ಹ್ಯುಂಡೈ ಕಾರುಗಳಿಗೆ ದೀಪಾವಳಿ ಬಂಪರ್ ಆಫರ್

By Nagaraja

ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮದ ವಾತಾವರಣವು ಮನೆ ಮಾಡಿರುವಂತೆಯೇ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, "ದಿ ಗ್ರೇಟ್ ಇಂಡಿಯನ್ ಸೆಲೆಬ್ರೇಷನ್" ಆಫರುಗಳನ್ನು ಮುಂದಿಟ್ಟಿದೆ. ಈ ಮೂಲಕ ಹ್ಯುಂಡೈ ಕಾರುಗಳನ್ನು ಖರೀದಿಸುವ ಗ್ರಾಹಕರು ಗರಿಷ್ಠ ಎರಡು ಲಕ್ಷ ರುಪಾಯಿಗಳ ವರೆಗೆ ಪ್ರಯೋಜನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹ್ಯುಂಡೈ ದಿ ಗ್ರೇಟ್ ಇಂಡಿಯನ್ ಸೆಲೆಬ್ರೇಷನ್ ಆಫರ್

ಹ್ಯುಂಡೈ ದಿ ಗ್ರೇಟ್ ಇಂಡಿಯನ್ ಸೆಲೆಬ್ರೇಷನ್ ಆಫರ್

ಹ್ಯುಂಡೈ ಶ್ರೇಣಿಯ ಕಾರುಗಳಿಗೆ ಆಫರ್ ಗಳು ಅನ್ವಯವಾಗಿದ್ದು, 2016 ಅಕ್ಟೋಬರ್ 28ರ ವರೆಗೆ ಆಫರ್ ಜಾರಿಯಲ್ಲಿರಲಿದೆ. ಹ್ಯುಂಡೈ ದಿ ಗ್ರೇಟ್ ಇಂಡಿಯನ್ ಸೆಲೆಬ್ರೇಷನ್ ಆಫರುಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಹ್ಯುಡೈ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಐದು ವರ್ಷದ ಹಿಂದಿನ ದರದಲ್ಲಿ ಅಂದರೆ ಹ್ಯುಂಡೈ ಇಯಾನ್ ಈಗ ಕೇವಲ 2.72 ಲಕ್ಷ ರು.ಗಳಲ್ಲಿ ಖರೀದಿಸಬಹುದಾಗಿದೆ. ಜೊತೆಗೆ ಈ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು ಖರೀದಿ ವೇಳೆಯಲ್ಲಿ 60,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಹ್ಯುಂಡೈ ಐ10

ಹ್ಯುಂಡೈ ಐ10

ಹ್ಯುಂಡೈ ಐ10 ಸಹ ಐದು ವರ್ಷದ ಹಿಂದಿನ ದರವಾದ 3.88 ಲಕ್ಷ ರು.ಗಳಲ್ಲಿ ನೀಡಲಾಗುತ್ತಿದೆ. ಹಾಗೆಯೇ ಐ10 ಪೆಟ್ರೋಲ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 53,000 ರು.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ.

ಗ್ರಾಂಡ್ ಐ10

ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳ ಖರೀದಿ ವೇಳೆಯಲ್ಲಿ ಅನುಕ್ರಮವಾಗಿ 83,000 ಮತ್ತು 91,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಎಲೈಟ್ ಐ20

ಎಲೈಟ್ ಐ20

ಹ್ಯುಂಡೈ ಎಲೈಟ್ ಐ20 ಪೆಟ್ರೋಲ್ ಅಥವಾ ಡೀಸೆಲ್ ಕಾರಿನ ಖರೀದಿ ವೇಳೆಯಲ್ಲಿ 10,000 ರು.ಗಳ ವರೆಗೆ ಆಫರ್ ಲಭ್ಯವಾಗಲಿದೆ.

ಎಕ್ಸ್ ಸೆಂಟ್

ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಖರೀದಿ ವೇಳೆಯಲ್ಲಿ ಅನುಕ್ರಮವಾಗಿ 47,000 ರು. ಹಾಗೂ 57,000 ರು.ಗಳ ವರೆಗೆ ಪ್ರಯೋಜನ ಲಭ್ಯವಾಗಲಿದೆ.

ವೆರ್ನಾ

ವೆರ್ನಾ

ಅದೇ ರೀತಿ ಹ್ಯುಂಡೈ ವೆರ್ನಾ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಖರೀದಿಯಲ್ಲಿ ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ಪ್ರಯೋಜನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹ್ಯುಂಡೈ ವೆರ್ನಾ 6.99 ಲಕ್ಷ ರು.ಗಳ ವಿಶೇಷ ದರದಲ್ಲೂ ಲಭ್ಯವಾಗಲಿದೆ.

ಸಾಂಟಾಫೆ

ಸಾಂಟಾಫೆ

ಇನ್ನೊಂದೆಡೆ ಹ್ಯುಂಡೈ ಸಾಂಟಾಫೆ ಖರೀದಿ ವೇಳೆಯಲ್ಲಿ ಗರಿಷ್ಠ ಎರಡು ಲಕ್ಷ ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ. ಇದು ಈ ಹಬ್ಬದ ವೇಳೆಯಲ್ಲಿ ಸಾಂಪಾಫೆ ಖರೀದಿಸುವ ಗ್ರಾಹಕರಿಗೆ ಬಂಪರ್ ಲಭಿಸಿದಂತಾಗಲಿದೆ.

ಫೇಸ್ಟಿವ್ ಪ್ರಯೋಜನ

ಫೇಸ್ಟಿವ್ ಪ್ರಯೋಜನ

  • ಆಕರ್ಷಕ ಎಕ್ಸ್ ಚೇಂಜ್ ಪ್ರಯೋಜನ,
  • ಗ್ರಾಂಡ್ ಐ10 ಮತ್ತು ವೆರ್ನಾ ಖರೀದಿ ವೇಳೆಯಲ್ಲಿ ಲಾಯಲ್ಟಿ ಬೋನಸ್,
  • ಆಕರ್ಷಕ ನಗದು ಪ್ರಯೋಜನ
  • ವಿಶೇಷ ಪ್ರಯೋಜನಗಳು

    ವಿಶೇಷ ಪ್ರಯೋಜನಗಳು

    • ಸರ್ಕಾರಿ ನೌಕರರಿಗೆ ವಿಶೇಷ ಸ್ಕೀಮ್,
    • ಗ್ರಾಂಡ್ ಐ10, ಎಕ್ಸ್ ಸೆಂಟ್ ಮತ್ತು ಕ್ರೆಟಾ ಸ್ಪೆಷನ್ ಎಡಿಷನ್ ಗಳು,
    • ಉಚಿತ ವಿಮೆ ಮತ್ತು ವರ್ಧಿತ ವಾರಂಟಿ (ಷರತ್ತುಗಳು ಅನ್ವಯ)
    • ಕ್ರಿಕೆಟ್ ಗಿಫ್ಟ್

      ಕ್ರಿಕೆಟ್ ಗಿಫ್ಟ್

      • ಪ್ರತಿ ಟೆಸ್ಟ್ ಡ್ರೈವ್ ನಲ್ಲೂ ಕ್ರಿಕೆಟ್ ಉಡುಗೊರೆ,
      • ಹ್ಯುಂಡೈ ಕಾರು ಖರೀದಿಸಿ ಕ್ರಿಕೆಟ್ ಕಿಟ್ ನಿಮ್ಮದಾಗಿಸಿ.
      • ಕ್ರೆಟಾಗಿಲ್ಲ ಆಫರ್

        ಕ್ರೆಟಾಗಿಲ್ಲ ಆಫರ್

        ಹಾಗಿದ್ದರೂ ಈ ಆಫರುಗಳ ಪಟ್ಟಿಯಿಂದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹ್ಯುಂಡೈ ಕ್ರೆಟಾ ಕ್ರೀಡಾ ಬಳಕೆಯ ವಾಹನವನ್ನು (ಎಸ್ ಯುವಿ) ಹೊರತುಪಡಿಸಿರುವುದು ಹಿನ್ನಡೆಗೆ ಕಾರಣವಾಗಿದೆ.

More from DriveSpark

Article Published On: Monday, October 24, 2016, 12:50 [IST]
English summary
Hyundai India Offering Huge Benefits During Diwali On Select Models
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+