ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

By Nagaraja

ಕಳೆದ 10 ತಿಂಗಳಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಒಂದೇ ಒಂದಾದರೂ ಮೊಬಿಲಿಯೊ ಕಾರನ್ನು ನಿರ್ಮಿಸಿಲ್ಲ. ಇದು ಭಾರತದಲ್ಲಿ ಹೋಂಡಾ ಮೊಬಿಲಿಯೊ ನೆಲೆಗೆ ಅಸ್ಥಿರತೆಯ ಭೀತಿಯೊಡ್ಡುತ್ತಿದೆ. ಕಳಪೆ ಬೇಡಿಕೆಯ ಹಿನ್ನಲೆಯಲ್ಲಿ ಹೋಂಡಾ ಮೊಬಿಲಿಯೊ ಬಹು ಬಳಕೆಯ ವಾಹನವನ್ನು ನಿರ್ಮಿಸದಿರಲು ಹೋಂಡಾ ನಿರ್ಧರಿಸಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡು ಎರಡು ವರ್ಷಗಳ ಹಿಂದೆ ಹೋಂಡಾ ಮೊಬಿಲಿಯೊ ಬಹು ಬಳಕೆಯ ವಾಹನವು ಭಾರತೀಯ ವಾಹನ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆದರೆ ಇತರೆಲ್ಲ ಹೋಂಡಾ ಕಾರುಗಳನ್ನು ಹೋಲಿಸಿದಾಗ ಕೆಟ್ಟ ಅನುಭವ ಮೊಬಿಲಿಯೊಗೆ ಎದುರಾಗಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಭಾರತೀಯ ವಾಹನ ಅಧ್ಯಯನ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಕಳೆದ ವರ್ಷ ನವೆಂಬರ್ ತಿಂಗಳ ಬಳಿಕ ಹೋಂಡಾ ಮೊಬಿಲಿಯೊ ನಿರ್ಮಾಣವನ್ನು ಸ್ಧಗಿತಗೊಳಿಸಲಾಗಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಶಾಶ್ವತವಾಗಿ ಹೋಂಡಾ ಮೊಬಿಲಿಯೊ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿಲ್ಲ. ಬೇಡಿಕೆಯ ಕುಂದಿರುವುದರಿಂದ ಉತ್ಪಾದನೆಗೆ ತಾತ್ಕಾಲಿಕ ಬ್ರೇಕ್ ಹಾಡಲಾಗಿದೆ. ಆದರೂ ಪರಿಸ್ಥಿತಿ ಇದೇ ರೀತಿ ಮುಂದುವರಿದ್ದಲ್ಲಿ ಮತ್ತಷ್ಟು ಹದೆಗೆಡಲಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಬಿಡುಗಡೆಯಾದ ತಿಂಗಳಲ್ಲಿ ಹೋಂಡಾ ಮೊಬಿಲಿಯೊ 3,400 ಯುನಿಟ್ ಗಳಷ್ಟು ಮಾರಾಟವನ್ನು ಕಾಪಾಡಿಕೊಂಡಿದ್ದಲ್ಲಿ ಬಳಿಕ ಇದು ಬರಿ 200 ಯುನಿಟ್ ಗಳಿಗೆ ಇಳಿದಿದೆ. ಇದರಿಂದಾಗಿ ಪರಿಸ್ಥಿತಿ ಇನ್ನು ಕೆಲವು ತಿಂಗಳುಗಳ ಕಾಲ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಇನ್ನೊಂದೆಡೆ ಹೋಂಡಾ ಮೊಬಿಲಿಯೊ ಮಾರಾಟಕ್ಕೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು 50,000 ರು.ಗಳಿಂದ ಒಂದು ಲಕ್ಷ ರುಪಾಯಿಗಳ ವರೆಗೆ ಆಫರುಗಳನ್ನು ನೀಡುತ್ತಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರ ಬೊಲೆರೊ, ಷೆವರ್ಲೆ ತವೆರಾ ಮುಂತಾದ ಮಾದರಿಗಳಿಗೆ ಹೋಂಡಾ ಮೊಬಿಲಿಯೊ ಪ್ರತಿಸ್ಪರ್ಧಿಯಾಗಿತ್ತು. ಆದರೆ ವಾಹನ ಪ್ರೇಮಿಗಳ ಮನ ಗೆಲ್ಲುವಲ್ಲಿ ಮಾತ್ರ ವಿಫಲವಾಗಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಟೊಯೊಟಾ ಇನ್ನೋವಾ ಅಥವಾ ಟಾಟಾ ಇಂಡಿಕಾಗೆ ಹೋಲಿಸಿದಾಗ ಟ್ಯಾಕ್ಸಿ ವಿಭಾಗದಲ್ಲಿ ಗಮನ ಸೆಳೆಯದೇ ಹೋಗಿರುವುದು ಸಹ ಹೋಂಡಾಗೆ ಹಿನ್ನಡೆಯಾಗಿ ಪರಿಣಮಿಸಿದೆ. ಹೋಂಡಾ ವೈಯಕ್ತಿಕ ಖರೀದಿಗಾರರಲ್ಲಿ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಉಪಯುಕ್ತ ವಾಹನಗಳಿಗೆ ಬೇಡಿಕೆಯಿದ್ದರೂ ವೈಯಕ್ತಿಕ ಸಂಚಾರದ ಎಂಪಿವಿ ವಾಹನಗಳಿಗೆ ಬೇಡಿಕೆ ಕುಸಿಯುತ್ತಿದೆ. ಇದರಿಂದಾಗಿ ಹ್ಯುಂಡೈ ಹೆಕ್ಸಾ ಹಾಗೂ ಜನರಲ್ ಮೋಟಾರ್ಸ್ ತನ್ನ ಷೆವರ್ಲೆ ಸ್ಪಿನ್ ಬಿಡುಗಡೆ ಯೋಜನೆಯನ್ನು ಮುಂದೂಡಿತ್ತು.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಭಾರತದತ್ತ ದೃಷ್ಟಿ ಹಾಯಿಸಿದಾಗ ಹೋಂಡಾ ಪಾಲಿಗೆ ಮೊಬಿಲಿಯೊ ಜೊತೆಗೆ ಬ್ರಿಯೊ, ಸಿವಿಕ್, ಬಿಆರ್-ವಿ ಮತ್ತು ಸಿಆರ್-ವಿ ಕಹಿ ಅನುಭವನ್ನು ನೀಡಿದ್ದರೆ ಸಿಟಿ, ಅಮೇಜ್ ಹಾಗೂ ಜಾಝ್ ಯಶಸ್ವಿ ಮಾದರಿಗಳೆನಿಸಿಕೊಂಡಿದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹೋಂಡಾ ಲಭ್ಯವಿರುತ್ತದೆ. ಇದರ 1.5 ಲೀಟರ್ ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿಯನ್ನು ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿಯನ್ನು ನೀಡುತ್ತದೆ.

ಕಳೆದ 10 ತಿಂಗಳಿಂದ ಹೋಂಡಾ ಮೊಬಿಲಿಯೊ ತಟಸ್ಥ

ಈ ಎರಡು ಎಂಜಿನ್ ಗಳು ಐದು ಸ್ಪೀಡ್ ಗೇರ್ ಬಾಕ್ಸ್ ನಿಯಂತ್ರಿಸುತ್ತದೆ. ಹಾಗೆಯೇ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ 17.3 ಹಾಗೂ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

More from DriveSpark

Article Published On: Tuesday, October 4, 2016, 12:11 [IST]
English summary
Is It The End Of The Line For The Honda Mobilio In India?
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+