ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ನವೀಕೃತ ಹ್ಯುಂಡೈ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು 2018ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

By Nagaraja

ನಿರಂತರ ಅಂತರಾಳದಲ್ಲಿ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ದೇಶಕ್ಕೆ ಪರಿಚಯಿಸುತ್ತಲೇ ಬಂದಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು, ಭವಿಷ್ಯದತ್ತವೂ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಬಲ್ಲ ಮೂಲಗಳ ಪ್ರಕಾರ ನವೀಕೃತ ಹ್ಯುಂಡೈ ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಕಾರು 2018ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

2014ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿರುವ ಹ್ಯುಂಡೈ ಎಕ್ಸ್ ಸೆಂಟ್ ಪ್ರಯಾಣಿಕ ವಿಭಾಗಗಿಂತಲೂ ವಿಭಿನ್ನವಾಗಿ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಪ್ರತಿ ತಿಂಗಳಲ್ಲಿ ಸರಾಸರಿ 2942 ಯುನಿಟ್ ಗಳ ಮಾರಾಟವನ್ನು ಕಾಪಾಡಿಕೊಂಡಿರುವ ಹ್ಯುಂಡೈ ಎಕ್ಸ್ ಸೆಂಟ್ ಶೇಕಡಾ 30ರಷ್ಟು ಮಾರಾಟವು ಟ್ಯಾಕ್ಸಿ ವಿಭಾಗವನ್ನು ಆಕ್ರಮಿಸಿಕೊಂಡಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಇದರೊಂದಿಗೆ ಕಾಲ ಕಾಲಕ್ಕೆ ಹೊಸ ವಿನ್ಯಾಸವನ್ನು ಕಲ್ಪಿಸಿಕೊಡುವ ಇರಾದೆಯಲ್ಲಿರುವ ಹ್ಯುಂಡೈ, ನೂತನ ಎಕ್ಸ್ ಸೆಂಟ್ ಮುಖಾಂತರ ಖಾಸಗಿ ಖರೀದಿಗಾರರನ್ನು ಆಕರ್ಷಿಸುವ ಇರಾದೆಯಲ್ಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಇತ್ತೀಚೆಗಷ್ಟೇ ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಗ್ರಾಂಡ್ ಐ10 ಮಾದರಿಗೆ ಸಮಾನವಾದ ವಿನ್ಯಾಸವನ್ನು ಹೊಸ ಎಕ್ಸ್ ಸೆಂಟ್ ನಲ್ಲಿ ಅನುಸರಿಸುವ ಸಾಧ್ಯತೆಗಳಿವೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಮುಂಭಾಗದಲ್ಲಿ ಹೆಕ್ಸಾಗನಲ್ ಗ್ರಿಲ್, ನವೀಕೃತ ಬಂಪರ್, ಹೆಡ್ ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್ ಸೇವೆಯಿರಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಮುಂದಿನ ವರ್ಷ ಹ್ಯುಂಡೈ ಗ್ರಾಂಡ್ ಐ10 ನವೀಕೃತ ಮಾದರಿಯನ್ನು ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಬಿಡುಗಡೆ ಮಾಡಲಿದೆ. ತದಾ ಬಳಿಕವಷ್ಟೇ ಎಕ್ಸ್ ಸೆಂಟ್ ಪ್ರವೇಶವಾಗಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಗ್ರಾಹಕರಿಂದ ಸಂಗ್ರಹಿಸಿದ ಪ್ರತಿಕ್ರಿಯೆಗೆ ಅನುಗುಣವಾಗಿ ಎಕ್ಸ್ ಸೆಂಟ್ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲಾಗುವುದು.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಅತ್ತ ಕಾರಿನೊಳಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಡಿಯೋ ವಿಡಿಯೋ ನೇವಿಗೇಷನ್ ವ್ಯವಸ್ಥೆಗಳಿರಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಅಂದ ಹಾಗೆ ಹ್ಯುಂಡೈ ಎಕ್ಸ್ ಸೆಂಟ್ 1.1 ಲೀಟರ್ ಡೀಸೆಲ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ.

ಅಂದ ಚಂದ ಬದಲಾಯಿಸಲಿರುವ ಎಕ್ಸ್ ಸೆಂಟ್

ಮಾರುತಿ ಜನಪ್ರಿಯ ಸ್ವಿಫ್ಟ್ ಡಿಜೈರ್ ಸೇರಿದಂತೆ ಇನ್ನಷ್ಟೇ ಬಿಡುಗಡೆಯಾಗಲಿರುವ ಟಾಟಾ ಕೈಟ್ 5 ಮತ್ತು ಷೆವರ್ಲೆ ಬೀಟ್ ಎಸ್ಸೆನ್ಷಿಯಾ ಸವಾಲುಗಳನ್ನು ನೂತನ ಎಕ್ಸ್ ಸೆಂಟ್ ಎದುರಿಸಲಿದೆ.

More from DriveSpark

Article Published On: Wednesday, November 23, 2016, 14:15 [IST]
English summary
Hyundai Xcent Compact Sedan To Be Updated For Indian Market By 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+