ಹ್ಯುಂಡೈ 20ರ ಸಂಭ್ರಮಕ್ಕೆ ಎಕ್ಸ್‌ಸೆಂಟ್ ವಿಶೇಷ ಆವೃತ್ತಿ ಕೊಡುಗೆ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ತನ್ನ ಜನಪ್ರಿಯ ಎಕ್ಸ್‌ಸೆಂಟ್ ವಾರ್ಷಿಕ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿಯೂ ಕಾರಿನ ಅಂದತೆಯನ್ನು ವರ್ಧಿಸುವುದರ ಮೇಲೆ ಗಮನ ಕೊಡಲಾಗಿದೆ.
ಎರಡು ದಶಕಗಳ ಹಿಂದೆ ಭಾರತೀಯ ವಾಹನ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ಮಾರುತಿ ಸುಜುಕಿ ಬಳಿಕ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಂಸ್ಥೆಯು ಗ್ರಾಹಕರ ಮೇಲಿಟ್ಟಿರುವ ಬದ್ಧತೆ ಮತ್ತು ಗುಣಮಟ್ಟದ ಉತ್ಪನ್ನಗಳಿಂದಲೇ ಹ್ಯುಂಡೈ ದೇಶದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಹ್ಯುಂಡೈ ಎಕ್ಸ್‌ಸೆಂಟ್ (ಪೆಟ್ರೋಲ್): 6.22 ಲಕ್ಷ ರು.
- ಹ್ಯುಂಡೈ ಎಕ್ಸ್‌ಸೆಂಟ್ (ಡೀಸೆಲ್): 7.15 ಲಕ್ಷ ರು.

ನಿರಂತರ ಅಂತರಾಳದಲ್ಲಿ ಹೊಸ ಹಾಗೂ ಪರಿಷ್ಕೃತ ಕಾರುಗಳನ್ನು ಪರಿಚಯಿಸುವ ಮೂಲಕ ದೇಶದಲ್ಲಿ ಅತ್ಯುತ್ತಮ ಮಾರಾಟ ಕಾಪಾಡಿಕೊಂಡಿರುವ ಹ್ಯುಂಡೈ ಈಗ ದೇಶದಲ್ಲಿ 20 ವರ್ಷಗಳ ಸಂಭ್ರಮದ ಅಂಗವಾಗಿ ಅತಿ ನೂತನ ಎಕ್ಸ್‌ಸೆಂಟ್ ಕಾರನ್ನು ಬಿಡುಗಡೆಗೊಳಿಸಿದೆ.

ವಿಶೇಷ ಶ್ವೇತ ವರ್ಣದೊಂದಿಗೆ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ವಿಶೇಷ ಆವೃತ್ತಿಯು ಲಭ್ಯವಾಗಲಿದೆ. ಇವೆರಡು ಅನುಕ್ರಮವಾಗಿ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 6.22 ಲಕ್ಷ ರು. ಮತ್ತು 7.15 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಹ್ಯುಂಡೈ ಎಕ್ಸ್ ಸೆಂಟ್ ಸೀಮಿತ ಆವೃತ್ತಿಯಲ್ಲಿ 6.2 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಹಿಂದುಗಡೆ 20ನೇ ವರ್ಷಾಚರಣೆಯ ವಾರ್ಷಿಕ ಲಾಂಛನ ಇರಲಿದೆ.

ಅಂತೆಯೇ ವಿಶೇಷ ಕ್ರೋಮ್ ಲೈನಿಂಗ್ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಎಕ್ಸ್ ಸೆಂಟ್ ಕಾರನ್ನು ವಿಭಿನ್ನವಾಗಿಸಲಿದೆ. ಬಡಿಯಲ್ಲಿ ಬಾಡಿ ಡಿಕಾಲ್ಸ್ ಮತ್ತು ಬೂಟ್ ಲಿಪ್ ಸ್ಪಾಯ್ಲರ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಇದಲ್ಲದೆ 6.2 ಇಂಚುಗಳ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ ಕೂಡಾ ನೂತನ ಹ್ಯುಂಡೈ ಎಕ್ಸ್ ಸೆಂಟ್ ವಿಶೇಷ ಆವೃತ್ತಿಯನ್ನು ವಿಭಿನ್ನವಾಗಿಸಲಿದೆ.

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 82 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.1 ಲೀಟರ್ ಡೀಸೆಲ್ ಎಂಜಿನ್ 180 ಎನ್ ಎಂ ತಿರುಗುಬಲದಲ್ಲಿ 71 ಅಶ್ವಶಕ್ತಿ ನೀಡಲಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಹಾಗೂ ಫೋರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ನೂತನ ಹ್ಯುಂಡೈ ಎಕ್ಸ್ ಸೆಂಟ್ ವಿಶೇಷ ಆವೃತ್ತಿಯು ಸಾಮಾನ್ಯ ಎಸ್ ವೆರಿಯಂಟ್ ಗಿಂತಲೂ 17,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ. ಅಲ್ಲದೆ 2,400 ಯುನಿಟ್ ಗಳಷ್ಟು ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.


Click it and Unblock the Notifications