿ
ಬಿಎಂಡಬ್ಲ್ಯು
ಹಾಗಿದ್ದರೂ ಮೇಲಿನ ಮೂರು ಜನಪ್ರಿಯ ಮಾದರಿಗಳು ಯಾವಾಗ ಬಿಡುಗಡೆಯಾಗಲಿದೆ ಎಂಬುದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳು ಬಂದಿಲ್ಲ. ಈ ಎಲ್ಲ ಮಾದರಿಗಳು ಒಂದರ ಬಳಿಕ ಒಂದರಂತೆ ದೇಶದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಬಿಎಂಡಬ್ಲ್ಯು ಆರನೇ ತಲೆಮಾರಿನ 7 ಸಿರೀಸ್ ಕಾರನ್ನು ಪ್ರದರ್ಶಗೊಳಿಸಲಾಗಿತ್ತು. ಈ ಐಷಾರಾಮಿ ಸೆಡಾನ್ ಕಾರು ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ.

ಎರಡನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್1 ತನ್ನ ಹಿಂದಿನ ತಲೆಮಾರಿಗೆ ಹೋಲಿಸಿದಾಗ ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದ್ದು, ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿಕೊಂಡು ಬರಲಿದೆ. ನೂತನ ಕಾರು ಐದು ಹಾಗೂ ಏಳು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳು ಸಿಗಲಿದೆ.

ಅದೇ ರೀತಿ ಬಿಎಂಡಬ್ಲ್ಯು 3 ಸಿರೀಸ್ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದ್ದು, ಮತ್ತಷ್ಟು ವಾಹನ ಪ್ರೇಮಿಗಳನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ಮೂಲಕ ಮರ್ಸಿಡಿಸ್ ಬೆಂಝ್ ಹಾಗೂ ಆಡಿ ಮಾದರಿಗಳಿಗೆ ತಕ್ಕ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

More from DriveSpark

Article Published On: Friday, January 22, 2016, 18:09 [IST]
English summary
BMW India To Unveil Three New Models At 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+