ಹ್ಯುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್ ಕಾರು ಬಿಡುಗಡೆ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ತನ್ನ ಜನಪ್ರಿಯ ಕ್ರೆಟಾ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಅತಿ ನೂತನ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 12.86 ಲಕ್ಷ ರು. (ದೆಹಲಿ ಎಕ್ಸ್ ಶೋ ರೂಂ)
ನೂತನ ಹ್ಯುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ 1.6 ಲೀಟರ್ ವಿಟಿವಿಟಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹ್ಯುಂಡೈ ಕ್ರೆಟಾ ಎಸ್ ಎಕ್ಸ್ ಪ್ಲಸ್ ವೆರಿಯಂಟ್ ನಲ್ಲಿ ಪೆಟ್ರೋಲ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆಯಾಗಲಿದೆ.

ಇದು ಆಡಿಯೋ ವಿಷ್ಯುವಲ್ ನೇವಿಗೇಷನ್ (ಎವಿಎನ್), ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್ ಇಡಿ ಪೊಸಿಷನಿಂಗ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸೆನ್ಸಾರ್, ಸ್ಮಾರ್ಟ್ ಕೀ ಪುಶ್ ಬಟನ್, 17 ಇಂಚುಗಳ ಅಲಾಯ್ ವೀಲ್, ಸ್ಟೀರಿಂಗ್ ವೀಲ್ ನಲ್ಲಿ ಲೆಥರ್ ಹೋದಿಕೆ ಮತ್ತು ಆಟೋಮ್ಯಾಟಿಕ್ ತಾಪಮಾನ ನಿಯಂತ್ರಣ ವ್ಯವಸ್ಥೆಯಿರಲಿದೆ.

ಭಾರತದ ವರ್ಷದ ಕಾರು ಪ್ರಶಸ್ತಿಗೆ ಅರ್ಹವಾಗಿರುವ ಹ್ಯುಂಡೈ ಕ್ರೆಟಾ ಈಗಾಗಲೇ ದೇಶದ ಅಗ್ರ ಕ್ರೀಡಾ ಬಳಕೆಯ ವಾಹನಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಈಗ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ ಪರಿಚಯಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಸುರಕ್ಷತೆಗೂ ಅತಿ ಹೆಚ್ಚಿನ ಆದ್ಯತೆ ಕೊಟ್ಟಿರುವ ಸಂಸ್ಥೆಯು ಕ್ರೆಟಾದ ಎಲ್ಲ ವೆರಿಯಂಟ್ ಗಳಲ್ಲೂ ಡ್ಯುಯಲ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

2015 ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಹ್ಯುಂಡೈ ಕ್ರೆಟಾ, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟದಲ್ಲಿದೆ. ಇದರ 1.6 ಲೀಟರ್ ವಿಟಿವಿಟಿ ಪೆಟ್ರೋಲ್ ಎಂಜಿನ್ 151 ಎನ್ ಎಂ ತಿರುಗುಬಲದಲ್ಲಿ 121 ಹಾಗೂ 1.6 ಲೀಟರ್ ಸಿಆರ್ ಡಿಐ ಡೀಸೆಲ್ ಎಂಜಿನ್ 259 ಎನ್ ಎಂ ತಿರುಗುಬಲದಲ್ಲಿ 126 ಅಶ್ವಶಕ್ತಿ ಉತ್ಪಾದಿಸಲಿದೆ. ಮಗದೊಂದು 1.4 ಲೀಟರ್ ಸಿಆರ್ ಡಿಐ ಡೀಸೆಲ್ ಎಂಜಿನ್ 220 ಎನ್ ಎಂ ತಿರುಗುಬಲಲ್ಲಿ 89 ಅಶ್ವಶಕ್ತಿಯನ್ನು ನೀಡಲಿದೆ. ಅಲ್ಲದೆ ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದಿದೆ.

ಹ್ಯುಂಡೈನ ಫ್ಯೂಯಿಡಿಕ್ 2.0 ವಿನ್ಯಾಸ ತಂತ್ರಗಾರಿಕೆಯನ್ನು ನಿರ್ಮಾಣವಾಗಿರುವ ಕ್ರೆಟಾ ಎಂಟು ತಿಂಗಳ ಅವಧಿಯಲ್ಲೇ ಒಂದು ಲಕ್ಷ ಬುಕ್ಕಿಂಗ್ ದಾಟಿದೆ. ಬಲ್ಲ ಮೂಲಗಳ ಪ್ರಕಾರ ಹ್ಯುಂಡೈ ಕ್ರೆಟಾ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ ಕಾಯುವಿಕೆ ಅವಧಿ 10 ತಿಂಗಳಾಗಿರಲಿದೆ.

ಬೆಲೆ ಮಾಹಿತಿ - ಪೆಟ್ರೋಲ್
- ಬೇಸ್: 9.15 ಲಕ್ಷ ರು.
- ಎಸ್ (ಮ್ಯಾನುವಲ್): 10.32 ಲಕ್ಷ ರು.
- ಎಸ್ ಎಕ್ಸ್ ಪ್ಲಸ್ (ಮ್ಯಾನುವಲ್): 11.84 ಲಕ್ಷ ರು.
- ಎಸ್ ಎಕ್ಸ್ ಪ್ಲಸ್ (ಆಟೋಮ್ಯಾಟಿಕ್): 12.86 ಲಕ್ಷ ರು.
- ಬೇಸ್: 9.99 ಲಕ್ಷ ರು.
- ಎಸ್ (ಮ್ಯಾನುವಲ್): 11.20 ಲಕ್ಷ ರು.
- ಎಸ್ ಪ್ಲಸ್ (ಮ್ಯಾನುವಲ್): 12.11 ಲಕ್ಷ ರು.
- ಎಸ್ ಎಕ್ಸ್ (ಮ್ಯಾನುವಲ್): 12.37 ಲಕ್ಷ ರು.
- ಎಸ್ ಎಕ್ಸ್ ಪ್ಲಸ್ (ಮ್ಯಾನುವಲ್): 13.36 ಲಕ್ಷ ರು.
- ಎಸ್ ಎಕ್ಸ್ ಪ್ಲಸ್ (ಆಟೋಮ್ಯಾಟಿಕ್): 14.50 ಲಕ್ಷ ರು.
- ಎಸ್ ಎಕ್ಸ್ (ಐಚ್ಛಿಕ): 14.43 ಲಕ್ಷ ರು.

ಡೀಸೆಲ್ (1.4 ಸಿಆರ್ ಡಿಐ)



Click it and Unblock the Notifications