2020ರ ವೇಳೆಯಾಗುವಾಗ ಸಣ್ಣ ಡೀಸೆಲ್ ಕಾರುಗಳ ಯುಗಾಂತ್ಯ
2020ರ ವೇಳೆಯಾಗುವಾಗ ಸಣ್ಣ ಡೀಸೆಲ್ ಕಾರುಗಳ ಬೇಡಿಕೆ ಕುಸಿಯಲಿದೆ ಎಂದು ಮಾರುತಿ ಸುಜುಕಿ ಅಭಿಪ್ರಾಯಪಟ್ಟಿದೆ.
2020ರ ವೇಳೆಯಾಗುವಾಗ ಸಣ್ಣ ಡೀಸೆಲ್ ಕಾರುಗಳು ಯುಗಾಂತ್ಯ ಕಾಣಲಿದೆಯೆಂದು ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯ ಮುಖ್ಯಸ್ಥರಾಗಿರುವ ಆರ್ ಸಿ ಭಾರ್ಗವ ಅಭಿಪ್ರಾಯಪಟ್ಟಿದ್ದಾರೆ. ಈ ಹಿರಿಯ ಆಟೋಮೊಬೈಲ್ ಗಣ್ಯ ವ್ಯಕ್ತಿಯ ಪ್ರಕಾರ ದೇಶದಲ್ಲಿ ಪೆಟ್ರೋಲ್ ಕಾರುಗಳು ಮತ್ತಷ್ಟು ಜನಪ್ರಿಯತೆ ಸಾಧಿಸಲಿದೆ.

ಅದೇ ಹೊತ್ತಿಗೆ ಸಣ್ಣ ಕಾರುಗಳಿಗೂ ಏರ್ ಬ್ಯಾಗ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಪರಿಚಯಿಸುವ ನೀತಿಯು ಅಪಕ್ವವಾಗಿರಲಿದೆ ಎಂದು ವಿವರಿಸಿದ್ದಾರೆ.

ಈ ನಡುವೆ ಕಪ್ಪು ಹಣ ಹರಿವನ್ನು ತಡೆಯಲು ಕೇಂದ್ರ ಸರಕಾರದ ಅಪನಗದೀಕರಣ ನೀತಿಯನ್ನು ಸ್ವಾಗತಿಸಿರುವ ಅವರು ಭಾರತವು ವಿಶ್ವದ ಘಟಕವಾಗಿ ಮಾರ್ಪಾಡಲು ಶಿಪ್ರ ಗತಿಯ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ಇನ್ನು ಪರಿಸರದಲ್ಲಿ ಆಗುತ್ತಿರುವ ಮಾಲಿನ್ಯಕ್ಕೆ ಕಾರುಗಳನ್ನು ದೂಷಿಸುವುದು ಸರಿಯಲ್ಲ ಎಂಬುದಾಗಿಯೂ ತಿಳಿಸಿದರು. ವಾಣಿಜ್ಯ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಈಗಲೂ ಕಳಪೆ ಯುರೋ II ಮಾಲಿನ್ಯ ಮಟ್ಟದಲ್ಲಿ ಒಡಾಡುತ್ತಿದೆ. ಅತ್ತ ಕಾರುಗಳು ಯುರೋ IV ಎಮಿಷನ್ ಮಟ್ಟವನ್ನು ಕಾಪಾಡಿಕೊಂಡಿದೆ ಎಂದಿದ್ದಾರೆ.

2020ರ ವೇಳೆಯಾಗುವಾಗ ಡೀಸೆಲ್ ಕಾರುಗಳ ಬೆಲೆಗಳು ಮತ್ತಷ್ಟು ದುಬಾರಿಯಾಗಲಿದೆ. ಈಗ ಐದು ದುಬಾರಿಯಾಗಲಿರುವ ಕಾರು ಯುರೋ IV ಮಾಲಿನ್ಯ ಮಟ್ಟ ಜಾರಿಗೆ ಬರುವುದರೊಂದಿಗೆ ಮತ್ತಷ್ಟು ಒಂದು ಲಕ್ಷ ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

ಇನ್ನೊಂದೆಡೆ ಪೆಟ್ರೋಲ್ ಕಾರುಗಳು ನಾಲ್ಕು ಲಕ್ಷ ರು.ಗಳಿಗೆ ಸಿಗಲಿದೆ. ಇದರಿಂದಾಗಿ ಗ್ರಾಹಕರು ಡೀಸೆಲ್ ಕಾರುಗಳನ್ನು ಖರೀದಿಸಲಾರರು ಎಂದು ವಿವರಿಸುತ್ತಾರೆ.

ಏತನ್ಮಧ್ಯೆ ದೇಶದಲ್ಲಿ ಮೂಲಸೌಕರ್ಯಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ಕಾರುಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಭಾರ್ಗವ ತಿಳಿಸಿದ್ದಾರೆ.

ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡಿ ಇಂಧನ ಕ್ಷಮತೆಯನ್ನು ಹೆಚ್ಚಿಸುವುದು ಎಲೆಕ್ಟ್ರಿಕ್ ಕಾರುಗಳ ಗುರಿಯಾಗಿದೆ. ಇದನ್ನು ಹೈಬ್ರಿಡ್ ಕಾರುಗಳ ಮುಖಾಂತರವೂ ಸಾಧಿಸಬಹುದು. ಇದರತ್ತ ಸ್ಪರ್ಧಾತ್ಮಕ ಬೆಲೆಗಳಲ್ಲಿ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲು ಮಾರುತಿ ಬದ್ಧವಾಗಿದೆ ಎಂಬುದನ್ನು ತಿಳಿಸಿದ್ದಾರೆ.


Click it and Unblock the Notifications








