ಹ್ಯುಂಡೈನಿಂದ 402 ಕೀ.ಮೀ ವ್ಯಾಪ್ತಿಯ ವರೆಗಿನ ಎಲೆಕ್ಟ್ರಿಕ್ ಕಾರು ನಿರ್ಮಾಣ
ಇಡೀ ಜಗತ್ತೇ ಪರ್ಯಾಯ ಸಂಚಾರ ವ್ಯವಸ್ಥೆಯ ಹುಡುಕಾಟದಲ್ಲಿದೆ. ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ವಾಹನ ಸಂಸ್ಥೆ ಹ್ಯುಂಡೈ ಸಹ ವಾಹನ ಕ್ಷೇತ್ರಕ್ಕೆ ತನ್ನ ಕೊಡುಗೆಯನ್ನು ನೀಡುವುದರಲ್ಲಿ ತಲ್ಲೀನವಾಗಿದೆ.
ಅತ್ತ ಅಮೆರಿಕ ಮೂಲದ ಮುಂಚೂಣಿಯ ಎಲೆಕ್ಟ್ರಿಕ್ ವಾಹನ ಸಂಸ್ಥೆ ಟೆಸ್ಲಾ ಆಧುನಿಕತೆಗೆ ತಕ್ಕಂತೆ ವಿದ್ಯುತ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಇದೇ ಸಂದರ್ಭದಲ್ಲಿ ಹ್ಯುಂಡೈ 402 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸುವ ನೂತನ ಎಲೆಕ್ಟ್ರಿಕ್ ಕಾರಿನೊಂದಿಗೆ ಮುಂದೆ ಬಂದಿದೆ.

ನಿಮ್ಮ ಮಾಹಿತಿಗಾಗಿ ಟೆಸ್ಲಾ ಮಾಡೆಲ್ 3 ಒಂದೇ ಚಾರ್ಜ್ ನಲ್ಲಿ ಅಂದಾಜು 350 ಕೀ.ಮೀ. ವರೆಗೆ ಚಲಿಸಲಿದೆ. ಈಗ 402 ಕೀ.ಮೀ. ವ್ಯಾಪ್ತಿಯ ಕಾರನ್ನು ಪರಿಚಯಿಸುವ ಮೂಲಕ ಹ್ಯುಂಡೈ ತನ್ನ ಪ್ರತಿಸ್ಪರ್ಧಿಯನ್ನು ಮೀರಿ ನಿಂತಿದೆ.

ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿರುವ ಹ್ಯುಂಡೈ ಐಯೊನಿಕ್ (Ioniq) ವಿದ್ಯುತ್ ಚಾಲಿತ ಕಾರನ್ನು 2018ರಲ್ಲಿ ಬಿಡುಗಡೆ ಮಾಡಲಿದೆ. ಇದು 322 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಲಿದೆ.

ಪ್ರಸಕ್ತ ಸಾಲಿನಲ್ಲೇ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ಎಲೆಕ್ಟ್ರಿಕ್ ಕಾರು 177 ಕೀ.ಮೀ. ವ್ಯಾಪ್ತಿಯನ್ನು ಪಡೆಯಲಿದೆ ಎಂದು ಹ್ಯುಂಡೈ ಸ್ಪಷ್ಟಪಡಿಸಿದೆ.

ಪ್ಲಗ್ ಇನ್ ಹೈಬ್ರಿಡ್, ಸ್ಟ್ಯಾಂಡರ್ಡ್ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳೆಂಬ ಮೂರು ಆವೃತ್ತಿಗಳಲ್ಲಿ ಐಯೊನಿಕ್ ಕಾರನ್ನು ಹ್ಯುಂಡೈ ಬಿಡುಗಡೆ ಮಾಡಲಿದೆ.

ಇನ್ನೊಂದೆಡೆ ಟೆಸ್ಲಾ ಮಾಡೆಲ್ 3 ಮಾದರಿಗೆ ಗರಿಷ್ಠ ಬೇಡಿಕೆ ಕಂಡುಬಂದಿದ್ದು, ಆರು ಸೆಕೆಂಡುಗಳ್ಲಲ್ಲೇ ಗಂಟೆಗೆ 100 ಕೀ.ಮೀ. ವೇಗ ಮತ್ತು ಏಕ ಮಾತ್ರ ಚಾರ್ಜ್ ನಲ್ಲಿ 346 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಲೆಕ್ಟ್ರಿಕ್ ಜೊತೆಗೆ ಪ್ಲನ್ ಇನ್ ಹೈಬ್ರಿಡ್ ಮತ್ತು ಹೈಡ್ರೋಜನ್ ಕಾರುಗಳನ್ನು 2020ರ ವೇಳೆಯಾಗುವಾಗ ಬಿಡುಗಡೆ ಮಾಡುವುದು ಹ್ಯುಂಡೈ ಯೋಜನೆಯಾಗಿದೆ. ಈ ಮೂಲಕ ಪರಿಸರ ಸ್ನೇಹಿ ಕಾರುಗಳಿಗೆ ಒತ್ತು ನೀಡಲಿದೆ.


Click it and Unblock the Notifications