ಅತಿ ಶೀಘ್ರದಲ್ಲೇ ಮಾರುತಿ ಬಲೆನೊ ಆರ್‌ಎಸ್ ಬಿಡುಗಡೆ
ಅತ್ಯಂತ ಶಕ್ತಿಶಾಲಿ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಮಾದರಿಯು 2017 ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಕಾರಿನ ಹುಡುಕಾಟದಲ್ಲಿದ್ದೀರಾ? ಇಗೊ ಬರುತ್ತಿದೆ ಮಾರುತಿ ಬಲೆನೊ ಆರ್‌ಎಸ್. ಹೊಸ ವರ್ಷದಲ್ಲಿ ಬಲೆನೊ ಪವರ್ ಫುಲ್ ಕಾರು ಬಿಡುಗಡೆ ಮಾಡುವುದಾಗಿ ಭರವಸೆ ಕೊಟ್ಟಿರುವ ಮಾರುತಿ ಸುಜುಕಿ, 2017 ಫೆಬ್ರವರಿ ತಿಂಗಳಲ್ಲಿ ಬಲೆನೊ ಆರ್ ಎಸ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊತ್ತ ಮೊದಲ ಬಾರಿಗೆ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಮಾದರಿಯು ಮೊತ್ತ ಮೊದಲ ಬಾರಿಗೆ ಅನಾವರಣಗೊಂಡಿತ್ತು. ತದಾ ಬಳಿಕ ಹಬ್ಬದ ಆವೃತ್ತಿಯ ವೇಳೆ ಬಿಡುಗಡೆ ಬಗ್ಗೆ ನಿರೀಕ್ಷೆಗಳಿದ್ದರೂ ಬಳಿಕ ಕಾರಣಾಂತರಗಳಿಂದಾಗಿ ಲಾಂಚ್ ದಿನಾಂಕವನ್ನು ಹೊಸ ವರ್ಷಕ್ಕೆ ಮುಂದೂಡಲಾಗಿತ್ತು.

ಬಲೆನೊ ಆರ್ ಎಸ್ ಮಾದರಿಯಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ 1 ಲೀಟರ್ ತ್ರಿ ಸಿಲಿಂಡರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿದೆ. ಇದು 111 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಮರ್ಥವಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಗೆ ಆಗಲೇ ಎಂಟ್ರಿ ಕೊಟ್ಟಿರುವ ಬಲೆನೊ ಹೊಸ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ನೂತನ ಬಲೆನೊ ಆರ್ ಎಸ್ ಎಲ್ಲ ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಜೋಡಣೆಯಾಗಲಿದ್ದು, ಹೆಚ್ಚು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ವಿನ್ಯಾಸದ ವಿಚಾರದಲ್ಲೂ ಸ್ಟ್ಯಾಂಡರ್ಡ್ ಬಲೆನೊಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿರುವ ಬಲೆನೊ ಆರ್ ಎಸ್, ಕಪ್ಪು ವರ್ಣದ ಕ್ರೀಡಾತ್ಮಕ ಅಲಾಯ್ ವೀಲ್ ಪಡೆಯಲಿದೆ.

ಇನ್ನು ಗರಿಷ್ಠ ವೈಶಿಷ್ಟ್ಯಗಳಿಗೆ ಮನೆ ಮಾಡಲಾಗುವುದು. ಇದರಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಔಟ್ ಸೈಡ್ ರಿಯರ್ ವ್ಯೂ ಮಿರರ್ ವ್ಯವಸ್ಥೆಗಳಿರಲಿದೆ.

ಅತ್ತ ಭದ್ರತೆಗೂ ಹೆಚ್ಚು ಆದ್ಯತೆಯನ್ನು ಕೊಡಲಾಗಿದ್ದು, ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಬ್ರೇಕಿಂಗ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್, ರಿವರ್ಸ್ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸಾರ್ ಗಳಿರುತ್ತದೆ.

ದೇಶದ ನಿರ್ವಹಣಾ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಗುರುತಿಸಿಕೊಳ್ಳಲಿರುವ ನೂತನ ಬಲೆನೊ ಅಂದಾಜು ಎಂಟು ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಮತ್ತು ಫಿಯೆಟ್ ಪುಂಟೊ ಇವೊ ಅಬಾರ್ತ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








