ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

Written By:

ವಾಹನ ಪ್ರೇಮಿಗಳ ಕಾಯುವಿಕೆಗೆ ವಿರಾಮ ಹಾಡಿರುವ ಅತಿ ನೂತನ ಹೋಂಡಾ ಬಿಆರ್ ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ಭಾರತ ವಾಹನ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಆರಂಭಿಕ ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್: 8.75 ಲಕ್ಷ ರು.

ಡೀಸೆಲ್: 9.9 ಲಕ್ಷ ರು.

ವಿಶ್ವಾಸಾರ್ಹ ಕಾರು ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿರುವ ಹೋಂಡಾ ಈಗ ಎಂಟ್ರಿ ಲೆವೆಲ್ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೂ ಎಂಟ್ರಿ ಕೊಡುವ ಮೂಲಕ ಮೋಡಿ ಮಾಡಿದೆ.

 ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೆಟ್ರೋಲ್

 • ಹೋಂಡಾ ಬಿಆರ್-ವಿ ಇ: 8.75 ಲಕ್ಷ ರು.
 • ಹೋಂಡಾ ಬಿಆರ್-ವಿ ಎಸ್: 9.9 ಲಕ್ಷ ರು.
 • ಹೋಂಡಾ ಬಿಆರ್-ವಿ ವಿ: 10.9 ಲಕ್ಷ ರು.
 • ಹೋಂಡಾ ಬಿಆರ್-ವಿ ವಿಎಕ್ಸ್: 11.84 ಲಕ್ಷ ರು.
 • ಹೋಂಡಾ ಬಿಆರ್-ವಿ ವಿ ಸಿವಿಟಿ: 11.99 ಲಕ್ಷ ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

 • ಹೋಂಡಾ ಬಿಆರ್-ವಿ ಇ: 9.9 ಲಕ್ಷ ರು.
 • ಹೋಂಡಾ ಬಿಆರ್-ವಿ ಎಸ್: 10.99 ಲಕ್ಷ ರು.
 • ಹೋಂಡಾ ಬಿಆರ್-ವಿ ವಿ: 11.85 ಲಕ್ಷ ರು.
 • ಹೋಂಡಾ ಬಿಆರ್-ವಿ ವಿಎಕ್ಸ್: 12.9 ಲಕ್ಷ ರು.
ಹೋಂಡಾ ಬಿಆರ್-ವಿ ಪೂರ್ಣರೂಪ

ಹೋಂಡಾ ಬಿಆರ್-ವಿ ಪೂರ್ಣರೂಪ

ಅತಿ ನೂತನ ಹೋಂಡಾ ಬಿಆರ್-ವಿ ಪೂರ್ಣರೂಪ ಬೋಲ್ಡ್ ರನ್ಎಬೌಟ್ ವೆಹಿಕಲ್ (Bold Runabout Vehicle) ಎಂದಾಗಿದೆ. ಇದನ್ನು ಸಂಕ್ಷಿಪ್ತವಾಗಿ ಬಿಆರ್-ವಿ ಎಂದು ಉಚ್ಚರಿಸಲಾಗುತ್ತಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ದೃಢವಾದ ನಿಲುವು, ಅತ್ಯುತ್ತಮ ಗ್ರೌಂಡ್ ಕ್ಲಿಯರನ್ಸ್, ಪವರ್ ಫುಲ್ ನಿರ್ವಹಣೆ, ನಿಖರವಾದ ಮೈಲೇಜ್ ಮತ್ತು ಮೂರು ಸಾಲಿನ ಆಸನ ವ್ಯವಸ್ಥೆಯೊಂದಿಗೆ ಪ್ರೀಮಿಯಂ ಒಳಮೈ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ನೂತನ ಹೋಂಡಾ ಬಿಆರ್-ವಿ ಲಭ್ಯವಾಗಲಿದೆ. ಇದು 16 ವಾಲ್ವ್, 4 ಸಿಲಿಂಡರ್ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸಲ್ ಎಂಜಿನ್ ಪಡೆದುಕೊಂಡಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಪೆಟ್ರೋಲ್ ಆವೃತ್ತಿಯು ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಫಸ್ಟ್ ಇನ್ ಕ್ಲಾಸ್ ಸಿವಿಟಿ ಗೇರ್ (Continuously Variable Transmission) ಬಾಕ್ಸ್ ಆಯ್ಕೆಯನ್ನು ಕೊಡಲಾಗುತ್ತಿದೆ. ಅದೇ ಹೊತ್ತಿಗೆ ಅರ್ಥ್ ಡ್ರೀಮ್ ತಂತ್ರಜ್ಞಾನ ಶ್ರೇಣಿಯ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬಳಕೆಯಾಗಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಅಷ್ಟೇ ಯಾಕೆ ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್ ನಲ್ಲಿ ಆಟೋಮ್ಯಾಟಿಕ್ ಸಿವಿಟಿ ವೆರಿಯಂಟ್ ನಲ್ಲಿ ಕ್ರೀಡಾ ಕಾರಿನಿಂದ ಸ್ಪೂರ್ತಿ ಪಡೆದ ಪೆಡಲ್ ಶಿಫ್ಟ್ (paddle shift) ವ್ಯವಸ್ಥೆಯನ್ನು ಕೊಡಲಾಗುತ್ತಿದೆ. ಇದು ಚಾಲಕರಿಗೆ ಮ್ಯಾನುವಲ್ ಕಾರು ಚಾಲನೆ ಮಾಡಿದಷ್ಟೇ ಖುಷಿ ಕೊಡಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಸುರಕ್ಷತೆಗೂ ಗರಿಷ್ಠ ಆದ್ಯತೆ ಕೊಡಲಾಗಿದ್ದು, ಎಲ್ಲ ವೆರಿಯಂಟ್ ಗಳಲ್ಲೂ ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಇದರ ಜೊತೆಗೆ ಅನೇಕ ಆಕ್ಟಿವ್ ಮತ್ತು ಪ್ಯಾಸಿವ್ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ನೂತನ ಹೋಂಡಾ ಬಿಆರ್ ವಿಯಲ್ಲಿರುವ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ (4600 ಆರ್ ಪಿಎಂ) 119 ಅಶ್ವಶಕ್ತಿಯನ್ನು (6600 ಆರ್ ಪಿಎಂ) ಉತ್ಪಾದಿಸಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಅದೇ ರೀತಿ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ (1750 ಆರ್ ಪಿಎಂ) 100 ಅಶ್ವಶಕ್ತಿಯನ್ನು (3600 ಆರ್ ಪಿಎಂ) ಉತ್ಪಾದಿಸಲಿದೆ.

ಮೈಲೇಜ್

ಮೈಲೇಜ್

 • ಪೆಟ್ರೋಲ್: 15.4 ಕೀ.ಮೀ.
 • ಡೀಸೆಲ್: 21.9 ಕೀ.ಮೀ.
ಹೊರಮೈ

ಹೊರಮೈ

ಮುಂಭಾಗದಲ್ಲಿ ಅಗಲವಾದ ರಸ್ತೆ ಸಾನಿಧ್ಯ, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಫ್ರಂಟ್ ಗ್ರಿಲ್ ವಿನ್ಯಾಸ ಮತ್ತು ಎಲ್ ಇಡಿ ಪೊಸಿಷನ್ ಲ್ಯಾಂಪ್ ಗಳ ಸೇವೆಯಿರಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಮೇಲ್ಬಾಗದಲ್ಲಿ ರೂಫ್ ರೈಲ್ ಕಾರಿಗೆ ಕ್ರೀಡಾತ್ಮಕ ನಿಲುವು ತುಂಬಲಿದೆ. ಮತ್ತಷ್ಟು ಪ್ರೀಮಿಯಂ ಸ್ಪರ್ಶ ನೀಡುವುದಕ್ಕಾಗಿ ಹಿಂಬದಿಯಲ್ಲಿ ಕನೆಕ್ಟಡ್ ಟೈಲ್ ಲೈಟ್ ಡಿಸೈನ್ ಜೊತೆ ಎಲ್ ಇಡಿ ಗೈಡ್ ಲ್ಯಾಂಪ್ ಕೊಡಲಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಇವೆಲ್ಲದರ ಹೊರತಾಗಿ ದೇಶದ ಯಾವುದೇ ರಸ್ತೆ ಪರಿಸ್ಥಿತಿಗೆ ಹೊಂದಿಕೆಯಾಗುವ ರೀತಿಯಲ್ಲಿ ಎಲ್ಲ ಹೊಸತನದ 16 ಇಂಚುಗಳ ಅಲಾಯ್ ಚಕ್ರಗಳನ್ನು ಒದಗಿಸಲಾಗಿದೆ.

ಒಳಮೈ

ಒಳಮೈ

ಕಾರಿನೊಳಗೆ ಸ್ಪೋರ್ಟಿ ಆಲ್ ಬ್ಲ್ಯಾಕ್ ಕಲರ್ ಥೀಮ್ ಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಭವಿಷ್ಯತ್ತಿನ ಡ್ಯಾಶ್ ಬೋರ್ಡ್ ವಿನ್ಯಾಸ, ಉನ್ನತ ಗುಣಮಟ್ಟದ ಉಪಕರಣ, ಆರಾಮದಾಯಕ ಮತ್ತು ಹೆಚ್ಚು ಸ್ಥಳಾವಕಾಶಯುಕ್ತ ಮೂರು ಸಾಲುಗಳ ಆಸನ ವ್ಯವಸ್ಥೆಯಿರಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಪ್ರೀಮಿಯಂ ಒಳಮೈಗೆ ಮತ್ತಷ್ಟು ಮೆರಗನ್ನು ತುಂಬುವನ ನಿಟ್ಟಿನಲ್ಲಿ ಸಿಲ್ವರ್ ಆಸೆಂಟ್, ಕೂಲ್ ಮೆಶ್ ಡಿಸೈನ್, ಮತ್ತು ಇನ್ಸ್ಟ್ರುಮೆಂಟ್ ಪ್ಯಾನಲ್ ನಲ್ಲಿ ಪಿಯಾನೊ ಬ್ಲ್ಯಾಕ್ ಫಿನಿಶ್ ಕೊಡಲಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಬಹು ಮಾಹಿತಿ ಪರದೆಯ ಜೊತೆ ತ್ರಿಡಿ ಸ್ಪೀಡೋಮೀಟರ್ ಕಾರಿಗೆ ಕ್ರೀಡಾತ್ಮಕ ಅನುಭವ ನೀಡಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಇನ್ನುಳಿದಂತೆ ಬಹು ಪರದೆಯ ಲೆಥರ್ ಹೋದಿಕೆಯ ಸೀಟು, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ಲೆಥರ್ ಗೇರ್ ನಾಬ್, ಲೆಥರ್ ಡೋರ್ ಆರ್ಮ್ ರೆಸ್ಟ್ ಮತ್ತಷ್ಟು ಆಕರ್ಷಣೆಯನ್ನು ತುಂಬಲಿದೆ.

ತಂತ್ರಜ್ಞಾನ

ತಂತ್ರಜ್ಞಾನ

ಪುಶ್ ಬಟನ್ ಸ್ಟ್ಯಾರ್ಟ್ ಜೊತೆ ಸ್ಮಾರ್ಟ್ ಎಂಟ್ರಿ, ಇಂಟೇಗ್ರೇಟಡ್ ಬ್ಲೂಟೂತ್ ಆಡಿಯೋ ಸಿಸ್ಟಂ ಜೊತೆ ಹ್ಯಾಂಡ್ಸ್ ಫ್ರಿ ಟೆಲಿಫೋನ್ (ಎಚ್‌ಎಫ್ ಟಿ), ಆಡಿಯೋಗಾಗಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಡೆಯ ರಿಯರ್ ವ್ಯೂ ಮಿರರ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಬಹು ಮಾಹಿತಿ ಪರದೆ (ಎಂಐಡಿ)

ಬಹು ಮಾಹಿತಿ ಪರದೆ (ಎಂಐಡಿ)

ಬಹು ಮಾಹಿತಿ ಪರದೆಯ ಸಹಾಯದಿಂದ ಚಾಲನೆ ವೇಳೆಯಲ್ಲೇ ಚಾಲನಾ ದೂರ, ಸರಾಸರಿ ಇಂಧನ ಕ್ಷಮತೆ, ತಾಪಮಾನ ಮತ್ತು ಸಮಯ ಮುಂತಾದ ಅಗತ್ಯ ಮಾಹಿತಿಗಳನ್ನು ಒದಗಿಸಲಿದೆ. ಇಕೊ ಲ್ಯಾಂಪ್ ನೆರವಿನಿಂದ ಇಂಧನ ಕ್ಷಮತೆಯ ಬಗ್ಗೆ ಮಾಹಿತಿ ದೊರಕಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಮ್ಯಾನ್ ಮ್ಯಾಕ್ಸಿಮಮ್ ಮೆಷಿನ್ ಮಿನಿಮಮ್ ಕಾನ್ಸೆಪ್ಟ್ ತಳಹದಿಯಲ್ಲಿ ಹೋಂಡಾ ಬಿಆರ್ ವಿ ನಿರ್ಮಿಸಲಾಗಿದೆ. ಇದರಂತೆ ಗರಿಷ್ಠ ಹೆಡ್ ರೂಂ, ಲೆಗ್ ರೂಂ ಮತ್ತು ಮೊಣಕಾಲು ಸ್ಥಳಾವಕಾಶವನ್ನು ಕೊಡಲಾಗಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

 • ಉದ್ದ: 4456
 • ಅಗಲ: 1735
 • ಎತ್ತರ: 1666
 • ಚಕ್ರಾಂತರ: 2662
ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಎರಡನೇ ಸಾಲಿನಲ್ಲಿರುವ 60:40 ಅನುಪಾತದ ವಿಭಜಿತ ಸೀಟುಗಳು ಸ್ಲೈಡ್ ಮತ್ತು ಒರಗಲು ನೆರವಾಗಲಿದೆ. ಅಂತೆಯೇ ಮೂರನೇ ಸಾಲಿನಲ್ಲಿ 50:50 ವಿಭಜಿತ ಮಡಚಬಹುದಾದ ಸೀಟು ಆಯ್ಕೆಯನ್ನು ಕೊಡಲಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

223 ಲೀಟರ್ ಡಿಕ್ಕಿ ಜಾಗವನ್ನು ಹೊಂದಿರುವ ಹೋಂಡಾ ಬಿಆರ್-ವಿ ಮೂರನೇ ಸಾಲಿನ ಸೀಟನ್ನು ಮಡಚಿದಾಗ 691 ಲೀಟರ್ ಗಳಷ್ಟು ಲಗ್ಗೇಜ್ ಜಾಗವನ್ನು ಪಡೆಯಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಎರಡನೇ ಸಾಲಿನ ಸೀಟಿನಲ್ಲಿರುವ ಒನ್ ಟಚ್ ಟಂಬಲ್ ವ್ಯವಸ್ಥೆಯ ಮೂಲಕ ಮೂರನೇ ಸಾಲಿಗೆ ಹೋಗಲು ಮತ್ತು ಹೊರಬರಲು ಸುಲಭವಾಗಿ ನಿರ್ವಹಿಸಬಹುದಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಇವೆಲ್ಲದರ ಹೊರತಾಗಿ ಎಲ್ಲ ಮೂರು ಸಾಲಿನಲ್ಲೂ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಕೊಡಲಾಗುತ್ತಿದೆ. ಹಿಂಬದಿಯಲ್ಲಿ ರೂಫ್ ಮೌಂಟೆಡ್ ಎಸಿ ಸೇವೆಯು ಇರಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಹೋಂಡಾ ಬಿಆರ್-ವಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ 5.3 ಮತ್ತು 5.5 ಮೀಟರ್ ಗಳಷ್ಟು ಟರ್ನಿಂಗ್ ರೇಡಿಯಸ್ ಕಾಪಾಡಿಕೊಂಡಿದೆ. ಈ ಮುಖಾಂತರ ನಗರ ಪ್ರದೇಶದ ಚಾಲನೆಗೂ ಸೂಕ್ತವೆನಿಸಲಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಹೋಂಡಾ ಬಿಆರ್ ವಿನಲ್ಲಿರುವ ಸುರಕ್ಷಿತ ದೇಹ ಸಂರಚನೆಯು (Advanced Compatibility Engineering) ಅತ್ಯುತ್ತಮ ರಕ್ಷಣೆಯನ್ನು ಒದಗಿಸಲಿದೆ. ಇನ್ನು ಮುಖ್ಯ ಭಾಗಗಳಲ್ಲಿ ಅಧಿಕ ಕರ್ಷಕ ಸ್ಟೀಲ್ ಬಳಕೆ ಮಾಡಲಾಗಿದೆ.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಎಲ್ಲ ವೆರಿಯಂಟ್ ಗಳಲ್ಲೂ ಫ್ರಂಟ್ ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಪ್ರಿಟೆನ್ಷನರ್ ಸೀಟ್ ಬೆಲ್ ಜೊತೆ ಲೋಡ್ ಲಿಮಿಟರ್ ಸೇವೆಗಳಿರಲಿದೆ. ಎಲ್ಲ ಡೀಸೆಲ್ ವೆರಿಯಂಟ್ ಗಳಲ್ಲೂ ಎಬಿಎಸ್ ಮತ್ತು ಇಬಿಡಿ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗುವುದು.

ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ಅಂದ ಹಾಗೆ ನಾಲ್ಕು ವೆರಿಯಂಟ್ ಗಳಲ್ಲಿ ಹೋಂಡಾ ಬಿಆರ್ ವಿ ಲಭ್ಯವಾಗಲಿದೆ. ಅವುಗಳೆಂದರೆ ಇ, ಎಸ್, ವಿ ಮತ್ತು ವಿಎಕ್ಸ್. ಇವುಗಳ ಪೈಕಿ ಸಿವಿಟಿ ಆಯ್ಕೆಯೂ ಪೆಟ್ರೋಲ್ ವಿ ವೆರಿಯಂಟ್ ನಲ್ಲಿ ದೊರಕಲಿದೆ.

 ಆರು ಆಕರ್ಷಕ ಬಣ್ಣಗಳು

ಆರು ಆಕರ್ಷಕ ಬಣ್ಣಗಳು

 • ಕಾರ್ನೆಲಿಯನ್ ರೆಡ್ ಪಿಯರ್ಲ್,
 • ವೈಟ್ ಓರ್ಕಿಡ್ ಪಿಯರ್ಲ್,
 • ಅಲಬಾಸ್ಟರ್ ಸಿಲ್ವರ್ ಮೆಟ್ಯಾಲಿಕ್,
 • ಗೋಲ್ಡನ್ ಬ್ರೌನ್ ಮೆಟ್ಯಾಲಿಕ್,
 • ಅರ್ಬನ್ ಟೈಟಾನಿಯಂ ಮೆಟ್ಯಾಲಿಕ್,
 • ಅಲಬಾಸ್ಟರ್ ಸಿಲ್ವರ್ ಮೆಟ್ಯಾಲಿಕ್,
 • ಟಫೆಟಾ ವೈಟ್
ಕಾಯುವಿಕೆಗೆ ಅಂತ್ಯ; ಹೋಂಡಾ ಬಿಆರ್‌ವಿ ಮಿನಿ ಎಸ್‌ಯುವಿ ಎಂಟ್ರಿ

ನೂತನ ಬಿಆರ್ ವಿ ಕಾರಿಗೆ ಮೂರು ವರ್ಷಗಳ ಅನಿಯಮಿತ ಕೀ.ಮೀ.ಗಳ ವಾರಂಟಿ ಮತ್ತು ಎರಡು ವರ್ಷಗಳ ಐಚ್ಛಿಕ ವರ್ಧಿತ ವಾರಂಟಿ ಸೇವೆಯನ್ನು ಹೋಂಡಾ ಸಂಸ್ಥೆ ನೀಡುತ್ತಿದೆ.

English summary
Honda BR-V Rumbles Into India, Prices Start At Rs. 8.75 Lakhs
Story first published: Thursday, May 5, 2016, 17:14 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark