ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

Written By:

ಬಹುನಿರೀಕ್ಷಿತ ಮಾರುತಿ ಸುಜುಕಿ ಇಗ್ನಿಸ್ ಮುಂಬರುವ ವರ್ಷಾರಂಭದಲ್ಲಿ ಅಂದರೆ ಜನವರಿ 13ರಂದು ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ. ಈ ಸಂಬಂಧ ಹೊರ ಬಂದಿರುವ ವರದಿಗಳು ಪುಷ್ಠಿ ನೀಡುತ್ತಿದ್ದು, ಮಾರುತಿ ಸುಜುಕಿ ಇಗ್ನಿಸ್ ಕಾಂಪಾಕ್ಟ್ ಕ್ರಾಸೋವರ್ ಕಾರು ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆಯೆಂದು ಅಧಿಕೃತ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಇದರೊಂದಿಗೆ ದೇಶದ ಅತಿ ದೊಡ್ಡ ಪ್ರಯಾಣಿಕ ವಾಹನ ಸಂಸ್ಥೆ ಮಾರುತಿ ಸುಜುಕಿ ಬದಲಾವಣೆಯ ಪರ್ವದಲ್ಲಿದ್ದು, ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಸಣ್ಣ ಕಾರು ವಿಭಾಗದಿಂದ ಹೆಚ್ಚು ಸೌಲಭ್ಯಗಳನ್ನು ಒಳಗೊಂಡಿರುವ ಕಾರುಗಳ ಬಿಡುಗಡೆ ಮಾಡುವುದರಲ್ಲಿ ಮಗ್ನವಾಗಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಮಾರುತಿ ಪ್ರೀಮಿಯಂ ನೆಕ್ಸಾ ಡೀಲರುಗಳ ಮುಖಾಂತರ ಇಗ್ನಿಸ್ ಮಾರಾಟವು ನಡೆಯಲಿದೆ. ತನ್ಮೂಲಕ ನೆಕ್ಸಾ ಮುಖಾಂತರ ಮಾರಾಟವಾಗಲಿರುವ ಮೂರನೇ ಕಾರು ಎಂದೆನಿಸಿಕೊಳ್ಳಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಇದಕ್ಕೂ ಮೊದಲು 2016 ವರ್ಷಾರಂಭದಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತ್ತು. ಇದೀಗ ಕಾಯುವಿಕೆಗೆ ವಿರಾಮ ಹಾಕಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ನೂತನ ಇಗ್ನಿಸ್ ಕಾರಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟಲ್ ಡೀಸೆಲ್ ಎಂಜಿನ್ ನಿರೀಕ್ಷೆ ಮಾಡಬಹುದಾಗಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಿಟ್ಟಿಸಿಕೊಳ್ಳಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಆಧುನಿಕತೆಗೆ ತಕ್ಕಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಗಳು ಇರಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಕಾರಿನೊಳಗೆ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ಆಪಲ್ ಕಾರ್ ಪ್ಲೇ, ಯುಎಸ್ ಬಿ ಮತ್ತು ಆಕ್ಸ್ ಸೇವೆಗಳಿರಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆಗೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ವ್ಯವಸ್ಥೆಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಇಗ್ನಿಸ್ ಜೊತೆಗೆ ಬದಲಾವಣೆಯ ಪರ್ವದಲ್ಲಿ ಮಾರುತಿ

ಈ ಹಿಂದೆ ಹಬ್ಬದ ಆವೃತ್ತಿಯಲ್ಲೇ ಇಗ್ನಿಸ್ ಬಿಡುಗಡೆ ನಿಗದಿಗೊಳಿಸಲಾಗಿತ್ತಾದರೂ ವಿಟಾರಾ ಬ್ರಿಝಾ ಹಾಗೂ ಬಲೆನೊಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಲಾಂಚ್ ದಿನಾಂಕವನ್ನು ಹೊಸ ವರ್ಷಕ್ಕೆ ಮುಂದೂಡಲಾಗಿತ್ತು.

ಅಂದ ಹಾಗೆ ಮಾರುತಿ ಸುಜುಕಿ ಇಗ್ನಿಸ್ ಮಿನಿ ಕ್ರಾಸೋವರ್ ಕಾರು ದೇಶದ ಮಾರುಕಟ್ಟೆಯಲ್ಲಿ 4ರಿಂದ 7 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

English summary
Maruti Suzuki Ignis India Launch On 13th January 2017

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark