ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ (ಎಚ್‌ಎಂಎಲ್‌ಐ) ಸಂಸ್ಥೆ ದೇಶದಲ್ಲಿ ಮಾರಾಟ ಆರಂಭಿಸಿ 20 ವರ್ಷಗಳೇ ಸಂದಿವೆ. ಈ ಸುಸಂದರ್ಭವನ್ನು ಸ್ಮರಣೀಯವಾಗಿಸಲು ಹೊರಟಿರುವ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಎರಡು ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಬಲ್ಲ ಮೂಲಗಳ ಪ್ರಕಾರ ಹ್ಯುಂಡೈ 20ನೇ ವರ್ಷದ ಸಂಭ್ರಮದಂಗವಾಗಿ ಗ್ರಾಂಡ್ ಐ10 ಮತ್ತು ಎಕ್ಸ್ ಸೆಂಟ್ ವಿಶೇಷ ಆವೃತ್ತಿಗಳು ಬಿಡುಗಡೆಯಾಗಲಿದೆ. ಇದು ದೇಶದಲ್ಲಿ ಸಂಸ್ಥೆಯ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಜನಪ್ರಿಯ ಮಾರುತಿ ಸುಜುಕಿ ಕಾರುಗಳನ್ನು ಹೊರತುಪಡಿಸಿದರೆ ಹ್ಯುಂಡೈ ಗರಿಷ್ಠ ಮಾರಾಟವನ್ನು ಕಾಯ್ದುಕೊಂಡಿದೆ. ಕಳೆದ ಮೂರು ಸಾಲಿನಲ್ಲಿ ಹ್ಯುಂಡೈ ಕಾರುಗಳೇ ವರ್ಷದ ಕಾರು ಪ್ರಶಸ್ತಿಗೆ ಅರ್ಹವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಹ್ಯುಂಡೈ ಗ್ರಾಂಡ್ ಐ10, ಎಲೈಟ್ ಐ20 ಮತ್ತು ಕ್ರೆಟಾ ಕಾರುಗಳು ಕಳೆದ ಮೂರು ವರ್ಷಗಳಲ್ಲಿ ಭಾರತದ ವರ್ಷದ ಕಾರು ಪ್ರಶಸ್ತಿಗೆ ಭಾಜನವಾಗುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಅರ್ಹವಾಗಿತ್ತು.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಈ ಪೈಕಿ ಹ್ಯುಂಡೈ ಎಕ್ಸ್ ಸೆಂಟ್ ವಿಶೇಷ ಆವೃತ್ತಿಯು ಪ್ರಸಕ್ತ ತಿಂಗಳಿನಲ್ಲಿ ಮತ್ತು ಗ್ರಾಂಡ್ ಐ10 ಮುಂಬರುವ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದಲ್ಲದೆ ಪ್ರಸಕ್ತ ಸಾಲಿನಲ್ಲೇ 2016 ಎಲಂಟ್ರಾ ಬಿಡುಗಡೆ ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಪ್ರಮುಖವಾಗಿಯೂ ಕಾರಿನ ಒಟ್ಟಾರೆ ನೋಟದಲ್ಲಿ ಬದಲಾವಣೆಗಳು ಕಂಡುಬರಲಿದೆ. ಇದರು ನೂತನ ಸ್ಪೋರ್ಟ್ ಪೆಡಲ್, ವಿಶೇಷ ಫ್ಲೋರ್ ಮ್ಯಾಟ್, ಸ್ಟೀರಿಂಗ್ ಮೌಂಟೆಡ್ ಬಟನ್, ರಿವರ್ಸ್ ಸೆನ್ಸಾರ್ ಮತ್ತು ರಿಯರ್ ಸ್ಪಾಯ್ಲರ್ ಗಳಂತಹ ವೈಶಿಷ್ಟ್ಯಗಳು ಲಭ್ಯವಾಗಲಿದೆ.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರವುದಿಲ್ಲ. ಇವೆರಡು 1.2 ಲೀಟರ್ ಪೆಟ್ರೋಲ್ ಮತ್ತು 1.1 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ.

ಹ್ಯುಂಡೈ 20ರ ಸಂಭ್ರಮ; ಎಕ್ಸ್ ಸೆಂಟ್, ಗ್ರಾಂಡ್ ಐ10 ವಿಶೇಷ ಆವೃತ್ತಿಗಳು ಮಾರುಕಟ್ಟೆಗೆ

ಪೆಟ್ರೋಲ್ ಆವೃತ್ತಿಯೂ 112 ಎನ್ಎಂ ತಿರುಗುಬಲದಲ್ಲಿ 82 ಅಶ್ವಶಕ್ತಿಯನ್ನು ಉತ್ಪಾದಿಸುವುದಾದ್ದಲ್ಲಿ, ಎಕ್ಸ್ ಸೆಂಟ್ ಮತ್ತು ಗ್ರಾಂಡ್ ಐ10 ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ 71 (180 ಎನ್ ಎಂ ತಿರುಗುಬಲ) ಮತ್ತು 70 ಅಶ್ವಶಕ್ತಿಯನ್ನು (160 ಎನ್ ಎಂ ತಿರುಗುಬಲ) ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

Article Published On: Tuesday, April 12, 2016, 17:33 [IST]
English summary
Hyundai Xcent & Grand i10 Special Edition India Launch Soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+