ಮಾರುತಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ದುಬಾರಿಯಾಯ್ತು ಬ್ರಿಝಾ, ಬಲೆನೊ
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಬೆಲೆ ಏರಿಕೆ ಘೋಷಣೆ ಮಾಡಿದೆ. ಪ್ರತಿಕೂಲವಾಗಿ ಬಾಧಿಸಿರುವ ವಿದೇಶಿ ವಿನಿಮಯ ವಹಿವಾಟಿನ ಹಿನ್ನೆಲೆಯಲ್ಲಿ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆ ಮಾಡಲು ಸಂಸ್ಥೆಯು ನಿರ್ಧರಿಸಿದೆ.
ನೂತನ ಬೆಲೆ 2016 ಆಗಸ್ಟ್ 01ರಿಂದಲೇ ಜಾರಿಗೆ ಬರಲಿದೆ ಎಂಬುದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ. ಇದರೊಂದಿಗೆ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ವಿಟಾರಾ ಬ್ರಿಝಾ, ಬಲೆನೊ ಆವೃತ್ತಿಗಳ ಮಾರಾಟದ ಮೇಲೆ ಪರಿಣಾಮ ಬೀರುವ ಭೀತಿಯಿದೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಮಾರುತಿ, ವಿದೇಶಿ ವಿನಿಮಯ, ಬೇಡಿಕೆ ಹಾಗೂ ಕಂಪನಿ ನೀತಿಯ ಭಾಗವಾಗಿ ಬೆಲೆ ಏರಿಕೆ ಘೋಷಿಸಲಾಗಿದೆ ಎಂಬುದನ್ನು ಖಚಿತಪಡಿಸಿದೆ.

ಮಾರುತಿ ಜನಪ್ರಿಯ ಮಾದರಿಗಳಿಗೆ 1,500ರಿಂದ 5,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಲಾಗಿದೆ.

ಮಾರುತಿಯ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಬಲೆನೊಗೆ ಗರಿಷ್ಠ 10,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬಂದಿದೆ.

ಅದೇ ಹೊತ್ತಿಗೆ ಕಳೆದ ಮಾರ್ಚ್ ತಿಂಗಳಿನಲ್ಲಷ್ಟೇ ಬಿಡುಗಡೆಗೊಂಡಿರುವ ಬ್ರಿಟಾರಾ ಬ್ರಿಝಾ ಕ್ರೀಡಾ ಬಳಕೆಯ ವಾಹನಕ್ಕೆ 20,000 ರು.ಗಳ ವರೆಗೆ ಬೆಲೆ ಏರಿಕೆ ನಿಗದಿಯಾಗಿದೆ.

ಕಳೆದೂಂದು ವರ್ಷದ ಅವಧಿಯಲ್ಲಿ ಇದು ನಾಲ್ಕನೇ ಬಾರಿಗೆ ಮಾರುತಿ ಸುಜುಕಿ ಬೆಲೆ ಏರಿಕೆ ಘೋಷಿಸಿದೆ. ಇದಕ್ಕೂ ಮೊದಲು ಜನವರಿ ತಿಂಗಳಲ್ಲಿ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆಗೊಳಿಸಿತ್ತು. ಆಗಲೂ ಮಾರುತಿ ಬಲೆನೊ ಬೆಲೆಯಲ್ಲಿ 20,000 ರು.ಗಳ ವರೆಗೆ ಬೆಲೆ ಏರಿಕೆಯಾಗಿತ್ತು.

ಜುಲೈ ತಿಂಗಳಲ್ಲಿ 1,25,778 ಯುನಿಟ್ ಗಳ ಮಾರಾಟ ದಾಖಲಿಸಿರುವ ಮಾರುತಿ ಶೇಕಡಾ 13.9ರಷ್ಟು ಮಾರಾಟ ಏರುಗತಿ ಸಾಧಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 1,10,405 ಯುನಿಟ್ ಗಳಷ್ಟು ಬೆಲೆ ಏರಿಕೆಗೊಳಿಸಿತ್ತು.


Click it and Unblock the Notifications








