ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಮಾರುತಿ ಸುಜುಕಿ ಐಕ್ರಿಯೆಟ್ ಎಂಬ ಕಾರನ್ನು ವೈಯಕ್ತೀಕರಣಗೊಳಿಸುವ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸಿದ್ದು, ಗ್ರಾಹಕರು ತಮ್ಮ ತಮ್ಮ ಕಾರುಗಳನ್ನು ಅಭಿರುಚಿಗೆ ತಕ್ಕಂತೆ ಬದಲಾಯಿಸಬಹುದಾಗಿದೆ.

By Nagaraja

ಕಾರುಗಳು ಸರ್ವೇಸಾಮಾನ್ಯ ನೋಟದಿಂದ ಬೆಸತ್ತು ಹೋಗಿರುವೀರಾ? ನಾನು ಖರೀದಿಸುವ ಕಾರಾದರೂ ಇತರೆ ಕಾರುಗಳಿಂದ ವಿಭಿನ್ನವಾಗಿ ಗೋಚರಿಸಬೇಕೆಂಬ ಇರಾದೆಯಿದೆಯೇ? ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನೂತನ ಐಕ್ರಿಯೆಟ್ (iCreate) ಎಂಬ ವೈಯಕ್ತೀಕರಣಗೊಳಿಸುವ ಪ್ಯಾಕೇಜನ್ನು ಬಿಡುಗಡೆಗೊಳಿಸಿದೆ. ನೂತನ ವೈಶಿಷ್ಟ್ಯದಂತೆ ಗ್ರಾಹಕರು ನೂತನ ಕಾರು ವಿತರಣೆಗಿಂತಲೂ ಮೊದಲೇ ತಮ್ಮ ಕಾರುಗಳನ್ನು ವೈಯಕ್ತೀಕರಣಗೊಳಿಸಬಹುದಾಗಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಬಲ್ಲ ಮೂಲಗಳ ಪ್ರಕಾರ ಪ್ರಸ್ತುತ ಕಸ್ಟಮೈಸ್ಟ್ ಆಯ್ಕೆಯು ಅತಿ ಬೇಡಿಕೆಯ ವಿಟಾರಾ ಬ್ರಿಝಾ ಕಾರಿಗೆ ಮಾತ್ರ ಲಭ್ಯವಿದ್ದು, ಮಾರುತಿಯ 500ರಷ್ಟು ಸಾರ್ವತ್ರಿಕ ಆಕ್ಸೆಸರಿಗಳು ಲಭ್ಯವಾಗಲಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಸಂಸ್ಥೆಯ ಪ್ರಕಾರ ವಿಟಾರಾ ಬ್ರಿಝಾದಲ್ಲಿ 90ರಷ್ಟು ವಿಶಿಷ್ಟ ಆಕ್ಸೆಸರಿಗಳಿಂದ ಗ್ರಾಹಕೀಯಗೊಳಿಸುವ ಮೂಲಕ ವಾಹನ ಪ್ರೇಮಿಗಳು ಅತ್ಯಾಧ್ಬುತ ಚಾಲನಾ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ವಿಟಾರಾ ಬ್ರಿಝಾ ಕಾರಿಗೆ ದೊರಕುವ ಪ್ರತಿಕ್ರಿಯೆಗೆ ಅನುಸಾರವಾಗಿ ಐ ಕ್ರಿಯೆಟ್ ವ್ಯಯಕ್ತೀಕರಣ ತಳಹದಿಯನ್ನು ಮತ್ತಷ್ಟು ಜನಪ್ರಿಯ ಕಾರುಗಳಿಗೆ ವಿಸ್ತರಿಸಿಕೊಳ್ಳಲು ಸಂಸ್ಥೆಯು ಯೋಜನೆಯಿರಿಸಿಕೊಂಡಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಮೂಲಗಳ ಪ್ರಕಾರ ನೂತನ ಖರೀದಿಗಾರನೊಬ್ಬ ಡೀಲರುಗಳ ಬಳಿ ಕಾರಿನ ಅಂತಿಮ ದರಗಿಂತಲೂ 10,500 ರು.ಗಳಷ್ಟು ಹೆಚ್ಚುವರಿ ದುಡ್ಡು ಖರ್ಚು ಮಾಡುತ್ತಾನೆ. ವಿಟಾರ ಬ್ರಿಝಾದಲ್ಲಿ ಈ ಪ್ರಮಾಣವು ಸರಾಸರಿ 24,000 ರು.ಗಳಷ್ಟಾಗಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಮಾರುತಿ ಐಕ್ರಿಯೆಟ್ ವೈಯಕ್ತೀಕರಣ ಪ್ಯಾಕೇಜನ್ನು ಬುಕ್ಕಿಂಗ್ ಮಾಡುವ ವೇಳೆಯಲ್ಲಿಯೇ ನೀಡಲಾಗುತ್ತದೆ. ಆಕರ್ಷಕರ ಹೊರಮೈ ಬಣ್ಣಗಳ ಹೊರತಾಗಿ, ವಿಶೇಷ ಬಾಡಿ ಗ್ರಾಫಿಕ್ಸ್, ಟೈಲ್ ಲ್ಯಾಂಪ್, ಅಲಾಯ್ ಚಕ್ರಗಳು ಇತ್ಯಾದಿ ಸೌಲಭ್ಯಗಳು ದೊರಕಲಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಅದೇ ರೀತಿ ಕಾರಿನೊಳಗೆ ಸೀಟು ಕವರ್, ಮ್ಯಾಟ್ಸ್, ಆಕ್ಸೆಸರಿ, ಸ್ಟೈಲಿಂಗ್ ಘಟಕಗಳು, ಇನ್ಪೋಟೈನ್ಮೆಂಟ್, ಟಿವಿ ಸೆಟ್, ಡಿವಿಡಿ ಮತ್ತು ಹಿಂಬದಿ ಪ್ರಯಾಣಿಕರಿಗೂ ಸ್ಪೀಕರ್ ಸೇವೆಗಳಿರಲಿದೆ.

ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್

ಒಟ್ಟಿನಲ್ಲಿ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಐಕ್ರಿಯೆಟ್ ಪ್ಯಾಕೇಜ್ ಮೂಲಕ ಕಾರನ್ನು ಬದಲಾಯಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅತ್ಯುತ್ತಮ ಬೇಡಿಕೆ ವ್ಯಕ್ತವಾಗುವ ಸಾಧ್ಯತೆಯಿದೆ.

More from DriveSpark

Article Published On: Tuesday, October 18, 2016, 16:55 [IST]
English summary
Maruti Suzuki Launches iCreate Customisation Feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+