3.89 ಕೋಟಿ ಬೆಲೆ ಬಾಳುವ ಲಂಬೋರ್ಗಿನಿ ಹ್ಯುರಕನ್ ಸ್ಪೈಡರ್ ಬಿಡುಗಡೆ
ಫೋಕ್ಸ್ ವ್ಯಾಗನ್ ಅಧೀನತೆಯಲ್ಲಿರುವ ಇಟಲಿಯ ಐಕಾನಿಕ್ ಸೂಪರ್ ಕಾರು ಬ್ರಾಂಡ್ ಲಂಬೋರ್ಗಿನಿ ಅತಿ ನೂತನ ಹ್ಯುರಕನ್ ಸ್ಪೈಡರ್ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 3.89 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಹ್ಯುರಕನ್ ಸ್ಪೈಡರ್ ಕಾರಿನ ಆಗಮನನದೊಂದಿಗೆ ದೇಶದಲ್ಲಿ ಲಂಬೋರ್ಗಿನಿ ಮತ್ತಷ್ಟು ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಮುಂಬರುವ ದಿನಗಳಲ್ಲಿ ಐಷಾರಾಮಿ ಕಾರು ಪ್ರೇಮಿಗಳಿಗೆ ಲಂಬೋರ್ಗಿನಿ ನೆಚ್ಚಿನ ಆಯ್ಕೆಯಾಗಿರಲಿದೆ.

ಕೂಪೆ ಶೈಲಿಯ ಲಂಬೋರ್ಗಿನಿ ಹ್ಯುರಕನ್ ಸ್ಪೈಡರ್, ತೆರೆದುಕೊಳ್ಳುವಂತಹ ಫ್ಯಾಬ್ರಿಕ್ ರೂಫ್ ಪಡೆದಿದೆ. ಇದರ ಸಾಫ್ಟ್ ಟಾಪ್ ರೂಫ್ ಅನ್ನು 50 ಕೀ.ಮೀ. ವೇಗದಲ್ಲಿ ಚಲಿಸಿದರೂ ಕೇವಲ 17 ಸೆಕೆಂಡುಗಳಲ್ಲಿ ತೆರೆಯುವುದು ಮತ್ತು ಮುಚ್ಚುಗಡೆಗೊಳಿಸಬಹುದಾಗಿದೆ.

ಆಕರ್ಷಕ ಒಳಮೈ ಪಡೆದಿರುವ ಲಂಬೋರ್ಗಿನಿ ಹ್ಯುರಕನ್ ಸ್ಪೈಡರ್, ಚಾಲಕ ಕೇಂದ್ರಿತ ಕ್ಯಾಬಿನ್ ಜೊತೆ ಕಾರ್ಬನ್ ಫೈಬರ್, ಅಲ್ಕಂಟರಾ ಸೀಟು ಹೋದಿಗೆ, ಸಂಪೂರ್ಣ ಇನ್ಸ್ಟ್ರುಮೆಂಟ್ ಪರದೆ ಮುಂತಾದ ವ್ಯವಸ್ಥೆಗಳಿರಲಿದೆ.

ಕಾರಿನಡಿಯಲ್ಲಿರುವ 5.2 ಲೀಟರ್ ನೈಸರ್ಗಿಕ ವಿ10 ಎಂಜಿನ್ 560 ಎನ್ ಎಂ ತಿರುಗುಬಲದಲ್ಲಿ 610 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಏಳು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಇನ್ನು ವೇಗದ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಲಂಬೋರ್ಗಿನಿ ಹ್ಯುರಕನ್ ಸ್ಪೈಡರ್ 3.4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

ಇದೇ ಸಂದರ್ಭದಲ್ಲಿ ವಾಣಿಜ್ಯ ನಗರಿ ಮುಂಬೈನಲ್ಲಿ ನೂತನ ಡೀಲರ್ ಶಿಪ್ ಸಹ ಲಂಬೋರ್ಗಿನಿ ತೆರೆದುಕೊಂಡಿದೆ.

ಸೂಪರ್ ಕಾರುಗಳ ವಿಚಾರಕ್ಕೆ ಬಂದಾಗ ವಿಶ್ವದಲ್ಲಿ ಕೆಲವೇ ಕೆಲವು ಸಂಸ್ಥೆಗಳು ಮಾತ್ರ ಸುಂದರವಾದ ಕಾರುಗಳನ್ನು ಒದಿಗುಸುತ್ತಿದೆ. ಇದರಲ್ಲಿ ಚಪ್ಪಟೆಯಾಕರಾದ ಲಂಬೋರ್ಗಿನಿ ಸಹ ಒಂದಾಗಿದೆ.

ಕೂಪೆ ಮಾದರಿಗಿಂತಲೂ 110 ಕೆ.ಜಿ ಹೆಚ್ಚು ಭಾರವನ್ನು (ಒಟ್ಟು 1542 ಕೆ.ಜಿ) ಹೊಂದಿರುವ ಸ್ಪೈಡರ್ ರಚನಾತ್ಮಕ ಬಿಗಿತವನ್ನು ಶೇಕಡಾ 90ರಷ್ಟು ಉಳಿಸಿಕೊಳ್ಳಲಾಗಿದೆ.

ಅಂತೆಯೇ ನೂತನ ಲಂಬೋರ್ಗಿನಿ ಹ್ಯುರಕನ್ ಸ್ಪೈಡರ್ ಗಂಟೆಗೆ ಗರಿಷ್ಠ 324 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸ್ಟ್ಯಾಂಡರ್ಡ್ ಹ್ಯುರಕನ್ ಆವೃತ್ತಿಯ ಜೀವನಶೈಲಿ ಮಾದರಿಯಾಗಿ ಸ್ಪೈಡರ್ ಮಾಡೆಲ್ ಅನ್ನು ಲಂಬೋರ್ಗಿನಿ ಪರಿಚಯಿಸುತ್ತಿದೆ.


Click it and Unblock the Notifications








