ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

By Nagaraja

ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಮಾರುತಿ ಇಗ್ನಿಸ್ ಭರ್ಜರಿ ಅನಾವರಣಗೊಂಡಿತ್ತು. ಈಗ ಇದರ ನಿರ್ಮಾಣ ಸಿದ್ಧ ಆವೃತ್ತಿಯು ರಸ್ತೆ ಪರೀಕ್ಷಾರ್ಥ ಚಾಲನೆಯಲ್ಲಿ ತೊಡಗಿಸಿಕೊಂಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ನೂತನ ಮಾರುತಿ ಇಗ್ನಿಸ್ ಟೆಸ್ಟಿಂಗ್ ನಡೆಸುತ್ತಿರುವ ವೇಳೆ ಕ್ಯಾಮೆರಾ ರಹಸ್ಯ ಕಣ್ಣಗಳಿಗೆ ಸೆರೆ ಸಿಕ್ಕಿವೆ. ಇದು ಬಹು ಬೇಗನೇ ದೇಶದ ಮಾರುಕಟ್ಟೆಗೆ ಪ್ರವೇಶಿಸುವ ಬಗ್ಗೆ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಐ-ಎಂ4 ಕಾನ್ಸೆಪ್ಟ್ ಕಾರಿನಿಂದ ಅಭಿವೃದ್ಧಿಪಡಿಸಿರುವ ಮಾರುತಿ ಇಗ್ನಿಸ್ ಒಂದು ಸಬ್ ಕಾಂಪಾಕ್ಟ್ ಕ್ರಾಸೋವರ್ ಕಾರಾಗಿದೆ. ಇದು ತವರೂರಾದ ಜಪಾನ್ ಮೂರಕಟ್ಟೆಯನ್ನು ಇದೇ ತಿಂಗಳಲ್ಲಿ ತಲುಪಲಿದ್ದು, ಭಾರತದಲ್ಲಿ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗಲಿದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಪಟ್ಟಣ ಪ್ರದೇಶದಲ್ಲಿ ವಾಸಿಸುವ ನಗರವಾಸಿಗಳಿಗೆ ಇಗ್ನಿಸ್ ದೈನಂದಿನ ಸವಾರಿಗೆ ಪರಿಪೂರ್ಣ ಆಯ್ಕೆಯಾಗಿರಲಿದೆ. ಇದು ಕೂಡಾ ವ್ಯಾಗನಾರ್ ತರಹನೇ ಟಾಲ್ ಬಾಯ್ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಸದ್ಯಕ್ಕೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಜಪಾನ್ ನಲ್ಲಿ ಬಿಡುಗಡೆಯಾಗಲಿರುವ ಇಗ್ನಿಸ್ 1.2 ಲೀಟರ್ ಡ್ಯುಲ್ ಜೆಟ್ ಎಂಜಿನ್ ಪಡೆಯಲಿದೆ. ಅಲ್ಲದೆ ಸುಜುಕಿಯ ಅತಿ ನೂತನ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವೂ ಇರಲಿದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಅಂತೆಯೇ 1.3 ಲೀಟರ್ ಡೀಸೆಲ್ ಎಂಜಿನ್ ಪ್ರತಿ ಲೀಟರ್ ಗೆ 25.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಹಾಗೊಂದು ವೇಳೆ ಸುಜುಕಿ ಇಗ್ನಿಸ್ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯಲ್ಲೂ ಬಿಡುಗಡೆಯಾದ್ದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಇದು ಹಿಲ್ ಡಿಸೆಂಟ್ ಕಂಟ್ರೋಲ್, ಗ್ರಿಪ್ ಕಂಟ್ರೋಲ್, ಎಬಿಎಸ್ ಜೊತೆ ಇಬಿಡಿ ಮುಂತಾದ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕ ಮಾರುತಿ ಇಗ್ನಿಸ್

ಇನ್ನುಳಿದಂತೆ ಟಚ್ ಸ್ಕ್ರೀನ್ ನೇವಿಗೇಷನ್ ಸಿಸ್ಟಂ, ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ ವ್ಯವಸ್ಥೆಯು ಇರಲಿದ್ದು, ದೇಶದಲ್ಲಿ 4ರಿಂದ 6 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುವ ಸಾಧ್ಯತೆಯಿದೆ.

Article Published On: Saturday, February 20, 2016, 10:58 [IST]
English summary
Maruti Ignis Spied, Seen Testing On Roads
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+