ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಈ ವರ್ಷಾಂತ್ಯದ ವೇಳೆಯಲ್ಲಿ ಮಾರುತಿ ಡೀಸೆಲ್ ಕಾರುಗಳಲ್ಲಿ ಗರಿಷ್ಠ ಆಫರ್ ನೀಡಲಾಗುತ್ತಿದೆ.

By Super Admin

ಈ ವರ್ಷಾಂತ್ಯದ ವೇಳೆಯಲ್ಲಿ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ಗರಿಷ್ಠ ಆಫರ್ ಗಳೊಂದಿಗೆ ಮುಂದೆ ಬರುತ್ತಿದೆ. ಒಂದೆಡೆ ಕ್ರಿಸ್ಮಸ್ ಹಾಗೂ ಹೊಸ ವರ್ಷಗಳನ್ನು ಬರಮಾಡಿಕೊಳ್ಳುವ ಸಂಭ್ರಮ ಇನ್ನೊಂದೆಡೆ ನೋಟು ಸಮಸ್ಯೆ ಹೀಗೆ ಎಲ್ಲವನ್ನು ಸಮತೋಲದಲ್ಲಿಟ್ಟುಕೊಳ್ಳಲು ಗರಿಷ್ಠ ಆಫರುಗಳನ್ನು ಮುಂದಿಟ್ಟಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಸಹ ಇದರಿಂದ ಹೊರತಾಗಿಲ್ಲ. ಈ ಡಿಸೆಂಬರ್ ವೇಳೆಯಲ್ಲಿ ತನ್ನ ಡೀಸೆಲ್ ಶ್ರೇಣಿಯ ಕಾರುಗಳಿಗೂ ಗರಿಷ್ಠ ಆಫರುಗಳನ್ನು ಮಾರುತಿ ನೀಡುತ್ತಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಮಾರುತಿ ಡೀಸೆಲ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 75,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಮಾರುತಿಯ ಆರುಜನಪ್ರಿಯ ಮಾದರಿಗಳಿಗೆ ಈ ಆಫರ್ ಅನ್ವಯವಾಗಲಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಮಾರುತಿ ಎರ್ಟಿಗಾ ಡೀಸೆಲ್ ಕಾರು ಖರೀದಿ ವೇಳೆಯಲ್ಲಿ 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಅತ್ತ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಡೀಸೆಲ್ ಕಾರು ಖರೀದಿಯಲ್ಲಿ 10,000 ರು.ಗಳ ನಗದು ರಿಯಾಯಿತಿ ಮತ್ತು 15,000 ರು.ಗಳ ಎಕ್ಸ್ ಚೇಂಜ್ ಆಫರ್ ಲಭ್ಯವಾಗಲಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಮಾರುತಿ ಸ್ವಿಫ್ಟ್ ಡೀಸೆಲ್ ಹ್ಯಾಚ್ ಬ್ಯಾಕ್ ಕಾರನ್ನು ಕೊಳ್ಳುವಾಗಲೂ 15,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 10,000 ರು.ಗಳ ನಗದು ರಿಯಾಯಿತಿ ಸಿಗಲಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಏತನ್ಮಧ್ಯೆ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವ ಮಾರುತಿ, ತನ್ನ ಜನಪ್ರಿಯ ರಿಟ್ಜ್ ಹ್ಯಾಚ್ ಬ್ಯಾಕ್ ಕಾರಿಗೂ 35,000 ರು.ಗಳ ನಗದು ರಿಯಾಯಿತಿ ಮತ್ತು 25,000 ರು.ಗಳ ಎಕ್ಸ್ ಚೇಂಜ್ ಬೋನಸ್ ಆಫರನ್ನು ಮುಂದಿಟ್ಟಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಮಾರುತಿ ಸಿಯಾಝ್ ಡೀಸೆಲ್ ಕಾರು ಖರೀದಿಯಲ್ಲೂ 20,000 ರು.ಗಳ ನಗದು ಡಿಸ್ಕೌಂಟ್ ಮತ್ತು 40,000 ರು.ಗಳ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತಿದೆ.

ಮಾರುತಿ ಡೀಸೆಲ್ ಕಾರುಗಳಿಗೂ ವರ್ಷಾಂತ್ಯದ ಆಫರ್

ಕೊನೆಯದಾಗಿ ಸೆಲೆರಿಯೊ ಡೀಸೆಲ್ ಕಾರು ಖರೀದಿಯಲ್ಲಿ 30,000 ರು.ಗಳ ಡಿಸ್ಕೌಂಟ್, 25,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು 20,000 ರು.ಗಳ ಹೆಚ್ಚುವರಿ ಡಿಸ್ಕೌಂಟ್ ಗಿಟ್ಟಿಸಿಕೊಳ್ಳಬಹುದಾಗಿದೆ.

More from DriveSpark

Article Published On: Wednesday, December 7, 2016, 17:43 [IST]
English summary
Maruti Suzuki Announces Offers & Benefits For December 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+