ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

By Nagaraja

ಫ್ರಾನ್ಸ್ ಮೂಲದ ಮುಂಚೂಣಿಯ ಸಂಸ್ಥೆಯಾಗಿರುವ ರೆನೊ ಭಾರತದಲ್ಲಿ ಬಿಡುಗಡೆ ಮಾಡಿರುವ ಕ್ವಿಡ್ ಸಣ್ಣ ಕಾರು ವಿಭಾಗದಲ್ಲಿ ಅತಿ ಹೆಚ್ಚಿನ ಯಶಸ್ಸಿಗೆ ಪಾತ್ರವಾಗಿದೆ. ಇದು ಎಂಟ್ರಿ ಲೆವೆಲ್ ವಿಭಾಗದಲ್ಲಿ ಮಾರುತಿ ಮತ್ತು ಹ್ಯುಂಡೈ ಸಂಸ್ಥೆಗಳು ಚಿಂತೆಗೀಡು ಮಾಡಿದೆ.

ಕ್ರೀಡಾ ಬಳಕೆಯ ವಾಹನ ಶೈಲಿಯ ನಿರ್ಮಾಣ ಶೈಲಿಯು ಕ್ವಿಡ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಸ್ಪರ್ಧಾತ್ಮಕ ಬೆಲೆ, ನಿರ್ವಹಣೆ ಹಾಗೂ ವೈಶಿಷ್ಟ್ಯಗಳು ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುವಂತೆ ಮಾಡಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ರೆನೊ ಕ್ವಿಡ್ ಅಪಾಯದಿಂದ ಎಚ್ಚೆತ್ತುಕೊಂಡಿರುವ ಮಾರುತಿ 2018ನೇ ಸಾಲಿನಲ್ಲಿ 'ಟಾಲ್ ಬಾಯ್' ಕ್ರಾಸೋವರ್ ಶೈಲಿಯ ಆಲ್ಟೊ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಇನ್ನೊಂದೆಡೆ ಹ್ಯುಂಡೈ ಸಹ ಆಂತರಿಕವಾಗಿ ಹೊಸ ಕಾರಿನ ಯೋಜನೆಯಲ್ಲಿ ತೊಡಗಿಸಿಕೊಂಡಿದೆ. ಇದು 'ಎಎಚ್' ಎಂಬ ಕೋಡ್ ಪಡೆದಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಈ ಎಲ್ಲ ಮಾದರಿಗಳು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಮಾರುಕಟ್ಟೆಗಿಳಿಯಲಿದೆ. ನೂತನ ವಾಹನದ ಮಾರಾಟವನ್ನು ಹ್ಯುಂಡೈ ಲೆಕ್ಕಚಾರ ಹಾಕಿದ್ದು, 95,000 ಯುನಿಟ್ ಗಳಿಂದ ಒಂದು ಲಕ್ಷದಷ್ಟು ಯುನಿಟ್ ಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ ಎಂಬುದನ್ನು ಮೂಲಗಳು ತಿಳಿಸಿವೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಅತ್ತ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಸಹ ಇತ್ತೀಚೆಗಷ್ಟೇ ಎಸ್‌ಯುವಿ ಶೈಲಿಯ ಕೆಯುವಿ100 ಬಿಡುಗಡೆಗೊಳಿಸಿತ್ತು. ಇದು 4.5 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಿಡ್ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಅಥವಾ ವಿತರಣೆಯನ್ನು ಪಡೆದಿದ್ದಾರೆ. ಇದರ ಪ್ರಾರಂಭಿಕ ಬೆಲೆ 2.6 ಲಕ್ಷ ರು.ಗಳಷ್ಟಾಗಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಇನ್ನೊಂದೆಡೆ ಮಹೀಂದ್ರ ಕೆಯುವಿ100 ಈಗಾಗಲೇ 37,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆದಿದೆ. ಇವೆಲ್ಲವೂ ಎಸ್ ಯುವಿ ಅಥವಾ ಎಸ್ ಯುವಿ ಶೈಲಿಯ ಕಾರುಗಳ ಮೇಲಿನ ಬೇಡಿಕೆಯನ್ನು ಸೂಚಿಸುತ್ತದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಬಲ್ಲ ಮೂಲಗಳ ಪ್ರಕಾರ ರೆನೊ ಕ್ವಿಡ್ ಅಪಾಯವನ್ನು ಅರಿತುಕೊಂಡಿರುವ ಮಾರುತಿ, ಮತ್ತಷ್ಟು ಆಕ್ರಮಣಕಾರಿ ನೀತಿಯನ್ನು ಅನುಸರಿಸುವ ಮೂಲಕ ಭರ್ಜರಿ ಪುನರಾಗಮನ ಮಾಡಿಕೊಳ್ಳುವ ಇರಾದೆಯಲ್ಲಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ವಾಹನ ವಿಶ್ಲೇಷಕರ ಪ್ರಕಾರ ಕ್ರಾಸೋವರ್ ಶೈಲಿಯ ಕಾರು ಜೊತೆಗೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಲ್ಲಿ ಭಾರತೀಯ ಗ್ರಾಹಕರ ಪಾಲಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಇದು ದೇಶದಲ್ಲಿನ ಈಗಿನ ಬೆಳವಣಿಗೆಯನ್ನು ಸೂಚಿಸುತ್ತಿದೆ.

ರೆನೊ ಕ್ವಿಡ್ ಯಶಸ್ಸಿನಿಂದ ಚಿಂತೆಗೆ ಒಳಗಾದ ಮಾರುತಿ, ಹ್ಯುಂಡೈ

ಏತನ್ಮಧ್ಯೆ ನೂತನ ಕ್ರಾಸೋವರ್ ಹ್ಯಾಚ್ ಬ್ಯಾಕ್ ಕಾರಾಗಿರುವ ಮಾರುತಿ ಇಗ್ನಿಸ್ ರಸ್ತೆಗಿಳಿಯಲು ಸಜ್ಜಾಗಿ ನಿಂತಿದೆ. ಇದು ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿದ್ದು, ಆರು ಲಕ್ಷ ರು.ಗಳ ಬೆಲೆ ಪರಿಧಿ ಹೊಂದಿರಲಿದೆ.

More from DriveSpark

Article Published On: Saturday, April 16, 2016, 13:01 [IST]
English summary
Maruti Suzuki is considering next Alto in a crossover style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+