ಮಾರುತಿ ಎಸ್-ಕ್ರಾಸ್ ಬ್ರೇಕ್ ಫೇಲ್? ಭಾರಿ ಸಂಖ್ಯೆಯಲ್ಲಿ ಹಿಂದಕ್ಕೆ ಕರೆ
ಬ್ರೇಕ್ ಭಾಗದಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಸ್ ಕ್ರಾಸ್ ಕಾರನ್ನು ಭಾರಿ ಸಂಖ್ಯೆಯಲ್ಲಿ ಹಿಂದಕ್ಕೆ ಕರೆಯಲು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ನಿರ್ಧರಿಸಿದೆ.
ದೋಷಯುಕ್ತ ಬ್ರೇಕ್ ಭಾಗದಲ್ಲಿ ಶಂಕಿತ ತೊಂದರೆ ಇರುವುದರಿಂದ 20,427 ಯುನಿಟ್ ಗಳಷ್ಟು ಎಸ್ ಕ್ರಾಸ್ ಮಾದರಿಗಳಿಗೆ ವಾಪಾಸ್ ಕರೆ ನೀಡಲಾಗಿದ್ದು, ಸಮಸ್ಯೆ ಕಂಡುಬಂದ್ದಲ್ಲಿ ಸಂಪೂರ್ಣವಾಗಿ ಉಚಿತವಾಗಿ ಬಗೆ ಹರಿಹರಿಸಿ ಕೊಡಲಾಗುವುದು.

2015 ಎಪ್ರಿಲ್ 20ರಿಂದ 2016 ಫೆಬ್ರವರಿ 12ರ ವರೆಗೆ ನಿರ್ಮಾಣವಾಗಿರುವ ಎಸ್ ಕ್ರಾಸ್ 1.3 ಲೀಟರ್ ಡಿಡಿಐಎಸ್ 200 ಮತ್ತು 1.6 ಲೀಟರ್ ಡಿಡಿಐಎಸ್ ಡೀಸೆಲ್ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.

ನೀವೇನು ಮಾಡಬೇಕು?
ಮೇಲೆ ತಿಳಿಸಿದ ಅವಧಿಯಲ್ಲಿ ನೀವು ಎಸ್ ಕ್ರಾಸ್ ಕಾರನ್ನು ಖರೀದಿ ಮಾಡಿದ್ದಲ್ಲಿ ಮಾರುತಿ ಡೀಲರ್ ಗಳನ್ನು ಸಂಪರ್ಕಿಸಬಹುದಾಗಿದೆ. ಇಲ್ಲವಾದ್ದಲ್ಲಿ ಅಧಿಕೃತ ನೆಕ್ಸಾ ಎಕ್ಸ್ ಪೀರಿಯನ್ಸ್ ವೆಬ್ ಸೈಟ್ ಗೆ (www.nexaexperience.com) ಭೇಟಿ ಕೊಟ್ಟು ಪರೀಶೀಲಿಸಬಹುದಾಗಿದೆ.

ನೆಕ್ಸಾ ಎಕ್ಸ್ ಪೀರಿಯನ್ಸ್ ವೆಬ್ ಸೈಟ್ ನಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿ ಎಂಎ3 ಬಳಿಕ ನಿಮ್ಮ ಕಾರಿನ 14 ಅಂಕಿಗಳ ಚಾಸೀ ನಂಬರ್ ಹಾಕಿ ತೊಂದರೆ ಸಮಸ್ಯೆ ಇದೆಯೇ ಎಂಬದನ್ನು ಖಾತ್ರಿಪಡಿಸಬಹುದಾಗಿದೆ.

ಈ ವಾಪಾಸ್ ಕರೆಯು ಭಾರತೀಯ ವಾಹನ ತಯಾರಕರ ಒಕ್ಕೂಟದ ತಾತ್ಕಾಲಿಕ ರಿಕಾಲ್ ಕೋಡ್ ಪರಿಧಿಗೆ ಒಳಪಡುವುದಿಲ್ಲ. ಹಾಗಾಗಿ ರಿಕಾಲ್ ಎಂಬ ಪದವನ್ನು ಬಳಕೆ ಮಾಡಲಾಗುತ್ತಿಲ್ಲ ಎಂಬುದನ್ನು ಮಾರುತಿ ಸ್ಪಷ್ಟಪಡಿಸಿದೆ.

ಹ್ಯುಂಡೈ ಕ್ರೆಟಾ ಮತ್ತು ಹೋಂಡಾ ಬಿಆರ್ ವಿ ಮುಂತಾದ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಮಾರುತಿ ಎಸ್ ಕ್ರಾಸ್ ನಿಕಟ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ. ಇದರ ಬೇಸ್ 1.3 ಮತ್ತು ಟಾಪ್ ಎಂಡ್ 1.6 ಲೀಟರ್ ಡೀಸೆಲ್ ಮಾದರಿಗಳು ಅನುಕ್ರಮವಾಗಿ 8.03 ಮತ್ತು 12.03 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

2012ರಿಂದ ಭಾರತದಲ್ಲೂ ವಾಹನಗಳ ಹಿಂದಕ್ಕೆ ಕರೆ ಸಾಮಾನ್ಯ ಪ್ರಕ್ರಿಯೆಯಾಗಿ ಬಿಟ್ಟಿದ್ದು, ದೇಶದಲ್ಲಿ ಮಾತ್ರವಾಗಿ ಇದುವರೆಗೆ ಒಟ್ಟು 18 ಲಕ್ಷ ಕಾರುಗಳನ್ನು ಹಿಂದಕ್ಕೆ ಕರೆಯಲಾಗಿದೆ.

2015ರಲ್ಲಿ ಮಾರುತಿ ಸಂಸ್ಥೆಯು 33000ದಷ್ಟು ಆಲ್ಟೊ 800 ಮತ್ತು ಆಲ್ಟೊ ಕೆ10 ಮಾದರಿಗಳನ್ನು ಹಿಂದಕ್ಕೆ ಪಡೆದಿತ್ತು. ಇದಕ್ಕೂ ಮೊದಲು 2014ರಲ್ಲಿ 69,555ದಷ್ಟು ಡಿಜೈರ್, ರಿಟ್ಜ್, ಸ್ವಿಫ್ಟ್ ಮಾದರಿಗಳನ್ನು ರಿಕಾಲ್ ಗೆ ಒಳಪಡಿಸಿತ್ತು.


Click it and Unblock the Notifications