2016 ಆಟೋ ಎಕ್ಸ್‌ಪೋ; ಗೇರ್ ಬದಲಾಯಿಸಿದ ಹೋಂಡಾ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳಲ್ಲಿ ನಡೆಯಲಿರುವ ಪ್ರತಿಷ್ಠಿತ 2016 ಆಟೋ ಎಕ್ಸ್‌ಪೋ ವಾಹನ ಪ್ರದರ್ಶನ ಮೇಳಕ್ಕೆ ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಸಿಐಎಲ್) ಸಂಪೂರ್ಣವಾಗಿ ಸಿದ್ಧಗೊಂಡಿದೆ.
Also Read: 2016 ಆಟೋ ಎಕ್ಸ್‌ಪೋದಲ್ಲಿ ಬರಲಿರುವ ಎಸ್‌ಯುವಿಗಳು ಮುಂದಕ್ಕೆ ಓದಿ
ಫೆಬ್ರವರಿ ತಿಂಗಳಲ್ಲಿ ಆಯೋಜನೆಯಾಗರುವ ಆಟೋ ಎಕ್ಸ್ ಪೋದ ಮೊದಲೆರಡು ದಿನ (ಫೆ. 03 ಹಾಗೂ 04) ಮಾಧ್ಯಮಗಳಿಗೆ ಮೀಸಲಾಗಿದ್ದು, ಫೆಬ್ರವರಿ 05ರಿಂದ 09ರ ವರೆಗೆ ಸಾರ್ವಜನಿಕರಿಗೆ ತೆರೆದುಕೊಳ್ಳಲಾಗುವುದು.

ಗ್ರೇಟರ್ ನೋಯ್ಡಾ ಇಂಡಿಯಾ ಎಕ್ಸ್ ಪೋ ಮಾರ್ಟ್ ನಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋಗೆ ಸಂಪೂರ್ಣ ಪೂರ್ವ ತಯಾರಿಯನ್ನು ನಡೆಸಿರುವ ಹೋಂಡಾ, ತನ್ನ ನೂತನ ಶ್ರೇಣಿಯ ವಾಹನಗಳನ್ನು ಪ್ರದರ್ಶಿಸಲಿದೆ.

ನಿರೀಕ್ಷೆಯಂತೆಯೇ ಹೊಸ ಪೀಳಿಗೆಯ ಕ್ರಾಸೋವರ್ ಉಪಯುಕ್ತ ವಾಹನ ಹೋಂಡಾ ಬಿಆರ್‌ವಿ ಇದೇ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.

ಈ ಕ್ರೀಡಾ ಬಳಕೆಯ ವಾಹನವು ದೃಢವಾದ ವಿನ್ಯಾಸ, ಕ್ರೀಡಾತ್ಮಕ ಸಾನಿಧ್ಯ ಹಾಗೂ ಹ್ಯಾಂಡ್ಲಿಂಗ್‌ನ ಸಂಯೋಜನೆಯಾಗಿದ್ದಲ್ಲದೆ ಹೆಚ್ಚು ಸ್ಥಳಾವಕಾಶಯುಕ್ತ ಉಪಯುಕ್ತ ವಾಹನವೆನಿಸಲಿದೆ.

ಇದೇ ಸಂದರ್ಭದಲ್ಲಿ ಹೊಸ ತಲೆಮಾರಿನ ಹೋಂಡಾ ಅಕಾರ್ಡ್ ಪ್ರೀಮಿಯಂ ಸೆಡಾನ್ ಕಾರು ಸಹ ಪ್ರದರ್ಶನ ಕಾಣಲಿದೆ. ನಿಕಟ ಭವಿಷ್ಯದಲ್ಲೇ ಇವೆರಡು ಮಾದರಿಗಳು ದೇಶದ ಮಾರುಕಟ್ಟೆಯಲ್ಲಿ ನಿರ್ಣಾಯಕವೆನಿಸಲಿದೆ.

'ಆಕ್ಸೆಲೇಟರ್ ವಿತ್ ಹೋಂಡಾ' ಎಂಬ ಧ್ಯೇಯ ವಾಕ್ಯದೊಂದಿಗೆ ಆಟೋ ಎಕ್ಸ್ ಪೋಗೆ ಕಣಕ್ಕಿಳಿಯಲಿರುವ ಹೋಂಡಾ, ಭವಿಷ್ಯದಲ್ಲಿ ದೇಶದಲ್ಲಿ ಬಿಡುಗಡೆಯಾಗಲಿರುವ ಕಾನ್ಸೆಪ್ಟ್ ಮಾದರಿಗಳನ್ನು ಪರಿಚಯಿಸಲಿದೆ.

2016 ಆಟೋ ಎಕ್ಸ್‌ಪೋ - ಹೋಂಡಾ ಹೈಲೈಟ್ಸ್
- ನ್ಯಾಷನಲ್ ಪ್ರೀಮಿಯಂ: ಹೋಂಡಾ ಬಿಆರ್‌ವಿ
- ಕಾನ್ಸೆಪ್ಟ್ ಮಾದರಿಗಳು: RC213V ನಿಯಂತ್ರಿತ ಹೋಂಡಾ ಪ್ರೊಜೆಕ್ಟ್ 2 ಮತ್ತು 4, ಹೋಂಡಾ ಜಾಝ್ ರೇಸಿಂಗ್ ಕಾನ್ಸೆಪ್ಟ್
- ನಿರ್ಮಾಣ ಮಾದರಿಗಳು: ಬ್ರಿಯೊ, ಜಾಝ್, ಅಮೇಜ್, ಸಿಟಿ, ಮೊಬಿಲಿಯೊ, ಸಿಆರ್‌ವಿ
- ರೇಸಿಂಗ್ ಮೆಷಿನ್: ಮೆಕ್ ಲ್ಯಾರೆನ್ ಹೋಂಡಾ ಎಂಪಿ4-30
- ಪ್ರದರ್ಶನ ಮಾದರಿಗಳು: ಹೋಂಡಾ ಅಕಾರ್ಡ್, ಎಎಸ್‌ಐಎಂಒ (Advanced Step in Innovative Mobility), ಗೋಲ್ಡ್ ವಿಂಗ್, ಮಾನವ ನಿರ್ಮಿತ ರೊಬೊಟ್

2016ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 23 ಕಾರುಗಳು


Click it and Unblock the Notifications








