ನೆಕ್ಸಾ ಶೋ ರೂಂ ತಲುಪಲಿರುವ ಮಾರುತಿ ಇಗ್ನಿಸ್, ಪರಿಷ್ಕೃತ ಸಿಯಾಝ್
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ತಿಂಗಳಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋಗೆ ಬೃಹತ್ ಯೋಜನೆಯೊಂದಿಗೆ ಮುಂದೆ ಬಂದಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ನೂತನ ಕಾನ್ಸೆಪ್ಟ್ ಗಳ ಜೊತೆಗೆ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಚಯಿಸಲಿದೆ.
Also Read: 2016ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ 23 ಕಾರುಗಳು
ಇದರಲ್ಲಿ ಮಾರುತಿ ಸುಜುಕಿ ಇಗ್ನಿಸ್ ಸಣ್ಣ ಕ್ರೀಡಾ ಬಳಕೆಯ ವಾಹನವು ಪ್ರಮುಖವಾಗಿರಲಿದೆ. ಅದೇ ಹೊತ್ತಿಗೆ ಪರಿಷ್ಕೃತ ಸಿಯಾಝ್ ಕಾರು ಸಹ ದೇಶದ ಅತಿ ದೊಡ್ಡ ವಾಹನ ಮೇಳದಲ್ಲಿ ಗೋಚರಿಸಲಿದೆ.

ಈಗ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿಯ ಭವಿಷ್ಯದ ಈ ಎರಡು ಮಾದರಿಗಳು ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮುಖಾಂತರ ಮಾರಾಟವಾಗಲಿದೆ.

ಕಳೆದ ವರ್ಷ ಮಾರುತಿ ಆರಂಭಿಸಿರುವ ನೆಕ್ಸಾ ಶೋ ರೂಂಗಳಲ್ಲಿ ಎಸ್ ಕ್ರಾಸ್ ಹಾಗೂ ಬಲೆನೊಗಳೆಂಬ ಎರಡು ಮಾದರಿಗಳ ಮಾರಾಟವನ್ನು ಮಾತ್ರ ಹಮ್ಮಿಕೊಳ್ಳಲಾಗಿತ್ತು. ಇದಕ್ಕೀಗ ಮತ್ತೆರಡು ಮಾದರಿಗಳು ಸೇರ್ಪಡೆಯಾಗಲಿದ್ದು, ನೆಕ್ಸಾ ಮುಖಾಂತರ ಮಾರಾಟ ನಡೆಯಲಿರುವ ಒಟ್ಟು ಕಾರುಗಳ ಸಂಖ್ಯೆ 4ಕ್ಕೆ ಏರಿಕೆಯಾಗಲಿದೆ.

ಮೊದಲ ಬಾರಿಗೆ ಸಿಯಾಝ್ ಬಿಡುಗಡೆಯಾದಾಗ ದೇಶದಲ್ಲಿ ಸ್ಥಿತಗೊಂಡಿರುವ ಮಾರುತಿಯ ಸಾಮಾನ್ಯ ವಿತರಕ ಜಾಲದ ಮೂಲಕ ಮಾರಾಟ ಆರಂಭಿಸಲಾಗಿತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯೂ ದೊರಕಿತ್ತು.

ಇನ್ನೊಂದೆಡೆ ಮಾರುತಿ ಸುಜುಕಿ ಇಗ್ನಿಸ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದ್ದು, ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಆಯ್ಕೆಯೂ ಇರುವ ಸಾಧ್ಯತೆಯಿದೆ.

ಮಾರುತಿಯ ನೂತನ ವಿಟಾರಾ ಬ್ರಿಝಾ ಸಹ 2016 ಆಟೋ ಎಕ್ಸ್ ಪೋದಲ್ಲೇ ಬಿಡುಗಡೆ ಕಾಣಲಿದೆ. ಆದರೆ ಕುತೂಹಲಕಾರಿ ಅಂಶವೆಂದರೆ ಈ ಕಾರು ಮಾರುತಿಯ ಪ್ರೀಮಿಯಂ ಶೋ ರೂಂ ಮುಖಾಂತರ ಮಾರಾಟವಾಗುವುದಿಲ್ಲ.

ಮಾರುತಿ ವಿಟಾರಾ ಬ್ರಿಝಾ ಟೆಸ್ಟಿಂಗ್ ವೇಳೆ ಲೀಕ್


Click it and Unblock the Notifications