ಬಹು ನಿರೀಕ್ಷಿತ ಹ್ಯುಂಡೈ ಟಕ್ಸನ್ ಬಿಡುಗಡೆ ಸನ್ನಿಹಿತ
ಬಹು ನಿರೀಕ್ಷಿತ ಹ್ಯುಂಡೈ ಟಕ್ಸನ್ ಕ್ರೀಡಾ ಬಳಕೆಯ ವಾಹನ ಬಿಡುಗಡೆ ಸನ್ನಿಹಿತವಾಗಿದೆ. ಬಲ್ಲ ಮೂಲಗಳ ಪ್ರಕಾರ ಮುಂಬರುವ ಅಕ್ಟೋಬರ್ 24ರಂದು ಅತಿ ನೂತನ ಹ್ಯುಂಡೈ ಟಕ್ಸನ್ ಬಿಡುಗಡೆಯಾಗಲಿದೆ.
ಹಬ್ಬದ ಸಂಭ್ರಮದಲ್ಲಿರುವ ಭಾರತೀಯರಿಗೆ ಹ್ಯುಂಡೈ ಟಕ್ಸನ್ ಎಸ್ ಯುವಿ ಪರಿಪೂರ್ಣ ಕೊಡುಗೆಯಾಗಿರಲಿದೆ. ತನ್ಮೂಲಕ ಕ್ರೆಟಾ ಮೂಲಕ ಸಾಧಿಸಿರುವ ಅದೇ ಯಶಸ್ಸನ್ನು ಟಕ್ಸನ್ ಪ್ರೀಮಿಯಂ ಎಸ್ ಯುವಿ ಮೂಖಾಂತರ ಹ್ಯುಂಡೈ ಮುಂದುವರಿಸಲಿದೆ.

ಇದಕ್ಕೂ ಮೊದಲು 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಹ್ಯುಂಡೈ ಟಕ್ಸನ್, ಭಾರತೀಯರ ಪಾಲಿಗೆ ಹೊಸತಲ್ಲ. 2004ರಲ್ಲಿ ಜಾಗತಿಕ ಪ್ರವೇಶದ ಬಳಿಕ 2005ರಲ್ಲಿ ಈ ಮೊದಲನೇ ತಲೆಮಾರಿನ ಕಾರು ಭಾರತವನ್ನು ಹಿಂಬಾಲಿಸಿತ್ತು. ತದಾ ನಂತರ ಕಳಪೆ ಮಾರಾಟದ ಹಿನ್ನಲೆಯಲ್ಲಿ ಹಿಂಪಡೆಯಲಾಗಿತ್ತು.
ಸದ್ಯ ಮಾರುಕಟ್ಟೆಯನ್ನು ಕೂಲಂಕುಷವಾಗಿ ಅವಲೋಕನ ಮಾಡಿರುವ ಹ್ಯುಂಡೈ, ಟಕ್ಸನ್ ಬಿಡುಗಡೆ ಮಾಡುತ್ತಿದೆ. ಯಾಕೆಂದರೆ ಕ್ರೀಡಾ ಬಳಕೆಯ ವಾಹನಗಳಲ್ಲಿ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಲೇ ಇದೆ.
ನೂತನ ಟಕ್ಸನ್ ಕಾರು ಕ್ರೆಟಾ ಹಾಗೂ ಸಾಂಟಾ ಫೆ ಕ್ರೀಡಾ ಬಳಕೆಯ ನಡುವೆ ಗುರುತಿಸಿಕೊಳ್ಳಲಿದೆ. ಇದರಲ್ಲೂ ಸಂಸ್ಥೆಯ ನೂತನ ಫ್ಯೂಯಿಡಿಕ್ 2.0 ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.


Click it and Unblock the Notifications





















