ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

By Nagaraja

1916ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಜರ್ಮನಿಯ ವಿಶ್ವವಿಖ್ಯಾತ ಬಿಎಂಡಬ್ಲ್ಯು (Bayerische Motoren Werke OR Bavarian Motor Works) ಸಂಸ್ಥೆ 2016 ಜನವರಿ 07ರಂದು 100 ವಸಂತಗಳನ್ನು ಪೂರ್ಣಗೊಳಿಸಿದೆ. ಈ ಮಹತ್ತಾದ ದಿನವನ್ನು ಮತ್ತಷ್ಟು ಸ್ಮರಣೀಯಗೊಳಿಸಿರುವ ಬಿಎಂಡಬ್ಲ್ಯು ಅತಿ ನೂತನ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರನ್ನು ಪ್ರದರ್ಶನಗೊಳಿಸಿದೆ.

ಜರ್ಮನಿಯಲ್ಲಿ ಮ್ಯೂನಿಚ್ ನಲ್ಲಿ ಸ್ಥಿತಗೊಂಡಿರುವ ಕೇಂದ್ರ ಕಚೇರಿಯಲ್ಲಿ ನಡೆದ ಆದ್ದೂರಿ ಕಾರ್ಯಕ್ರಮದಲ್ಲಿ ಬಿಎಂಡಬ್ಲ್ಯು ಪ್ರಚಾರ ರಾಯಭಾರಿ ಆಗಿರುವ ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ಇದಕ್ಕೆ ಸಾಕ್ಷಿಯಾಗಿದ್ದರು. ಸಮಕಾಲೀನ ಮಾರುಕಟ್ಟೆಯಲ್ಲಿ ಮಿನಿ ಹಾಗೂ ರೋಲ್ಸ್ ರಾಯ್ಸ್ ಗಳಂತಹ ಪ್ರತಿಷ್ಠಿತ ಕಾರು ಬ್ರಾಂಡ್ ಗಳ ಒಡೆತನವನ್ನು ಬಿಎಂಡಬ್ಲ್ಯು ಹೊಂದಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ಹಳೆಯ ದಿನಗಳನ್ನು ಸ್ಮರಿಸಲಿರುವ ಬಿಎಂಡಬ್ಲ್ಯು ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರು ಭವಿಷ್ಯದ ಸಂಚಾರ ವಾಹನಗಳಿಗೆ ಮುನ್ನುಡಿ ಬರೆಯಲಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ಹೆಚ್ಚು ಆರಾಮ ಹಾಗೂ ಅನುಕೂಲ, ನೆರವು ಹಾಗೂ ಚಾಲನಾ ಅನುಭವ ನೂತನ ಕಾನ್ಸೆಪ್ಟ್ ಕಾರಿನ ಮುಖ್ಯ ವೈಶಿಷ್ಟ್ಯಗಳಾಗಿದೆ. ಇದರಲ್ಲಿ ಗರಿಷ್ಠ ಕಸ್ಟಮೈಸ್ಡ್ ಆಯ್ಕೆಯನ್ನು ಕೊಡಲಾಗಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ನೂತನ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರಿನಲ್ಲಿ ತ್ರಿಡಿ ಪ್ರಿಟಿಂಗ್ ಆಯ್ಕೆಯನ್ನು ನೀಡಲಾಗಿದೆ. ಮುಂದಿನ 30 ವರ್ಷಗಳಲ್ಲಿ ಇದು ನನಸಾಗುವ ಸಾಧ್ಯತೆಯನ್ನು ಮನಗಂಡು ಇದನ್ನು ರಚಿಸಲಾಗಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ಅಲ್ಲದೆ ಬೂಸ್ಟ್ ಮತ್ತು ಈಸ್ ಗಳೆಂಬ ಎರಡು ಹೊಸ ಚಾಲನಾ ವಿಧಗಳನ್ನು ನೂತನ ವಿಷನ್ ನೆಕ್ಸ್ಟ್ 100 ಕಾರಿನ ಮುಖಾಂತರ ಬಿಎಂಡಬ್ಲ್ಯು ಪರಿಚಯಿಸುತ್ತಿದ್ದು, ಸ್ವಯಂ ಚಾಲನೆಯನ್ನು ಉತ್ತೇಜಿಸುತ್ತಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ಹೂಸ ಕೂಪೆ ಶೈಲಿಯ ವಿನ್ಯಾಸ ಹಾಗೂ ಚಾಲಕ-ವಾಹನ ಸಂಪರ್ಕ ವ್ಯವಸ್ಥೆಯು ಇದರಲ್ಲಿರುತ್ತದೆ. ಇದನ್ನು ಬಿಎಂಡಬ್ಲ್ಯು 'ಅಲೈವ್ ಜಿಯೋಮೆಟ್ರಿ' ಎಂದು ವಿಶ್ಲೇಷಿಸುತ್ತಿದೆ.

ವಿಷನ್ ನೆಕ್ಸ್ಟ್ ಕಾನ್ಸೆಪ್ಟ್‌ನೊಂದಿಗೆ ಬಿಎಂಡಬ್ಲ್ಯು 100ನೇ ವರ್ಷಾಚರಣೆ

ಇನ್ನು ಡ್ಯಾಶ್ ಬೋರ್ಡ್ ನಲ್ಲಿ ಟಚ್ ಸ್ಕ್ರೀನ್ ಬದಲಾಗಿ ಹೆಡ್ ಅಪ್ ಡಿಸ್ ಪ್ಲೇ ಸೇವೆಯೂ ಕಂಡುಬರಲಿದೆ. ಹಾಗಿದ್ದರೂ ಇದೊಂದು ಪೆಟ್ರೋಲ್, ಎಲೆಕ್ಟ್ರಿಕ್ ಅಥವಾ ಫ್ಯೂಯಲ್ ಸೆಲ್ ವಾಹನವಾಗಿರಲಿದೆಯೇ ಎಂಬುದಕ್ಕೆ ಸ್ಪಷ್ಟ ಸೂಚನೆಗಳು ಲಭ್ಯವಾಗಿಲ್ಲ.

Article Published On: Tuesday, March 8, 2016, 9:43 [IST]
English summary
BMW Celebrates 100th Birthday With Vision Next 100 Concept
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+