ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಹೊಸ ವರ್ಷದಿಂದ ಹ್ಯುಂಡೈ ಕಾರುಗಳು ದುಬಾರಿಯೆನಿಸಲಿದ್ದು, ಒಂದು ಲಕ್ಷ ರುಪಾಯಿಗಳ ವರೆಗೆ ಬೆಲೆ ಏರಿಕೆಯಾಗಲಿದೆ.

By Nagaraja

ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಿರ್ಮಾಣ ವೆಚ್ಚ ಗಣನೀಯವಾಗಿ ಹೆಚ್ಚಿರುವುದರಿಂದ ದೇಶದೆಲ್ಲ ಮುಂಚೂಣಿಯ ವಾಹನ ಸಂಸ್ಥೆಗಳು ಹೊಸ ವರ್ಷದಿಂದ ಬೆಲೆ ಏರಿಕೆ ನೀತಿಯನ್ನು ಅನುಸರಿಸುತ್ತಿದೆ. ಇದಕ್ಕೀಗ ದಕ್ಷಿಣ ಕೊರಿಯಾ ಮೂಲದ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ಸ್ ಇಂಡಿಯಾ ಸೇರ್ಪಡೆಗೊಂಡಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಹೊಸ ವರ್ಷದ ಸಂಭ್ರಮದ ವೇಳೆಯಲ್ಲಿ ಗ್ರಾಹಕರಿಗೆ ಶಾಕ್ ನೀಡಲಿರುವ ಹ್ಯುಂಡೈ, ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಗರಿಷ್ಠ ಒಂದು ಲಕ್ಷ ರುಪಾಯಿಗಳ ವರೆಗೆ ಬೆಲೆ ಏರಿಕೆಗೊಳಿಸಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಭಾರತದಲ್ಲಿ ಎಂಟ್ರಿ ಲೆವೆಲ್ ಇಯಾನ್ ಹ್ಯಾಚ್ ಬ್ಯಾಕ್ ಕಾರಿನಿಂದ ಹಿಡಿದು ಸಾಂಟಾ ಫೆ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು ಮಾರಾಟ ಮಾಡುತ್ತಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಹ್ಯುಂಡೈ ಟಕ್ಸನ್ ಕ್ರೀಡಾ ಬಳಕೆಯ ವಾಹನಕ್ಕೂ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ನಿರ್ಮಾಣ ವೆಚ್ಚ ಏರಿಕೆ, ವಿದೇಶ ವಿನಿಮಯ ದರಗಳ ಏರಿಳಿತ ಮತ್ತು ಮಾರ್ಕೆಟಿಂಗ್ ವೆಚ್ಚ ಹೆಚ್ಚಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹ್ಯುಂಡೈ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಹ್ಯುಂಡೈ ಬೆಲೆ ಏರಿಕೆ ನೀತಿಯು 2017 ಜನವರಿ ತಿಂಗಳಿಂದಲೇ ಜಾರಿಗೆ ಬರಲಿದೆ. ಇದರಿಂದಾಗಿ ಈ ವರ್ಷಾಂತ್ಯದ ವೇಳೆಯಲ್ಲಿ ಹೆಚ್ಚಿನ ಮಾರಾಟವನ್ನು ನಿರೀಕ್ಷೆ ಮಾಡುತ್ತಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಇದಕ್ಕೂ ಮೊದಲು ನಿಸ್ಸಾನ್, ಟಾಟಾ ಮೋಟಾರ್ಸ್ ಹಾಗೂ ಟೊಯೊಟಾಗಳಂತಹ ವಾಹನ ಸಂಸ್ಥೆಗಳು ಬೆಲೆ ಏರಿಕೆ ನೀತಿಯನ್ನು ಪ್ರಕಟಿಸಿದ್ದವು. ಪ್ರಸ್ತುತ ಪಟ್ಟಿಗೀಗ ಮತ್ತಷ್ಟು ವಾಹನ ಸಂಸ್ಥೆಗಳು ಸೇರ್ಪಡೆಯಾಗುವ ಸಾಧ್ಯತೆಯಿದೆ.

ಹೊಸ ವರ್ಷಕ್ಕೆ ಹ್ಯುಂಡೈ ಶಾಕ್; 1 ಲಕ್ಷದ ವರೆಗೆ ಬೆಲೆ ಏರಿಕೆ

ಹ್ಯುಂಡೈ ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ಬೆಲೆ ಏರಿಕೆಯಾಗಲಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Wednesday, December 14, 2016, 10:42 [IST]
English summary
Hyundai India Announces Price Hike; Effective January 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+