ಗ್ರಾಹಕರಿಗೆ ಬಂಪರ್; ಸಿಯಾಝ್ ಹೈಬ್ರಿಡ್ ಕಾರಿಗೆ 69,000 ರು. ಕಡಿತ

By Nagaraja

ರಾಷ್ಟ್ರ ರಾಜಧಾನಿ ನವದೆಹಲಿ ನಿವಾಸಿಗಳಿಗೊಂದು ಸಿಹಿ ಸುದ್ದಿ. ಹಾಗೊಂದು ವೇಳೆ ಮಾರುತಿ ಸಿಯಾಝ್ ಹೈಬ್ರಿಡ್ ಕಾರನ್ನು ಖರೀದಿಸಲು ಬಯಸುವುದಾದ್ದಲ್ಲಿ ಇದುವೇ ಸಕಾಲ! ಯಾಕೆಂದರೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸಿಯಾಝ್ ಡೀಸೆಲ್ ಎಸ್‌ವಿಎಚ್‌ಎಸ್ ಹೈಬ್ರಿಡ್ ಕಾರಿನ ಮೇಲೆ 69,000 ರು.ಗಳಷ್ಟು ಬೆಲೆ ಕಡಿತವನ್ನು ಘೋಷಿಸಿದೆ.

ನ್ಯಾಶನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆಯ ಭಾಗವಾಗಿ (NEMMP) ಅಬಕಾರಿ ಸುಂಕದಲ್ಲಿ ಶೇಕಡಾ 50ರಷ್ಟು ಕಡಿತಗೊಳಿಸಿರುವುದೇ ಮಾರುತಿ ಸಿಯಾಝ್ ಹೈಬ್ರಿಡ್ ಕಾರಿನಲ್ಲಿ ಭಾರಿ ಬೆಲೆ ಇಳಿಕೆಯಾಗಲು ಕಾರಣವಾಗಿದೆ.

ಗ್ರಾಹಕರಿಗೆ ಬಂಪರ್; ಸಿಯಾಝ್ ಹೈಬ್ರಿಡ್ ಕಾರಿಗೆ 69,000 ರು. ವರೆಗೆ ಬೆಲೆ ಇಳಿಕೆ

ಎನ್‌ಇಎಂಎಂಪಿ ಯೋಜನೆಯಡಿಯಲ್ಲಿ ಸಿಯಾಝ್ ಎಸ್‌ಎಚ್‌ವಿಎಸ್ ಕಾರಿನ ಅಬಕಾರಿ ಸುಂಕವನ್ನು ಶೇಕಡಾ 24ರಿಂದ ಶೇಕಡಾ 12.5ಕ್ಕೆ ಇಳಿಕೆಗೊಳಿಸಲಾಗಿದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ನೀಡಲು ಮಾರುತಿ ಮುಂದಾಗಿದೆ.

ಗ್ರಾಹಕರಿಗೆ ಬಂಪರ್; ಸಿಯಾಝ್ ಹೈಬ್ರಿಡ್ ಕಾರಿಗೆ 69,000 ರು. ವರೆಗೆ ಬೆಲೆ ಇಳಿಕೆ

ಇದರೊಂದಿಗೆ ಮಾರುತಿ ಸಿಯಾಝ್ ಎಲ್ಲ ವೆರಿಯಂಟ್ ಗಳ ಎಕ್ಸ್ ಶೋ ರೂಂ ಬೆಲೆಗಳಲ್ಲಿ 55,000 ರು.ಗಳಿಂದ ಗರಿಷ್ಠ 69,000 ರು.ಗಳ ವರೆಗೆ ಇಳಿಕೆ ಕಂಡುಬಂದಿದೆ. ಇದಕ್ಕೂ ಮೊದಲು 8.23 ಲಕ್ಷ ರು.ಗಳಷ್ಟು ದುಬಾರಿಯೆನಿಸಿಕೊಂಡಿದ್ದ ಸಿಯಾಝ್ ವಿಡಿಐ ವೆರಿಯಂಟ್ ಪರಿಷ್ಕೃತ ಬೆಲೆಯಂತೆ 7.68 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸಂಪೂರ್ಣ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ವಿಡಿಐ

ಪರಿಷ್ಕೃತ ಬೆಲೆ: 7.68 ಲಕ್ಷ ರು.

ಹಿಂದಿನ ಬೆಲೆ: 8.23 ಲಕ್ಷ ರು.

ಎಷ್ಟು ಕಡಿತ: 55,000 ರು.

 ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ವಿಡಿಐ (ಐಚ್ಛಿಕ)

ಪರಿಷ್ಕೃತ ಬೆಲೆ: 7.81 ಲಕ್ಷ ರು.

ಹಿಂದಿನ ಬೆಲೆ: 8.38 ಲಕ್ಷ ರು.

ಎಷ್ಟು ಕಡಿತ: 57,000 ರು.

 ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ವಿಡಿಐ ಪ್ಲಸ್

ಪರಿಷ್ಕೃತ ಬೆಲೆ: 8.22 ಲಕ್ಷ ರು.

ಹಿಂದಿನ ಬೆಲೆ: 8.82 ಲಕ್ಷ ರು.

ಎಷ್ಟು ಕಡಿತ: 60,000 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಝಡ್‌ಡಿಐ

ಪರಿಷ್ಕೃತ ಬೆಲೆ: 8.89 ಲಕ್ಷ ರು.

ಹಿಂದಿನ ಬೆಲೆ: 9.53 ಲಕ್ಷ ರು.

ಎಷ್ಟು ಕಡಿತ: 64,000 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಝಡ್‌ಡಿಐ ಪ್ಲಸ್

ಪರಿಷ್ಕೃತ ಬೆಲೆ: 9.49 ಲಕ್ಷ ರು.

ಹಿಂದಿನ ಬೆಲೆ: 10.18 ಲಕ್ಷ ರು.

ಎಷ್ಟು ಕಡಿತ: 69,000 ರು.

ಗ್ರಾಹಕರಿಗೆ ಬಂಪರ್; ಸಿಯಾಝ್ ಹೈಬ್ರಿಡ್ ಕಾರಿಗೆ 69,000 ರು. ವರೆಗೆ ಬೆಲೆ ಇಳಿಕೆ

ಅಂದ ಹಾಗೆ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿರುವ ಮಾರುತಿ ಸಿಯಾಝ್ ಹೈಬ್ರಿಡ್ ಮಾದರಿಯು 200 ಎನ್ ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಅಲ್ಲದೆ 5 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಗ್ರಾಹಕರಿಗೆ ಬಂಪರ್; ಸಿಯಾಝ್ ಹೈಬ್ರಿಡ್ ಕಾರಿಗೆ 69,000 ರು. ವರೆಗೆ ಬೆಲೆ ಇಳಿಕೆ

ಭಾರತೀಯ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆಯ ಮಾರುತಿ ಸಿಯಾಝ್ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಗೆ 28.09 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇಂಟೇಗ್ರೇಟಡ್ ಸ್ಟ್ಯಾರ್ಟರ್ ಜನರೇಟರ್, ಬ್ರೇಕ್ ಎನರ್ಜಿ ರಿಕವರಿ ಸಿಸ್ಟಂ ಮತ್ತು ಆಟೋ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ ವ್ಯವಸ್ಥೆಗಳು ಗರಿಷ್ಠ ಇಂಧನ ಕ್ಷಮತೆ ನೀಡಲು ಸಹಕಾರಿಯಾಗಿದೆ.

Article Published On: Thursday, May 19, 2016, 18:12 [IST]
English summary
Maruti Suzuki Decides To Lower Pricing Of Its Ciaz SHVS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+