ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಅತಿ ನೂತನ ಮಾರುತಿ ಸುಜುಕಿ ಇಗ್ನಿಸ್ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

By Nagaraja

ಬಹುನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಮಿನಿ ಕ್ರಾಸೋವರ್ ಕಾರು ಬಿಡುಗಡೆ ಸಂಬಂಧ ಅನೇಕ ಊಹಾಪೋಹಗಳು ಎದ್ದಿದ್ದವು. ಆರಂಭದಲ್ಲಿ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಮಾಹಿತಿಗಳಿದ್ದರೂ ಬಳಿಕ ಕಾರಣಾಂತರಗಳಿಂದಾಗಿ ಬಿಡುಗಡೆಯನ್ನು ಹೊಸ ವರ್ಷಕ್ಕೆ ಮುಂದೂಡಲಾಗಿತ್ತು. ಈಗ ಇಗ್ನಿಸ್ ಆಗಮನಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿಗಳು ಹೊರಬಂದಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆಗೆ ಕಾರಣವಾಗಿರುವ ಮಾರುತಿ ಸುಜುಕಿ ಇಗ್ನಿಸ್ 2017ನೇ ಸಾಲಿನ ಫೆಬ್ರವರಿ ತಿಂಗಳಲ್ಲಿ ದೇಶಕ್ಕೆ ಪ್ರವೇಶಿಸಲಿದೆ. ಇದರೊಂದಿಗೆ ಗೊಂದಲಗಳಿಗೆ ತೆರೆ ಎಳೆದಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

2015 ಟೊಕಿಯೋ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದ್ದ ಸುಜುಕಿ ಇಗ್ನಿಸ್ ಬಳಿಕ ಭಾರತದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಮಾರುತಿ ಬಲೆನೊ ಹ್ಯಾಚ್ ಬ್ಯಾಕ್ ಮತ್ತು ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಗಳಿಗೆ ಭಾರಿ ಬೇಡಿಕೆ ಕಂಡುಬಂದಿದ್ದರಿಂದ ಇಗ್ನಿಸ್ ಬಿಡುಗಡೆ ಪ್ರಕ್ರಿಯೆಯು ವಿಳಂಬವಾಗಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಬಲ್ಲ ಮೂಲಗಳ ಪ್ರಕಾರ ನೂತನ ಮಾರುತಿ ಇಗ್ನಿಸ್ 1 ಲೀಟರ್ ಬೂಸ್ಟರ್ ಜೆಟ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಎಂಜಿನ್ ಗಿಟ್ಟಿಸಿಕೊಳ್ಳಲಿದೆ. ಆರಂಭದಲ್ಲಿ ಇದು ಪೆಟ್ರೋಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಾಗಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಇನ್ನು ಮ್ಯಾನುವಲ್ ಫೈವ್ ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಬಳಿಕ 1.2 ಲೀಟರ್ ವಿಟಿವಿಟಿ ಪೆಟ್ರೋಲ್ ಮತ್ತು 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಯ್ಕೆಗಳು ಇಗ್ನಿಸ್ ಗೆ ಜೋಡಣೆಯಾಗಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಮಿನಿ ಕ್ರಾಸೋವರ್ ಶೈಲಿಯ ಇಗ್ನಿಸ್ ಕಾರಿನಲ್ಲಿ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ವೀಲ್ ಆರ್ಚ್, ಅಗಲವಾದ ಸಿ ಪಿಲ್ಲರ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರನ್ಸ್ ಇರಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಅಂತೆಯೇ ಕಾರಿನೊಳಗೆ ಹೈ ಎಂಡ್ ಹರ್ಮಾನ್ ಕರ್ಡಾನ್ ಆಡಿಯೋ ಸಿಸ್ಟಂ ಕಂಡುಬರಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಇಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಜೊತೆಗೆ ಹಿಲ್ ಡಿಸೆಂಟ್ ಕಂಟ್ರೋಲ್ ವ್ಯವಸ್ಥೆಗಳು ಲಭ್ಯವಾಗಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಭಾರತದಲ್ಲಿ ಪ್ರೀಮಿಯಂ ನೆಕ್ಸಾ ಶೋ ರೂಂ ಗಳ ಮುಖಾಂತರ ಇಗ್ನಿಸ್ ಮಾರಾಟವಾಗಲಿದೆ. ಅಲ್ಲದೆ ಮಹೀಂದ್ರ ಕೆಯುವಿ100 ಮಾದರಿಗೆ ನೇರ ಎದುರಾಳಿಯಾಗಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಮಾರುತಿ ಸುಜುಕಿ ಇಗ್ನಿಸ್ 5.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಅಂತೂ ಇಂತೂ ಇಗ್ನಿಸ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಏತನ್ಮಧ್ಯೆ ಮಾರುತಿ ಸುಜುಕಿ ಇಗ್ನಿಸ್ ಆಲ್ ವೀಲ್ ಡ್ರೈವ್ ವ್ಯವಸ್ಥೆಯಲ್ಲೂ ಲಭ್ಯವಾಗುತ್ತಿದ್ದು, ಇದು ಭಾರತಕ್ಕೂ ಆಗಮನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

More from DriveSpark

Article Published On: Wednesday, November 23, 2016, 9:45 [IST]
English summary
Maruti Suzuki Ignis To Be Launched In India In February 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+