ಮಾರುತಿ ಸಿಯಾಝ್ ಝಡ್‌ಎಕ್ಸ್‌ಐ ಪ್ಲಸ್ ಆಟೋಮ್ಯಾಟಿಕ್ ಕಾರು ಬಿಡುಗಡೆ
ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿರುವ ಮಾರುತಿ ಸಿಯಾಝ್‌ನ ಹೊಸ ಮಾದರಿಯು ಮಾರುಕಟ್ಟೆಗೆ ಪರಿಚಯವಾಗಿದೆ. ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಟಾಪ್ ಎಂಡ್ ಝಡ್‌ಎಕ್ಸ್‌ಐ ಪ್ಲಸ್ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 10.19 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ಇವನ್ನೂ ಓದಿ: ಮಾರುತಿ ಸಿಯಾಝ್ ಬಗ್ಗೆ ವಿವರವಾಗಿ ತಿಳಿದುಕೊಳ್ಳಿರಿ
ಇದಕ್ಕೂ ಮೊದಲು ಸಿಯಾಝ್ ವಿಎಕ್ಸ್‌ಐ ಪ್ಲಸ್ ಮತ್ತು ಝಡ್ ಎಕ್ಸ್‌ಐ ವೆರಿಯಂಟ್ ಗಳಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳು ಲಭ್ಯವಾಗಿತ್ತು. ಇದಾದ ಬಳಿಕ ಕಳೆದ ವರ್ಷಾಂತ್ಯದಲ್ಲಿ ಝಡ್ ಎಕ್ಸ್ ಐ ಪ್ಲಸ್ ಮತ್ತು ಝಡ್ ಡಿಐ ಪ್ಲಸ್ ವೆರಿಯಂಟ್ ಗಳು ಪೆಟ್ರೋಲ್ ಮತ್ತು ಡೀಸೆಲ್ ಟಾಪ್ ಎಂಡ್ ರೂಪದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದವು.

ನೂತನ ಸಿಯಾಝ್ ಝಡ್ ಎಕ್ಸ್ ಐ ಪ್ಲಸ್ ವೆರಿಯಂಟ್ ನೊಳಗೆ ಏಳು ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆಯ ಲಭ್ಯವಿರಲಿದೆ. ಇದು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ನೇವಿಗೇಷನ್ ರೂಪದಲ್ಲೂ ಕೆಲಸ ಮಾಡಲಿದೆ. ಇನ್ನು ವಾಯ್ಸ್ ಕಮಾಂಡ್ ಸೇವೆಯೂ ಇರಲಿದೆ.

ಲೆಥರ್ ಸೀಟುಗಳು ಕಾರಿನೊಳಗೆ ಮತ್ತಷ್ಟು ಪ್ರೀಮಿಯಂ ಅನುಭವವನ್ನು ತುಂಬಲಿದೆ. ಕಾರಿನ ಹೊರಮೈಯಲ್ಲಿ 16 ಇಂಚುಗಳ ಅಲಾಯ್ ವೀಲ್ ಕಂಡುಬರಲಿದೆ. ಇನ್ನು ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲಾಗಿಲ್ಲ.

ಎಂಜಿನ್ ತಾಂತ್ರಿಕತೆ
1.4 ಲೀಟರ್ ಕೆ ಸಿರೀಸ್
ಪೆಟ್ರೋಲ್ ಎಂಜಿನ್
95 ಅಶ್ವಶಕ್ತಿ
130 ಎನ್ ಎಂ ತಿರುಗುಬಲ
ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್

ಮಾರುತಿ ಸಿಯಾಝ್ ಮಾರುಕಟ್ಟೆಗೆ ಪ್ರವೇಶಿಸಿದ 10 ತಿಂಗಳಲ್ಲೇ 60,000ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಪಡೆದಿದೆ. ಇದು ಈ ಕಾರಿನ ಯಶಸ್ಸನ್ನು ಸಾರುತ್ತದೆ.

ಮಾರುತಿ ಸಿಯಾಝ್ ಝಡ್ ಎಕ್ಸ್ ಐ ಪ್ಲಸ್ ಆಟೋಮ್ಯಾಟಿಕ್ ಸ್ಟಾಂಡರ್ಡ್ ವೆರಿಯಂಟ್ ಗಿಂತಲೂ 1.13 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಪ್ರತಿಸ್ಪರ್ಧಿಗಳು: ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್ ವ್ಯಾಗನ್ ವೆಂಟೊ, ಸ್ಕೋಡಾ ರಾಪಿಡ್

ಈ ನಡುವೆ ಸಿಯಾಝ್ ಸ್ಮಾರ್ಟ್ ಹೈಬ್ರಿಡ್ ಮತ್ತು ಆರ್ ಎಸ್ ಬಿಡುಗಡೆಯಾಗಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


Click it and Unblock the Notifications