ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

Written By:

ಬಲೆನೊ ಪೆಟ್ರೋಲ್ ಟಾಪ್ ಎಂಡ್ ಆವೃತ್ತಿಯಲ್ಲೂ ಆಟೋಮ್ಯಾಟಿಕ್ ಆಯ್ಕೆಯನ್ನು ನಿರೀಕ್ಷೆ ಮಾಡುತ್ತಿದ್ದವರಿಗೊಂದು ಸಿಹಿ ಸುದ್ದಿ ಬಂದಿದೆ. ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಾಗಿರುವ ಬಲೆನೊ ಪೆಟ್ರೋಲ್ ಆಟೋಮ್ಯಾಟಿಕ್ ಕಾರನ್ನು ಬಿಡುಗಡೆಗೊಳಿಸಿದೆ.

Also Read: ಮಾರುತಿ ಬಲೆನೊ; ಯಾವ ಯಾವ ವೆರಿಯಂಟ್‌ನಲ್ಲಿ ಏನೇನಿದೆ? ಮುಂದಕ್ಕೆ ಓದಿ

ನೂತನ ಬಲೆನೊ ಆಟೋಮ್ಯಾಟಿಕ್ ಟಾಪ್ ಎಂಡ್ ಆದ 'ಝೆಟಾ' ವೆರಿಯಂಟ್ ನಲ್ಲಿ ಲಭ್ಯವಾಗಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 7.47 ಲಕ್ಷ ರು.ಗಳಾಗಿದೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ನೂತನ ಬಲೆನೊ ಪೆಟ್ರೋಲ್ ಆಟೋಮ್ಯಾಟಿಕ್ ಕಾರಿನಲ್ಲಿ ಸಿಟಿವಿ ಅಥವಾ Continuous Variable Transmission ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ಟಾಪ್ ಎಂಡ್ ಬಲೆನೊ ಝೆಟಾ ವೆರಿಯಂಟ್ ನಲ್ಲಿ ಅಲಾಯ್ ವೀಲ್, ಫ್ರಂಟ್ ಫಾಗ್ ಲ್ಯಾಂಪ್, ಆಟೋ ಹೆಡ್ ಲ್ಯಾಂಪ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್, ಆಟೋ ಡಿಮ್ಮಿಂಗ್ ಆಆರ್‌ವಿಎಂ, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಕೀಲೆಸ್ ಎಂಟ್ರಿ ಆಂಡ್ ಗೊ, ಗ್ಲೋಬಾಕ್ಸ್, ಕಲರ್ ಟಿಎಫ್ ಟಿ ಸ್ಕ್ರೀನ್ ಇತ್ಯಾದಿ ಸೌಲಭ್ಯಗಳು ಲಭ್ಯವಾಗಲಿದೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ವಿನ್ಯಾಸ, ತಂತ್ರಗಾರಿಕೆ ಹಾಗೂ ನಿರ್ವಹಣೆ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿರುವ ಬಲೆನೊ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಹ್ಯುಂಡೈ ಎಲೈಟ್ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಬಲೆನೊ ಕಣಕ್ಕಿಳಿದಿತ್ತು.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ಇದಕ್ಕೂ ಮೊದಲು ಡೆಲ್ಟಾ ವೆರಿಯಂಟ್ ನಲ್ಲಿ ಆಟೋಮ್ಯಾಟಿಕ್ ಆಯ್ಕೆಯನ್ನು ಕೊಡಲಾಗಿತ್ತು. ಇದಕ್ಕೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗ ಝೆಟಾ ಮಾದರಿಯಲ್ಲೂ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡಲು ಸಂಸ್ಥೆಯು ಮುಂದಾಗಿದೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಲೆನೊ ಇದುವರೆಗೆ 44,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟವನ್ನು ಕಂಡಿದೆ. ಅಷ್ಟೇ ಯಾಕೆ 55,000ದಷ್ಟು ಮಂದಿ ಈಗಲೂ ತಮ್ಮ ಕನಸಿನ ಕಾರಿಗಾಗಿ ಕಾಯುತ್ತಿದ್ದಾರೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ಸುಜುಕಿಯ ತವರು ಮಾರುಕಟ್ಟೆಯಾದ ಜಪಾನ್ ಗೆ ರಫ್ತು ಮಾಡಲಾಗುತ್ತಿರುವ ಮಾರುತಿಯ ಮೊದಲ ಮಾದರಿ ಎಂಬ ಖ್ಯಾತಿಯೂ ಬಲೆನೊಗೆ ಸಲ್ಲುತ್ತದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತದಿಂದಲೇ 100ಕ್ಕೂ ರಾಷ್ಟ್ರಗಳಿಗೆ ರಫ್ತು ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ.

ಮಾರುತಿ ಬಲೆನೊ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರು ಬಿಡುಗಡೆ

ಬಲೆನೊ ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಕೆ ಸಿರೀಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 83 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅದೇ ಹೊತ್ತಿಗೆ ಫಿಯೆಟ್ ನಿಂದ ಆಮದು ಮಾಡಲಾಗಿರುವ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ 74 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇವೆರಡೂ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಯಂತ್ರಿಸಲ್ಪಡುತ್ತಿದೆ. ಅಂತೆಯೇ ಈ ಮೊದಲೇ ತಿಳಿಸಿರುವಂತೆಯೇ ಪೆಟ್ರೋಲ್ ಆವೃತ್ತಿಯು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲೂ ಲಭ್ಯವಿರುತ್ತದೆ.

ಇವನ್ನೂ ಓದಿ...

ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಭರ್ಜರಿ ಬಿಡುಗಡೆ

English summary
Maruti Suzuki Baleno Zeta Petrol Automatic launched in India
Story first published: Thursday, April 7, 2016, 9:36 [IST]
Please Wait while comments are loading...

Latest Photos