ಬಿಎಂಡಬ್ಲ್ಯು ಎಕ್ಸ್3 ಮತ್ತು ಎಕ್ಸ್5 ಪೆಟ್ರೋಲ್ ಕಾರುಗಳು ಭಾರತದಲ್ಲಿ ಬಿಡುಗಡೆ
ಬಿಎಂಡಬ್ಲ್ಯು ಎಕ್ಸ್3 ಮತ್ತು ಎಕ್ಸ್5 ಪೆಟ್ರೋಲ್ ಕಾರುಗಳು ಭಾರತದಲ್ಲಿ ಭರ್ಜರಿ ಬಿಡುಗಡೆಗೊಂಡಿದೆ.
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಬಿಎಂಡಬ್ಲ್ಯು, ಭಾರತದಲ್ಲಿ ಎಕ್ಸ್3 ಮತ್ತು ಎಕ್ಸ್5 ಪೆಟ್ರೋಲ್ ಕಾರುಗಳನ್ನು ಬಿಡುಗಡೆ ಮಾಡಿದೆ. ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್28ಐ ಮತ್ತು ಬಿಎಂಡಬ್ಲ್ಯು ಎಕ್ಸ್5 ಎಕ್ಸ್ ಡ್ರೈವ್35ಐ ಮಾದರಿಗಳು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂಗಳ ಪ್ರಕಾರ 54.90 ಮತ್ತು 73.50 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ 28ಐ ಕಾರಿನಲ್ಲಿರುವ 2.0 ಲೀಟರ್ ಫೋರ್ ಸಿಲಿಂಡರ್ ಮೋಟಾರು ಎಂಜಿನ್ 350 ಎನ್ ಎಂ ತಿರುಗುಬಲದಲ್ಲಿ 242 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನೊಂದೆಡೆ ಬಿಎಂಡಬ್ಲ್ಯು ಎಕ್ಸ್5 ಎಕ್ಸ್ ಡ್ರೈವ್35ಐ ಕಾರಿನಲ್ಲಿರುವ 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 302 ಅಶ್ವಶಕ್ತಿಯನ್ನು ನೀಡಲಿದೆ.

ಇವೆರಡು ಎಂಜಿನ್ ಗಲು ಎಂಟು ಸ್ಪೀಡ್ ಸ್ಟೆಪ್ ಟ್ರಾನಿಕ್ ಗೇರ್ ಬಾಕ್ಸ್ ಗಳಿಂದ ನಿಯಂತ್ರಿಸ್ಪಡಲಿದ್ದು, 6.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ತ್ಯುತ್ತಮ ಚಲನಶೀಲತೆ ಹಾಗೂ ಉರುಳಿಕೆಗಾಗಿ ಬಿಎಂಡಬ್ಲ್ಯು ಎಕ್ಸ್3 ಮತ್ತು ಎಕ್ಸ್5 ಕಾರುಗಳಲ್ಲಿ ಆಲ್ ವೀಲ್ ಡ್ರೈವ್ ವ್ಯವಸ್ಥೆಗಳನ್ನು ಕೊಡಲಾಗಿದೆ.

ಇನ್ನು ಹೆಚ್ಚಿ ವೈಶಿಷ್ಟ್ಯಗಳಿಗಾಗಿ ಬಿಎಂಡಬ್ಲ್ಯು ಹೊಸತಾಗಿ ಪರಿಚಯಿಸಿರುವ ಡಿಸೈನ್ ಪ್ಯೂರ್ ಎಕ್ಸ್ ಪೀರಿಯನ್ಸ್ ಪ್ಯಾಕೇಜ್ ಸೇವೆಯೂ ಇರುತ್ತದೆ.

ಭಾರತದಲ್ಲಿ ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಜಿಎಲ್ ಸಿ ಮತ್ತು ಜಾಗ್ವಾರ್ ಎಫ್ ಫೇಸ್ ಮಾದರಿಗಳಿಗೆ ಬಿಎಂಡಬ್ಲ್ಯು ಎಕ್ಸ್3 ಮತ್ತು ಎಕ್ಸ್5 ಮಾದರಿಗಳು ಪ್ರತಿಸ್ಪರ್ಧಿಯಾಗಲಿದೆ.

ಇದರೊಂದಿಗೆ ಬಿಎಂಡಬ್ಲ್ಯು ಎಕ್ಸ್3 ಹಾಗೂ ಎಕ್ಸ್5 ಸಾಲಿಗೆ ಡೀಸೆಲ್ ಜೊತೆಗೆ ಪೆಟ್ರೋಲ್ ಆವೃತ್ತಿಗಳು ಲಭ್ಯವಾಗಲಿದೆ. ಇದು ಚೆನ್ನೈ ಘಟಕದಲ್ಲಿ ಉತ್ಪಾದನೆಯಾಗಲಿದೆ.

ಬಿಎಂಡಬ್ಲ್ಯು ಎಕ್ಸ್3 ವಿಶಿಷ್ಟತೆ
ಐ ಡ್ರೈವ್ ಟಚ್ ಕಂಟ್ರೋಲರ್, 22.3 ಸೆಂಟಿಮೀಟರ್ ಎಚ್ ಡಿ ಪರದೆ,
ಪ್ರೀಮಿಯಂ ಹೈ-ಫೈ ಲೌಡ್ ಸ್ಪೀಕರ್ ಸಿಸ್ಟಂ,
ರಿಯರ್ ವ್ಯೂ ಕ್ಯಾಮೆರಾ,
ಆಟೋ ಸ್ಟ್ಯಾರ್ಟ್/ಸ್ಟಾಪ್,
ಬ್ರೇಕ್ ಎನರ್ಜಿ ರಿಜನರೇಷನ್,
ಇಕೊ ಪ್ರೊ ಮೋಡ್,
ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್,
ಇಂಟೆಲಿಜೆಂಟ್ ಲೈಟ್ ವೇಟ್ ನಿರ್ಮಾಣ

ಬಿಎಂಡಬ್ಲ್ಯು ಎಕ್ಸ್5 ವಿಶಿಷ್ಟತೆ
ಡಿಸೈನ್ ಪ್ಯೂರ್ ಎಕ್ಸ್ ಪೀರಿಯನ್ಸ್ ಪ್ಯಾಕೇಜ್,
ಲೆಥರ್ ಹೋದಿಕೆ,
10.2 ಇಂಚುಗಳ ಟಚ್ ಸ್ಕ್ರೀನ್ ಐ-ಡ್ರೈವ್ ಇನ್ಪೋಟೈನ್ಮೆಂಟ್ ಸಿಸ್ಟಂ,
ಜಿಪಿಎಸ್ ತಳಹದಿಯ ನೇವಿಗೇಷನ್,
ಹರ್ಮಾನ್-ಕರ್ಡಾನ್ ಸೌರಂಡ್ ಸೌಂಡ್ ಆಡಿಯೋ ಸಿಸ್ಟಂ,

ಬಿಎಂಡಬ್ಲ್ಯು ಎಕ್ಸ್5 ಬಣ್ಣಗಳು
ಆಲ್ಪೈನ್ ವೈಟ್ ನಾನ್ ಮೆಟ್ಯಾಲಿಕ್
ಬ್ಲ್ಯಾಕ್ ಸಪೈರ್,
ಇಂಪಿರಿಯಲ್ ಬ್ಲೂ,
ಸ್ಪಾರ್ಕ್ಲಿಂಗ್ ಬ್ರೌನ್.


Click it and Unblock the Notifications