ಮಾರುತಿ, ಹೋಂಡಾ, ಹ್ಯುಂಡೈ ಕಾರುಗಳು ದುಬಾರಿ
2016-17ನೇ ಸಾಲಿನ ಕೇಂದ್ರ ಬಜೆಟ್ ವಾಹನ ವಲಯದ ಪಾಲಿಗೆ ಕೆಟ್ಟ ಪರಿಣಾಮ ಬೀರುವ ಭೀತಿಯು ಹೆಚ್ಚಾಗಿದ್ದು, ಈ ನಡುವೆ ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಬೆನ್ನಲ್ಲೇ ಜನಪ್ರಿಯ ಸಂಸ್ಥೆಗಳಾದ ಮಾರುತಿ ಸುಜುಕಿ, ಹೋಂಡಾ ಕಾರ್ಸ್ ಇಂಡಿಯಾ ಲಿಮೆಟೆಡ್ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಸಂಸ್ಥೆಗಳು ಸಹ ಬೆಲೆ ಏರಿಕೆ ನೀತಿಯನ್ನು ಘೋಷಿಸಿದೆ.
Also Read: ಬಜೆಟ್ ಎಫೆಕ್ಟ್; ದುಬಾರಿಯಾಯ್ತು ಟಾಟಾ ಕಾರುಗಳು
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಮುಂಗಡಪತ್ರದಲ್ಲಿ ಮೂಲಸವಲತ್ತು ತೆರಿಗೆ (ಸೆಸ್) ಹೆಚ್ಚಳಗೊಳಿಸಲು ಪ್ರಸ್ತಾಪಿಸಿದ್ದರು. ಇದಾದ ಬೆನ್ನಲ್ಲೇ ಮೂಲಸವಲತ್ತು ತೆರಿಗೆ ಅಡ್ಡ ಪರಿಣಾಮವನ್ನು ಸರಿದೂಗಿಸಲು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆಯೇ ವಾಹನ ಸಂಸ್ಥೆಗಳು ಬೆಲೆ ಏರಿಕೆ ಘೋಷಿಸಿವೆ.

ಯಾವೆಲ್ಲ ಸಂಸ್ಥೆಗಳಿಂದ ಎಷ್ಟೆಷ್ಟು ಬೆಲೆ ಏರಿಕೆ ?
ಮಾರುತಿ ಸುಜುಕಿ - 1,441 ರು.ಗಳಿಂದ 34,494 ರು.ಗಳ ವರೆಗೆ
ಹ್ಯುಂಡೈ - 2,889 ರು.ಗಳಿಂದ 82,906 ರು.ಗಳ ವರೆಗೆ
ಹೋಂಡಾ - 4,000 ರು.ಗಳಿಂದ 79,000 ರು.ಗಳ ವರೆಗೆ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2016-17ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಾಹನಗಳ ಮೂಲಸವಲತ್ತು ಮೇಲಿನ ತೆರಿಗೆಗಳನ್ನು ಹೆಚ್ಚಳಗೊಳಿಸಿತ್ತು. ಇದು ವಾಹನೋದ್ಯಮ ಮೇಲೆ ನೇರ ಪರಿಣಾಮ ಬೀರಿದೆ.

ಹಾಗಿದ್ದರೂ ಮಾರುತಿಯ ಜನಪ್ರಿಯ ಮಾದರಿಗಳಾದ ಸಿಯಾಝ್ ಎಸ್ ಎಚ್ ವಿಎಸ್ ಮತ್ತು ಎರ್ಟಿಗಾ ಎಸ್ ಎಚ್ ವಿಎಸ್ ಕಾರುಗಳಿಗೆ ಮೂಲ ಸೌಕರ್ಯ ತೆರಿಗೆಯಿಂದ ವಿನಾಯಿತಿ ಇರುವುದರಿಂದ ಈ ಎರಡು ಕಾರಿನ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ.

ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಆಲ್ಟೊ 800 ತೊಡಗಿ ಎಸ್ ಕ್ರಾಸ್ ವರೆಗಿನ ಕಾರುಗಳ ಕಾರುಗಳು ದೆಹಲಿ ಎಕ್ಸ್ ಶೋರೂಂ ಬೆಲೆಯ ಪ್ರಕಾರ 2.54 ಲಕ್ಷ ರು.ಗಳಿಂದ 11.69 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಮಾರಾಟವಾಗುತ್ತಿದೆ.

ಹೋಂಡಾ ಕಾರುಗಳಿಗೆಷ್ಟು ಬೆಲೆ ಏರಿಕೆ ?
ಬ್ರಿಯೊ - 4,000 ರು.ಗಳಿಂದ 6,000 ರು.ಗಳ ವರೆಗೆ
ಜಾಝ್ - 5,000 ರು.ಗಳಿಂದ 19,000 ರು.ಗಳ ವರೆಗೆ
ಅಮೇಜ್ - ಈಗಷ್ಟೇ ಬಿಡುಗಡೆಯಾಗಿದೆ.
ಸಿಟಿ - 24,600 ರು.ಗಳಿಂದ 38,100 ರು.ಗಳ ವರೆಗೆ
ಮೊಬಿಲಿಯೊ - 21,800 ರು.ಗಳಿಂದ 37,700 ರು.ಗಳ ವರೆಗೆ
ಸಿಆರ್ ವಿ - 66,500 ರು.ಗಳಿಂದ 79,000 ರು.ಗಳ ವರೆಗೆ

ಹ್ಯುಂಡೈ ಕಾರುಗಳಿಗೆಷ್ಟು ಬೆಲೆ ಏರಿಕೆ ?
(ಬೇಸ್ ಬೆಲೆ)
ಇಯಾನ್ - 2,889 ರು.
ಐ10 - 3,848 ರು.
ಗ್ರಾಂಡ್ - 4,286 ರು.
ಎಕ್ಸ್ ಸೆಂಟ್ - 4,726 ರು.
ಎಲೈಟ್ ಐ20 - 4,886 ರು.
ಆಕ್ಟಿವ್ - 5,857 ರು.
ವೆರ್ನಾ - 5,677 ರು.
ಕ್ರೆಟಾ - 27,192 ರು.
ಎಲಂಟ್ರಾ - 45,044 ರು.
ಸಾಂಟಾಫೆ - 82,906 ರು.


Click it and Unblock the Notifications








