ಹ್ಯುಂಡೈ 7 ಜನಪ್ರಿಯ ಕಾರುಗಳಿಗೆ 'ಫ್ರೀಡಂ ಸೆಲೆಬ್ರೇಷನ್ ಆಫರ್'

By Nagaraja

70ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವ ಭಾರತೀಯರಿಗೆ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, 'ಫ್ರೀಡಂ ಸೆಲೆಬ್ರೇಷನ್ ಆಫರ್' ಘೋಷಿಸುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಭಾರತದಲ್ಲಿ ಮಾರಾಟದಲ್ಲಿರುವ ಏಳು ಜನಪ್ರಿಯ ಆವೃತ್ತಿಗಳಿಗೆ ಹ್ಯುಂಡೈ ಸೆಲೆಬ್ರೇಷನ್ ಆಫರ್ ಲಭ್ಯವಾಗಲಿದೆ. ಇದನ್ನು ಮೂರು ವಿಭಾಗಗಳಲ್ಲಾಗಿ ಹ್ಯುಂಡೈ ವಿಂಗಡಿಸಿದ್ದು, ಆಗಸ್ಟ್ 25ರ ವರೆಗೆ ಮಾತ್ರ ಆಫರ್ ಅನ್ವಯವಾಗಲಿದೆ.

ಫ್ರೀಡಂ ಪ್ರಯೋಜನಗಳು

ಫ್ರೀಡಂ ಪ್ರಯೋಜನಗಳು

  • ಇಯಾನ್ ವಿಶೇಷ ಬೆಲೆ 2.99 ಲಕ್ಷ ರು.
  • ವಿಶೇಷ ಆವೃತ್ತಿ ಗ್ರಾಂಡ್ ಐ10 ಮತ್ತು ಎಕ್ಸ್ ಸೆಂಟ್
  • ಆಕರ್ಷಕ ಎಕ್ಸ್ ಚೇಂಜ್ ಪ್ರಯೋಜನಗಳು
  • ಸೆಲೆಬ್ರೇಷನ್ ಪ್ರಯೋಜನಗಳು

    ಸೆಲೆಬ್ರೇಷನ್ ಪ್ರಯೋಜನಗಳು

    • ಆಕರ್ಷಕ ನಗದು ಆಫರ್
    • ಸರ್ಕಾರಿ ಉದ್ಯೋಗಿಗಳಿಗೆ ಆಕರ್ಷಕ ಸ್ಕೀಮ್
    • ಗ್ರಾಂಡ್ ಐ10 ಮತ್ತು ವೆರ್ನಾ ಮೇಲೆ ಲಾಯಲ್ಟಿ ಬೋನಸ್
    • ವಿಶೇಷ ಪ್ರಯೋಜನಗಳು

      ವಿಶೇಷ ಪ್ರಯೋಜನಗಳು

      • ಉಚಿತ ವಿಮೆ
      • ಉಚಿತ ವರ್ಧಿತ ವಾರಂಟಿ
      • ಇಯಾನ್

        ಇಯಾನ್

        ಮಾರುತಿ ಆಲ್ಟೊ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಇಯಾನ್, 2.99 ಲಕ್ಷ ರು.ಗಳ ವಿಶೇಷ ಖರೀದಿ ಬೆಲೆಯಲ್ಲಿ ನೀಡಲಾಗುತ್ತದೆ. ಈ ಮೂಲಕ ಈ ಪೆಟ್ರೋಲ್ ಆವೃತ್ತಿ ಖರೀದಿ ವೇಳೆಯಲ್ಲಿ 50,000 ರು.ಗಳಷ್ಟು ಆಫರ್ ಗಿಟ್ಟಿಸಿಕೊಳ್ಳಬಹುದಾಗಿದೆ.

        ಐ10

        ಐ10

        ಸ್ವಲ್ಪ ಹಳೆಯದಾದ ಹ್ಯುಂಡೈ ಐ10 ಪೆಟ್ರೋಲ್ ಕಾರಿನ ಖರೀದಿ ವೇಳೆಯಲ್ಲಿ 55,000 ರು.ಗಳಷ್ಟು ಉಳಿತಾಯ ಮಾಡಬಹುದಾಗಿದೆ.

        ಗ್ರಾಂಡ್ ಐ10

        ಗ್ರಾಂಡ್ ಐ10

        ಹ್ಯುಂಡೈ ಐ10 ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೂ ಫ್ರೀಡಂ ಸೆಲೆಬ್ರೇಷನ್ ಆಫರ್ ಅನ್ವಯವಾಗಲಿದ್ದು, ಅನುಕ್ರಮವಾಗಿ 85,500 ಹಾಗೂ 93,500 ರು.ಗಳ ಆಫರ್ ನೀಡಲಾಗುತ್ತಿದೆ.

        ಎಕ್ಸ್ ಸೆಂಟ್

        ಎಕ್ಸ್ ಸೆಂಟ್

        ಹ್ಯುಂಡೈ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರಿನ ಖರೀದಿ ವೇಳೆಯಲ್ಲೂ ಗರಿಷ್ಠ ಆಫರ್ ಗಳನ್ನು ಪಡೆಯಬಹುದಾಗಿದೆ. ಹ್ಯುಂಡೈ ಎಕ್ಸ್ ಸೆಂಟ್ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಿಗೆ ಅನುಕ್ರಮವಾಗಿ 47,000 ಹಾಗೂ 57,000 ರು.ಗಳ ಆಫರ್ ನೀಡಲಾಗುತ್ತಿದೆ.

        ಎಲೈಟ್ ಐ20

        ಎಲೈಟ್ ಐ20

        ಇನ್ನು ಅತಿ ಹೆಚ್ಚು ಬೇಡಿಕೆ ಹೊಂದಿರುವ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಡೀಸೆಲ್ ಕಾರು ಖರೀದಿ ವೇಳೆಯಲ್ಲೂ ಗರಿಷ್ಠ 10,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ.

        ವೆರ್ನಾ

        ವೆರ್ನಾ

        ಪ್ರೀಮಿಯಂ ಸೆಡಾನ್ ಕಾರಾಗಿರುವ ವೆರ್ನಾ ಖರೀದಿ ವೇಳೆಯಲ್ಲಿ ಗರಿಷ್ಠ 80,000 ರು.ಗಳ ವರೆಗೆ ಆಫರ್ ನೀಡಲಾಗುತ್ತದೆ. ಪ್ರಸ್ತುತ ಆಫರ್ ವೆರ್ನಾ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಿಗೆ ಅನ್ವಯವಾಗಲಿದೆ.

        ಸಾಂಟಾ ಫೆ

        ಸಾಂಟಾ ಫೆ

        ಹ್ಯುಂಡೈನ ಪ್ರೀಮಿಯಂ ಎಸ್ ಯುವಿ ಕಾರಾಗಿರುವ ಸಾಂಟಾ ಫೆ ಡೀಸೆಲ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 1.5 ಲಕ್ಷ ರು.ಗಳ ಆಫರ್ ನೀಡಲಾಗುತ್ತದೆ.

        ಹ್ಯುಂಡೈ 7 ಜನಪ್ರಿಯ ಕಾರುಗಳಿಗೆ 'ಫ್ರೀಡಂ ಸೆಲೆಬ್ರೇಷನ್ ಆಫರ್'

        ಸ್ಯಾಂಟ್ರೊ ಹಾಗೂ ಐ10 ಕಾರುಗಳನ್ನು ಹೊಂದಿರುವ ಹ್ಯುಂಡೈ ಮಾಲಿಕರು ಗ್ರಾಂಡ್ ಐ10 ಖರೀದಿಸಲು ಬಯಸುವುದಾದ್ದಲ್ಲಿ ಹೆಚ್ಚುವರಿ ಎಕ್ಸ್ ಚೇಂಚ್ ಆಫರನ್ನು ನೀಡಲಾಗುವುದು. ವೆರ್ನಾ ಕಾರನ್ನು ಖರೀದಿಸಲು ಬಯಸುವ ಹ್ಯುಂಡೈ ಮಾಲಿಕರಿಗೂ ಪ್ರಸ್ತುತ ಎಕ್ಸ್ ಚೇಂಜ್ ಆಫರ್ ಅನ್ವಯವಾಗಲಿದೆ.

More from DriveSpark

Article Published On: Wednesday, August 17, 2016, 13:21 [IST]
English summary
Hyundai 'Freedom Celebration Offer' Available On Seven Models; Valid Until August 25, 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+