ಹೋಂಡಾ ಅಕಾರ್ಡ್ ಹೈಬ್ರಿಡ್ ಕಾರು ಬಿಡುಗಡೆ; ಬೆಲೆ ಕೊಂಚ ದುಬಾರಿ!
ಭಾರತದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಹೋಂಡಾ ಅತಿ ನೂತನ ಅಕಾರ್ಡ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಿದೆ.
ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಅಕಾರ್ಡ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 37 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ನಮ್ಮ ಬೆಂಗಳೂರಿನ ಬೆಲೆ ಎಷ್ಟು ಗೊತ್ತಾ? ಸಂಪೂರ್ಣ ಮಾಹಿತಿಗಾಗಿ ಲೇಖನದತ್ತ ಕಣ್ಣಾಯಿಸಿರಿ.

ಭಾರತದಲ್ಲಿ ಒಂಬತ್ತನೇ ತಲೆಮಾರಿನ ಅಕಾರ್ಡ್ ಹೈಬ್ರಿಡ್ ಕಾರು ಪ್ರವೇಶವಾಗಿದೆ. ಮೊದಲನೇ ತಲೆಮಾರಿನ ಅಕಾರ್ಡ್ ಕಾರು 2001ರಲ್ಲಿ ಬಿಡುಗಡೆಯಾಗಿತ್ತು.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ನೂತನ ಅಕಾರ್ಡ್ ಕಾರು ಭಾರತಕ್ಕೆ ಕಾಲಿಟ್ಟಿದ್ದು, ಇದೇ ಕಾರಣಕ್ಕಾಗಿ ಕೊಂಚ ದುಬಾರಿಯೆನಿಸಿದೆ.

ತನ್ನ ಪ್ರತಿಸ್ಪರ್ಧಿ ಟೊಯೊಟಾ ಅಕಾರ್ಡ್ ಕಾರನ್ನು ಹೋಲಿಸಿದಾಗ ನೂತನ ಅಕಾರ್ಡ್ ಹೈಬ್ರಿಡ್ ಕಾರು ಸರಿ ಸುಮಾರು ಆರು ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ನಮ್ಮ ಬೆಂಗಳೂರಿನಲ್ಲಿ ನೂತನ ಹೋಂಡಾ ಅಕಾರ್ಡ್ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 40.57 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅದೇ ಹೊತ್ತಿಗೆ ಮುಂಬೈ ಎಕ್ಸ್ ಶೋ ರೂಂ ಬೆಲೆ 40.14 ಲಕ್ಷ ರು.ಗಳಾಗಿದೆ.

ನೂತನ 2.0 ಲೀಟರ್ 4 ಸಿಲಿಂಡರ್ ನೈಸರ್ಗಿಕ ಚೋಷಿತ ಆಂತರಿಕ ದಹನಕಾರಿ ಎಂಜಿನ್ ಬಳಕೆಯಾಗಲಿದ್ದು, ಜೊತೆಗೆ 1.3 ಕಿಲೋವ್ಯಾಟ್/ಗಂಟೆ ಲಿಥಿಯಂ ಇಯಾನ್ ಬ್ಯಾಟರಿ ಇರಲಿದೆ.

ಇದರ ಪೆಟ್ರೋಲ್ ಎಂಜಿನ್ 175 ಎನ್ ಎಂ ತಿರುಗುಬಲದಲ್ಲಿ 145 ಅಶ್ವಶಕ್ತಿಯನ್ನು ಎಲೆಕ್ಟ್ರಿಕ್ ಮೋಟಾರು 315 ಎನ್ ಎಂ ತಿರುಗುಬಲದಲ್ಲಿ 184 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆರಡು ಜಂಟಿಯಾಗಿ ಬರೋಬ್ಬರಿ 212 ಅಶ್ವಶಕ್ತಿ ಉತ್ಪಾದಿಸಲಿದೆ.

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗದಲ್ಲಿ ಕ್ರೀಡಾತ್ಮಕ ಬಂಪರ್ ಜೊತೆ ಕ್ರೋಮ್ ಹಾಗೂ ಕಪ್ಪು ಗ್ರಿಲ್ ಮತ್ತು ಸಂಪೂರ್ಣ ಎಲ್ ಇಡಿ ಹೆಡ್ ಲೈಟ್ ಸೇವೆಯಿರಲಿದೆ.

ಡೇಟೈಮ್ ರನ್ನಿಂಗ್ ಲೈಟ್ಸ್, ಎಲ್ ಇಡಿ ಫಾಗ್ ಲ್ಯಾಪ್, 18 ಇಂಚುಗಳ ಟು ಟೋನ್ ಡೈಮಂಡ್ ಕಟ್ ಅಲಾಯ್ ವೀಲ್ ಇತರ ಪ್ರಮುಖ ಹೊರಮೈ ವೈಶಿಷ್ಟ್ಯಗಳಾಗಿವೆ.

ಕಾರಿನ ಹಿಂದುಗಡೆ ನಯವಾದ ಬಂಪರ್, ಎಲ್ ಇಡಿ ಸಂಯೋಜಿತ ಟೈಲ್ ಲ್ಯಾಂಪ್ ಹಾಗೂ ಬೂಟ್ ಸ್ಪಾಯ್ಲರ್ ಜೋಡಿಸಲಾಗಿದೆ.

ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಸುತ್ತುವರಿದುಕೊಂಡಿರು ನೀಲಿ ಬಣ್ಣವು ಹೋಂಡಾ ಹೈಬ್ರಿಡ್ ಕಾರಿನ ಸ್ವಭಾವವನ್ನು ತೋರಿಸುತ್ತದೆ.

ಒಟ್ಟು ನಾಲ್ಕು ಮೈ ಬಣ್ಣದಲ್ಲಿ ಹೋಂಡಾ ಅಕಾರ್ಡ್ ಲಭ್ಯವಾಗಲಿದೆ. ಅವುಗಳೆಂದರೆ ವೈಟ್ ಓರ್ಕಿಡ್ ಪಿಯರ್ಲ್, ಲೂನಾರ್ ಸಿಲ್ವರ್ ಮೆಟ್ಯಾಲಿಕ್, ಮಾರ್ಡನ್ ಸ್ಟೀಲ್ ಮೆಟ್ಯಾಲಿಕ್ ಮತ್ತು ಕ್ರೈಸ್ಟಲ್ ಬ್ಲ್ಯಾಕ್ ಪಿಯರ್ಲ್.

ಕಾರಿನೊಳಗೆ ಎರಡು ಸೆಂಟ್ರಲ್ ಸ್ಕ್ರೀನ್ ಗಳಿರಲಿದೆ. ಈ ಪೈಕಿ ಒಂದು ಇನ್ಪೋಟೈನ್ಮೆಂಟ್ ಸಿಸ್ಟಂಗಾಗಿದ್ದರೆ ಮಗದೊಂದು ಎಂಜಿನ್ ಮೋಡ್ ಗಳನ್ನು ತೋರಿಸಲಿದೆ.

ಇನ್ನುಳಿದಂತೆ ಪ್ರಯಾಣಿಕ ಬದಿಯ ಕ್ಯಾಮೆರಾ, ಎರಡು ಹಂತದ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸನ್ ರೂಫ್, ಆಪಲ್ ಕಾರು ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಇತ್ಯಾದಿ ವ್ಯವಸ್ಥೆಗಳಿರಲಿದೆ.


Click it and Unblock the Notifications