ಮಾರುತಿ ಸ್ವಿಫ್ಟ್ ಡಿಜೈರ್ ಎಎಂಟಿ ಕಾರು ಭಾರತದಲ್ಲಿ ಭರ್ಜರಿ ಬಿಡುಗಡೆ
ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಅತಿ ನೂತನ ಸ್ವಿಫ್ಟ್ ಡಿಜೈರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಕಾರನ್ನು ಭಾರತದಲ್ಲಿ ಭರ್ಜರಿ ಬಿಡುಗಡೆ ಮಾಡಿದೆ.
ಇಟಲಿಯ ಐಕಾನಿಕ್ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಮಾರುತಿಗೆ ಎಎಂಟಿ ಗೇರ್ ಬಾಕ್ಸ್ ರವಾನಿಸಲಿದೆ. ಇದನ್ನು ಸಂಸ್ಥೆಯು ಆಟೋ ಗೇರ್ ಶೀಫ್ಟ್ ಅಥವಾ ಎಜಿಎಸ್ ಎಂದು ಹೆಸರಿಸಿಕೊಳ್ಳಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಟಾಪ್ ಎಂಡ್ ಝಢ್‌ಡಿಐ ಡೀಸೆಲ್ ಮಾದರಿಯಲ್ಲಿ ಎಜಿಎಸ್ ಸೌಲಭ್ಯ ಸಿಗಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 8.39 ಲಕ್ಷ ರು.ಗಳಾಗಿವೆ.

ಮಾರುತಿಯಿಂದ ಲಭ್ಯವಾಗುತ್ತಿರುವ ಮೊದಲ ಎಜಿಎಸ್ ಡೀಸೆಲ್ ಕಾರೆಂಬ ಹೆಗ್ಗಳಿಕೆಗೆ ಡಿಜೈರ್ ಪಾತ್ರವಾಗಲಿದೆ. ಒಟ್ಟಾರೆಯಾಗಿ ನಾಲ್ಕನೇ ಮಾದರಿಯಾಗಿದೆ.

ಇದಕ್ಕೂ ಮೊದಲು ಸೆಲೆರಿಯೊ, ಆಲ್ಟೊ ಕೆ10 ಹಾಗೂ ವ್ಯಾಗನಾರ್ ಮಾದರಿಗಳಲ್ಲಿ ಸೆಮಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವನ್ನು ಮಾರುತಿ ಒದಗಿಸಿತ್ತು. ಈ ಪೈಕಿ ಮೊದಲು ಸೆಲೆರಿಯೊ ಎಎಂಟಿ ಮಾರುಕಟ್ಟೆ ಪ್ರವೇಶಿಸಿತ್ತು.

ಸುಲಭ ಚಾಲನೆಗೆ ಆಟೋ ಗೇರ್ ಶಿಫ್ಟ್ ತಂತ್ರಜ್ಞಾನವನ್ನು ಹೆಸರುವಾಸಿಯಾಗಿದೆ. ಅಲ್ಲದೆ ಬಿಡುವಿಲ್ಲದ ನಗರ ವಾಹನ ದಟ್ಟಣೆಯಲ್ಲಿ ಇದರ ಸೇವೆ ಚಾಲಕರಿಗೆ ಹೆಚ್ಚು ಅನುಕೂಲವಾಗಲಿದೆ.

ಸಂಸ್ಥೆಯ ಪ್ರಕಾರ ನೂತನ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಎಜಿಎಸ್ ಪ್ರತಿ ಲೀಟರ್ ಗೆ 26.59 ಕೀ.ಮೀ. ಮೈಲೇಜ್ ನೀಡಲಿದೆ.

ಸ್ವಿಫ್ಟ್ ಡಿಜೈರ್ ಸಾಮಾನ್ಯ ಝಡ್‌ಡಿಐ ಡೀಸೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋರೂಂ 7.90 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ಹೊಸ ಎಜಿಎಸ್ ವೆರಿಯಂಟ್ ಇದಕ್ಕಿಂತಲೂ 50,000 ರು.ಗಳಷ್ಟು ದುಬಾರಿಯೆನಿಸಲಿದೆ.

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ಇದುವರೆಗೆ ದೇಶದಲ್ಲಿ 1.15 ದಶಲಕ್ಷ ಯುನಿಟ್ ಗಳು ಮಾರಾಟವಾಗಿದೆ. ಈ ಮೂಲಕ ದಶಲಕ್ಷ ಮಾರಾಟ ಸಾಧನೆ ಮಾಡಿರುವ ದೇಶದ ಏಕ ಮಾತ್ರ ಸೆಡಾನ್ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


Click it and Unblock the Notifications








