ಜನಪ್ರಿಯ ಮಾರುತಿ ಕಾರುಗಳಿಗೆ ಆಫರ್; ಮಿಸ್ ಮಾಡದಿರಿ!

By Nagaraja

ನಿಮ್ಮ ಮೆಚ್ಚಿನ ಮಾರುತಿ ಕಾರುಗಳನ್ನು ಖರೀದಿಸಲು ಬಯಸುವೀರಾ? ಹಾಗಿದ್ದರೆ ಇದುವೇ ಸಕಾಲ! ಯಾಕೆಂದರೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿಗಳಿಗೆ ಆಕರ್ಷಕ ಆಫರುಗಳನ್ನು ಮುಂದಿಡುತ್ತಿದೆ.

ಎಂಜಿನ್ ನಿರ್ವಹಣೆ, ಆರಾಮ, ಅನುಕೂಲ, ಆಫ್ಟರ್ ಸೇಲ್ಸ್ ಸರ್ವೀಸ್ ಹೀಗೆ ಎಲ್ಲ ಹಂತಗಳಲ್ಲೂ ಹೆಚ್ಚು ಗುಣಮಟ್ಟತೆಯನ್ನು ಕಾಯ್ದುಕೊಂಡಿರುವ ಮಾರುತಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಪ್ರಸ್ತುತ ಎಂಟು ಮಾದರಿಗಳಿಗೆ 10,000 ರು.ಗಳಿಂದ ಗರಿಷ್ಠ 35,000 ರು.ಗಳ ವರೆಗೆ ಮಾರುತಿ ಆಫರ್ ಗಳನ್ನು ಒದಗಿಸುತ್ತಿದೆ. ಕೆಲವು ನಿರ್ದಿಷ್ಟ ಡೀಲರುಗಳ ಬಳಿ ಸೀಮಿತ ಅವಧಿಯ ವರೆಗೂ ಮಾತ್ರ ಆಫರುಗಳು ಮುಂದುವರಿಯಲಿದೆ.

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಆಲ್ಟೊ 800 ಖರೀದಿ ವೇಳೆಯಲ್ಲಿ 15,000 ರು.ಗಳ ರಿಯಾಯಿತಿ ದರಗಳನ್ನು ನೀಡಲಾಗುತ್ತಿದೆ. ಅಲ್ಲದೆ 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಮಾರುತಿ ಆಲ್ಟೊ ಕೆ10

ಮಾರುತಿ ಆಲ್ಟೊ ಕೆ10

ಮಾರುತಿ ಆಲ್ಟೊ ಕೆ10 ಖರೀದಿ ವೇಳೆಯಲ್ಲೂ 15,000 ರು.ಗಳ ರಿಯಾಯಿತಿ ಮತ್ತು 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಈಡು ಮಾಡಬಹುದಾಗಿದೆ.

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ

ಮಾರುತಿ ಸೆಲೆರಿಯೊ ಪೆಟ್ರೋಲ್ ಮತ್ತು ಡೀಸೆಲ್ ಕಾರು ಖರೀದಿ ವೇಳೆಯಲ್ಲಿ ಅನುಕ್ರಮವಾಗಿ 10,000 ರು. ಮತ್ತು 25,000 ರು.ಗಳ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಹಾಗೆಯೇ 20,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಹ ನೀಡಲಾಗುತ್ತಿದೆ.

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಿಗೆ 25,000 ರು.ಗಳ ನಗದು ಆಫರ್ ಲಭ್ಯವಿರುತ್ತದೆ. ಇದರ ಜೊತೆಗೆ 35,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಿಗಲಿದೆ. ಇನ್ನು ಮಾರುತಿ ವ್ಯಾಗನಾರ್ ಆಟೋಮ್ಯಾಟಿಕ್ ಮತ್ತು ಸಿಎನ್ ಜಿ ಆವೃತ್ತಿಗಳಿಗೆ 35,000 ರು.ಗಳ ಎಕ್ಸ್ ಚೇಂಜ್ ಮತ್ತು 20,000 ರು.ಗಳ ಡಿಸ್ಕೌಂಟ್ ನೀಡಲಾಗುತ್ತದೆ.

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಜನಪ್ರಿಯ ಹ್ಯಾಚ್ ಬ್ಯಾಕ್ ಕಾರಾಗಿರುವ ಮಾರುತಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಖರೀದಿ ವೇಳೆಯಲ್ಲಿ 10,000 ರು.ಗಳ ಡಿಸ್ಕೌಂಟ್ ಮತ್ತು 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತದೆ.

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ಖರೀದಿ ವೇಳೆಯಲ್ಲೂ ಸಂಸ್ಥೆಯು 10,000 ರು.ಗಳ ನಗದು ಆಫರ್ ಮತ್ತು 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ನೀಡುತ್ತಿದೆ.

ಮಾರುತಿ ಸಿಯಾಝ್

ಮಾರುತಿ ಸಿಯಾಝ್

ಮಾರುತಿ ಸಿಯಾಝ್ ಮಧ್ಯಮ ಗಾತ್ರದ ಸೆಡಾನ್ ಕಾರಿನ ವೇಳೆಯಲ್ಲಿ 15,000 ರು.ಗಳ ಆಫರ್ ನೀಡಲಾಗುತ್ತಿದೆ. ಅಂತೆಯೇ ಸಿಯಾಝ್ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಖರೀದಿ ವೇಳೆಯಲ್ಲಿ 30,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಿಗಲಿದೆ.

ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ

ಕೊನೆಯದಾಗಿ ಮಾರುತಿಯ ಜನಪ್ರಿಯ ಬಹು ಬಳಕೆಯ ವಾಹನ ಎರ್ಟಿಗಾ ಖರೀದಿಯಲ್ಲೂ 20,000 ರು.ಗಳ ಪ್ರಯೋಜನ ನೀಡಲಾಗುತ್ತಿದೆ. ಹಾಗೆಯೇ 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಹ ಸಿಗಲಿದೆ.

Article Published On: Thursday, July 7, 2016, 17:24 [IST]
English summary
8 Maruti Suzuki Models Being Offered With Discounts & Benefits
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+