ಹಳೆಯ ದಾಖಲೆಗಳನ್ನು ಅಳಿಸಿದ ಮಾರುತಿ; ದಿನವೊಂದರಲ್ಲೇ 30,000 ಕಾರುಗಳ ಮಾರಾಟ
ಪ್ರತಿ ವರ್ಷದಂತೆ ಈ ಬಾರಿಯೂ ದಂತೆರಾಸ್ ದಿನದಂದು ಕಾರುಗಳ ಮಾರಾಟದಲ್ಲಿ ಭಾರಿ ಏರುಗತಿ ಕಂಡಿದೆ.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ದೀಪಾವಳಿ ಹಬ್ಬದ ಮೊದಲ ದಿನವಾದ 'ದಂತೆರಾಸ್' ದಿನದಂದು 30,000 ಯುನಿಟ್ ಗಳಷ್ಟು ಮಾರಾಟ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ದೀಪಾವಳಿ ಹಬ್ಬದ ಶುಭ ಸಂಭ್ರದಮದಲ್ಲಿ ದೇಶದ ವಾಹನ ಮಾರುಕಟ್ಟೆ ಗರಿಷ್ಠ ಮಾರಾಟವನ್ನು ದಾಖಲಿಸಿದೆ.

ಹಬ್ಬದ ಆವೃತ್ತಿಗೆ ಮೆರಗು ತುಂಬಲು ಹಾಗೂ ತಮ್ಮ ಕುಟುಂಬದ ಜೊತೆ ಸಂಭ್ರಮವನ್ನು ಹಂಚಿಕೊಳ್ಳಲು ಹೊಸ ಆತಿಥಿಯನ್ನು ಬರಮಾಡಿಕೊಳ್ಳಲಾಯಿತು.

2016 ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,74,659 ಯುನಿಟ್ ಗಳಷ್ಟು ಮಾರಾಟವನ್ನು ದಾಖಲಿಸಲಾಗಿತ್ತು. ಈ ಪೈಕಿ ಮಾರುತಿ ಸುಜುಕಿ ಮಾತ್ರವಾಗಿ ಶೇಕಡಾ 50ರಷ್ಟು ಮಾರಾಟವನ್ನು ವಶಪಡಿಸಿಕೊಂಡಿದ್ದು, 1,32,321 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ವಾಹನ ವಿಶ್ಲೇಷಕರ ಪ್ರಕಾರ ಮಾರುತಿ ಸುಜುಕಿ ದಾಖಲಿಸಿರುವ ಯಶಸ್ಸು ಬೇರೆ ಯಾವ ವಾಹನ ಸಂಸ್ಥೆಗಳಿಂದಲೂ ಸದ್ಯಕ್ಕೆ ಮೀರಿಸಲು ಸಾಧ್ಯವಿಲ್ಲ.

ಭಾರತ ವಾಹನ ಮಾರುಕಟ್ಟೆಯಲ್ಲಿ ಮಾರುತಿ ಸಾಧಿಸುತ್ತಿರುವ ಜನಪ್ರಿಯತೆ ಹಾಗೂ ನಂಬಿಕೆಯ ಜೊತೆಗೆ ಗುಣಮಟ್ಟದ ಉತ್ಪನ್ನಗಳು ಇದಕ್ಕಿರುವ ಕಾರಣವಾಗಿದೆ.

ಮಾರುತಿ ಆಲ್ಟೊ ಜೊತೆಗೆ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್, ವಿಟಾರಾ ಬ್ರಿಝಾ ಹೆಚ್ಚಿನ ಬೇಡಿಕೆಯನ್ನು ಕಾಪಾಡಿಕೊಂಡಿದೆ. ಈ ಪೈಕಿ ಬಲೆನೊ ಹಾಗೂ ವಿಟಾರಾ ಬ್ರಿಝಾ ಬುಕ್ಕಿಂಗ್ ಅವಧಿ ಹೆಚ್ಚಿದೆ.

ಕಳೆದ ವರ್ಷ ದಂತೆರಾಸ್ ದಿನದ ಮಾರಾಟಕ್ಕಿಂತಲೂ ಶೇಕಡಾ 20ರಷ್ಟು ಹೆಚ್ಚು ಮಾರಾಟವನ್ನು ಮಾರುತಿ ದಾಖಲಿಸಿದೆ.

2015 ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಬಲೆನೊ ಕಾರುಗಳನ್ನು ಮಾರಾಟ ಮಾಡಿದೆ. ಅದೇ ರೀತಿ 2016 ಮಾರ್ಚ್ ನಲ್ಲಿ ಬಿಡುಗಡೆಯಾಗಿರುವ ವಿಟಾರಾ ಬ್ರಿಝಾ ಇದುವರೆಗೆ 50,000ಕ್ಕೂ ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಇನ್ನೊಂದೆಡೆ ದಂತೆರಾಸ್ ದಿನದ ಮಾರಾಟದಲ್ಲಿ ಹ್ಯುಂಡೈ ಸಹ ಕಳೆದ ವರ್ಷಕ್ಕಿಂತಲೂ ಶೇಕಡಾ 26ರಷ್ಟು ಏರುಗತಿ ಸಾಧಿಸಿದ್ದು, 15,153 ಯುನಿಟ್ ಗಳಷ್ಟು ಮಾರಾಟವನ್ನು ದಾಖಲಿಸಿದೆ.


Click it and Unblock the Notifications








