ವಿಟಾರಾ ಬ್ರಿಝಾ ಮ್ಯಾಜಿಕ್; 24 ತಾಸಿನಲ್ಲಿ 2600 ಬುಕ್ಕಿಂಗ್ಸ್

Written By:

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಈಗಷ್ಟೇ ಎಂಟ್ರಿ ಕೊಟ್ಟಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯ ಅತಿ ನೂತನ ವಿಟಾರಾ ಬ್ರಿಝಾ ಕಾರಿಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Also Read : ಕಾಯುವಿಕೆ ಅಂತ್ಯ; ಮಾರುತಿ ವಿಟಾರಾ ಬ್ರಿಝಾ ಭರ್ಜರಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಭವಿಷ್ಯ ನುಡಿದಂತೆ ನೂತನ ವಿಟಾರಾ ಬ್ರಿಝಾ ಮಾರಾಟದಲ್ಲಿ ಮ್ಯಾಜಿಕ್ ಮಾಡಿದೆ. ಅಲ್ಲದೆ ಬಿಡುಗಡೆಯಾದ ಕೇವಲ 24 ತಾಸಿನೊಳಗೆ 2,600ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿಕೊಂಡಿದೆ. ನೂತನ ವಿಟಾರಾ ಬ್ರಿಝಾ ಬೆಂಗಳೂರಿನ ಬೆಲೆ ತಿಳಿದುಕೊಳ್ಳಲು ಮುಂದುವರಿಯಿರಿ...

ವಿಟಾರಾ ಬ್ರಿಝಾ ಮ್ಯಾಜಿಕ್; 24 ತಾಸಿನಲ್ಲಿ 2600 ಬುಕ್ಕಿಂಗ್ಸ್

ನಿಮ್ಮ ಮಾಹಿತಿಗಾಗಿ ನೂತನ ಮಾರುತಿ ವಿಟಾರಾ ಬ್ರಿಝಾ 2016 ಫೆಬ್ರವರಿ 08ರಂದು ಭರ್ಜರಿ ಬಿಡುಗಡೆ ಕಂಡಿತ್ತು. ಮರುದಿನವೇ ವಿಟಾರಾ ಬ್ರಿಝಾ ಟ್ವಿಟರ್ ಖಾತೆಯಿಂದ ಟ್ವಿಟ್ ಮಾಡಿರುವ ಮಾರುತಿ, ಕೇವಲ ಒಂದು ದಿನದೊಳಗೆ 2600ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿರುವುದಾಗಿ ತಿಳಿಸಿದೆ.

 ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು)

  • ಎಲ್‌ಡಿಐ - 717750 ರು.
  • ಎಲ್‌ಡಿಐ (ಐಚ್ಛಿಕ) - 730981 ರು.
  • ವಿಡಿಐ - 798152 ರು.
  • ವಿಡಿಐ (ಐಚ್ಛಿಕ)- 811383 ರು.
  • ಝಡ್‌ಡಿಐ - 880029 ರು.
  • ಝಡ್‌ಡಿಐ ಪ್ಲಸ್ - 980789 ರು.
  • ಝಡ್‌ಡಿಐ ಪ್ಲಸ್ (ಡ್ಯುಯಲ್ ಟೋನ್) - 995038 ರು.
ವಿಟಾರಾ ಬ್ರಿಝಾ ಮ್ಯಾಜಿಕ್; 24 ತಾಸಿನಲ್ಲಿ 2600 ಬುಕ್ಕಿಂಗ್ಸ್

ಎಂಜಿನ್ ಪ್ರಸ್ತುತ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ವಿಟಾರಾ ಬ್ರಿಝಾ ಲಭ್ಯವಾಗಲಿದೆ. ಇದರ ಡಿಡಿಐಎಸ್ 200 ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಮೈಲೇಜ್

ಮೈಲೇಜ್

ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 3995

ಅಗಲ: 1790

ಎತ್ತರ: 1640

ಚಕ್ರಾಂತರ: 2500

ಢಿಕ್ಕಿ ಜಾಗ: 328 ಲೀಟರ್

ಗ್ರೌಂಡ್ ಕ್ಲಿಯರನ್ಸ್: 198

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಫೋರ್ಡ್ ಇಕೊಸ್ಪೋರ್ಟ್,

ರೆನೊ ಡಸ್ಟರ್,

ಹ್ಯುಂಡೈ ಕ್ರೆಟಾ

ವಿಟಾರಾ ಬ್ರಿಝಾ ಮ್ಯಾಜಿಕ್; 24 ತಾಸಿನಲ್ಲಿ 2600 ಬುಕ್ಕಿಂಗ್ಸ್

ಮಾರುತಿ ವಿಟಾರಾ ಬ್ರಿಝಾ; ಈ 10 ಅಂಶಗಳು ನೆನಪಿರಲಿ!

ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆ ಗಂಟೆ ನೀಡಿದ ವಿಟಾರಾ ಬ್ರಿಝಾ

English summary
Maruti Suzuki Vitara Brezza Bookings Cross 2600 in 24 Hours
Story first published: Friday, March 11, 2016, 13:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark