ಏಳು ದಶಲಕ್ಷ ಮಾರಾಟ ಮೈಲುಗಲ್ಲು ದಾಟಿದ ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇದೀಗ ಏಳು ದಶಲಕ್ಷ ಮಾರಾಟ ಮೈಲುಗಲ್ಲನ್ನು ತಲುಪಿದೆ.
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಸಾಧಿಸಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯೀಗ ದೇಶದಲ್ಲಿ ಏಳು ದಶಲಕ್ಷದ ಕಾರನ್ನು ಹೊರತಂದಿದೆ. ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಇತ್ತೀಚೆಗಷ್ಟೇ ಅತಿ ನೂತನ ಟಕ್ಸನ್ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿತ್ತು.

ಹ್ಯುಂಡೈ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿರುವ ಕ್ರೆಟಾವನ್ನೇ ಏಳು ದಶಲಕ್ಷದ ಕಾರಾಗಿ ಆಯ್ಕೆ ಮಾಡಲಾಗಿದೆ. ಇದು ಎಸ್ ಯುವಿ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಕಾಪಾಡಿಕೊಂಡಿದೆ.

ಭಾರತಕ್ಕೆ ಕಾಲಿರಿಸಿದ 18 ವರ್ಷಗಳ ಅವಧಿಯಲ್ಲಿ ಈ ಮಹತ್ತರ ಮೈಲುಗಲ್ಲನ್ನು ಸಾಧಿಸುವಲ್ಲಿ ಹ್ಯುಂಡೈ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಮಾರುತಿ ಬಳಿಕದ ಅತ್ಯಂತ ಜನಪ್ರಿಯ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಸಂಸ್ಥೆಯ ಪ್ರಕಟನೆಯ ಪ್ರಕಾರ ಸರಾಸರಿ ಪ್ರತಿ 18 ತಿಂಗಳ ಅವಧಿಯಲ್ಲಿ ಒಂದು ಮಿಲಿಯನ್ ಗಳ ಮಾರಾಟ ದಾಖಲೆಯನ್ನು ತಲುಪುತ್ತಿದೆ.

ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ಎಂಟು ವರ್ಷಗಳ ಬಳಿಕ ಅಂದರೆ 2006ರಲ್ಲಿ ಸ್ಯಾಂಟ್ರೊ ರೂಪದಲ್ಲಿ 10 ದಶಲಕ್ಷದ ಕಾರನ್ನು ಹ್ಯುಂಡೈ ಹೊರತಂದಿತ್ತು.

ಬಳಿಕ ದೇಶದಲ್ಲಿ ಅತಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಂಡ ಹ್ಯುಂಡೈ, 2013 ಅಕ್ಟೋಬರ್ ತಿಂಗಳಲ್ಲಿ ಐದು ಮಿಲಿಯನ್ ದಾಖಲೆಗೆ ಮೈಲುಗಲ್ಲನ್ನು ದಾಟಿತ್ತು.

ಗುಣಮಟ್ಟದ ಕಾರುಗಳನ್ನು ತಯಾರಿಸುವುದರಲ್ಲಿ ಕಾರ್ಯಮಗ್ನವಾಗಿರುವ ಹ್ಯುಂಡೈ, ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ತುಂಬಿತ್ತು.

ಭಾರತದಲ್ಲಿ ನಿರ್ಮಿತ ಮೇಡ್ ಇನ್ ಇಂಡಿಯಾ ಹ್ಯುಂಡೈ ಕಾರುಗಳು ವಿದೇಶಗಳಲ್ಲೂ ಹೆಚ್ಚಿನ ಮನ್ನಣೆಗೆ ಪಾತ್ರವಾಗಿದೆ. ಇದು ಭಾರತ ಸೇರಿದಂತೆ ವಿದೇಶದಲ್ಲೂ ಅತ್ಯಂತ ನಂಬಿಕೆಗ್ರಸ್ತ ಸಂಸ್ಥೆಯನ್ನಾಗಿ ಮಾರ್ಪಾಡುಗೊಳಿಸಿದೆ.

ಈ ಸಂದರ್ಭದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಲಿಚ್ಛಿಸಲು ಸಂಸ್ಥೆಯು ಬಯಸಿದೆ.

ಮಾರಾಟದಲ್ಲಿ ಇದೇ ಆವೇಗವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಹ್ಯುಂಡೈ, 10 ದಶಲಕ್ಷದ ಕಾರನ್ನು 2021ರಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.


Click it and Unblock the Notifications








