ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ಭಾರತದಲ್ಲಿ ತನ್ನದೇ ಆದ ಮಾರಾಟ ವಲಯವನ್ನು ಕಾಪಾಡಿಕೊಂಡಿದ್ದು ಗರಿಷ್ಠ ಮಾರಾಟವನ್ನು ಗುರಿಯಾಗಿರಿಸಿಕೊಂಡಿದೆ. ಈಗ ಮಾರಾಟ ವಲಯವನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿರುವ ಹ್ಯುಂಡೈ, ಆಟೋಮ್ಯಾಟಿಕ್ ಐ20 ಕಾರನ್ನು ಬಿಡುಗಡೆ ಮಾಡಲಿದೆ.

ಹ್ಯುಂಡೈ ಐ20 1.4 ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ. ಹ್ಯುಂಡೈ ಐ20 ಮ್ಯಾನುವಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಪಡೆದಿದ್ದು, 81 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

ಹ್ಯುಂಡೈ ಐ20 ಆಟೋಮ್ಯಾಟಿಕ್ ಆವೃತ್ತಿಯು ಹೋಂಡಾ ಜಾಝ್, ಮಾರುತಿ ಬಲೆನೊ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

ಅತ್ತ ಇಂಡೋನೇಷ್ಯಾ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಹ್ಯುಂಡೈ ಐ20 ಪಾದಾರ್ಪಣೆ ಮಾಡಿದೆ. ಇದಾದ ಬೆನ್ನಲ್ಲೇ ಅತಿ ಶೀಘ್ರದಲ್ಲೇ ಭಾರತಕ್ಕೂ ಕಾಲಿಡುವ ಸಾಧ್ಯತೆಯಿದೆ.

ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

ಹ್ಯುಂಡೈ ಎಲೈಟ್ ಐ20 ಎರಡು ವೆರಿಯಂಟ್ ಗಳಲ್ಲಿ ಮಾತ್ರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಭ್ಯವಾಗುವ ಸಾಧ್ಯತೆಯಿದೆ. ಇದು ಮ್ಯಾಗ್ನಾ, ಸ್ಪೋರ್ಟ್ಸ್ ಅಥವಾ ಆಸ್ಟಾ ವೆರಿಯಂಟ್ ಗಳಲ್ಲಿ ಜೋಡಣೆಯಾಗಲಿದೆ.

ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

ಮ್ಯಾನುವಲ್ ಆವೃತ್ತಿಗೆ ಹೋಲಿಸಿದಾ ಆಟೋಮ್ಯಾಟಿಕ್ ಐ20 ಸ್ವಲ್ಪ ದುಬಾರಿಯೆನಿಸಲಿದ್ದು, 6.5 ಲಕ್ಷ ರು.ಗಳಿಂದ ಪ್ರಾರಂಭವಾಗಲಿದೆ.

ಅತಿ ಶೀಘ್ರದಲ್ಲೇ ಹ್ಯುಂಡೈ ಐ20 ಆಟೋಮ್ಯಾಟಿಕ್ ಕಾರು ಬಿಡುಗಡೆ

ತನ್ನೆಲ್ಲ ಜನಪ್ರಿಯ ಮಾದರಿಗಳ ಆಟೋಮ್ಯಾಟಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವುದರಲ್ಲಿ ಕಾರ್ಯ ಮಗ್ನವಾಗಿರುವ ಹ್ಯುಂಡೈ, ತನ್ಮೂಲಕ ಗರಿಷ್ಠ ಮಾರಾಟವನ್ನು ಕಾಪಾಡಿಕೊಳ್ಳಲಿದೆ.

More from DriveSpark

Article Published On: Monday, August 29, 2016, 10:04 [IST]
English summary
Hyundai Is All Set To Launch An Automatic i20
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+