ಅಮೋಘ ಸಾಧನೆ ಮೆರೆದ ಮಾರುತಿ ವಿಟಾರಾ ಬ್ರಿಝಾ
ಬಿಡುಗಡೆಯಾದ ಎಂಟು ತಿಂಗಳೊಳಗೆ ಮಾರುತಿ ವಿಟಾರಾ ಬ್ರಿಝಾ 1.72 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಳ್ಳುವಲ್ಲಿ ಯಶ ಕಂಡಿದೆ.
ಭಾರತೀಯ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಭಾರಿ ಸದ್ದು ಮಾಡಿರುವ ಅತಿ ನೂತನ ಮಾರುತಿ ವಿಟಾರಾ ಬ್ರಿಝಾ ಕಾರು ಬಿಡುಗಡೆಗೊಂಡಿರುವ ಎಂಟು ತಿಂಗಳ ಅವಧಿಯೊಳಗೆ ಬರೋಬ್ಬರಿ 1.72 ಲಕ್ಷಗಳಷ್ಟು ಬುಕ್ಕಿಂಗ್ ದಾಖಲಿಸುವ ಮೂಲಕ ಅಮೋಘ ಸಾಧನೆ ಮೆರೆದಿದೆ.

ಭವಿಷ್ಯತ್ತಿನ ವಿನ್ಯಾಸ, ಸಮಕಾಲೀನ ವೈಶಿಷ್ಟ್ಯ, ಎಂಜಿನಿ ನಿರ್ವಹಣೆ, ಆರಾಮ ಮತ್ತು ಅನುಕೂಲತೆಗಳು ವಿಟಾರಾ ಬ್ರಿಝಾ ಕಾರನ್ನು ಗೆಲ್ಲುವ ಕುದುರೆಯನ್ನಾಗಿ ಮಾರ್ಪಾಡುಗೊಳಿಸಿದೆ.

'ಐ ಕ್ರಿಯೇಟ್' ಎಂಬ ನೂತನ ಕಾರನ್ನು ವೈಯಕ್ತೀಕರಣಗೊಳಿಸುವ ಪ್ಯಾಕೇಜನ್ನು ಮಾರುತಿ ಬಿಡುಗಡೆಗೊಳಿಸಿತ್ತು. ತನ್ಮೂಲಕ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಬ್ರಿಝಾ ಕಾರನ್ನು ಬದಲಾಯಿಸಬಹುದಾಗಿದೆ.

ಸದ್ಯ ವಿಟಾರಾ ಬ್ರಿಝಾ ಬುಕ್ಕಿಂಗ್ ಮಾಡಿದ ಗ್ರಾಹಕರು ತಮ್ಮ ನೆಚ್ಚಿನ ಕಾರಿನ ಆಗಮನಕ್ಕಾಗಿ ಐದರಿಂದ ಆರು ತಿಂಗಳುಗಳಷ್ಟು ಕಾಲ ಕಾಯಬೇಕಿದೆ.

2017 ಮಾರ್ಚ್ ತಿಂಗಳಲ್ಲಿ ಗುಜರಾತ್ ನಲ್ಲಿ ಸಂಸ್ಥೆಯ ಹೊಸ ಘಟಕ ಆರಂಭವಾಗಲಿರುವಂತೆಯೇ ಕಾಯುವಿಕೆ ಅವಧಿ ಚಿತ್ರಣ ಬದಲಾಗಲಿದೆ. ತದಾ ನಂತರ ವಿತರಣೆ ಪ್ರಕ್ರಿಯೆಗೆ ಆವೇಗ ತುಂಬಲು ನೆರವಾಗಲಿದೆ.

ವಿಟಾರಾ ಬ್ರಿಝಾದ ಟಾಪ್ ಎಂಡ್ ವೆರಿಯಂಟ್ ಗಳಾದ ಝಡ್ ಡಿಐ ಮತ್ತು ಝಡಿಐ ಪ್ಲಸ್ ವೆರಿಯಂಟ್ ಗಳಿಗೆ ಅತಿ ಹೆಚ್ಚಿನ ಬೇಡಿಕೆ ದಾಖಲಾಗಿದೆ.

ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ, ವಾಯ್ಸ್ ಕಮಾಂಡ್, ಆಪ್ ಕಾರ್ ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯಲ್ಲೂ ಯಾವುದೇ ರಾಜಿಗೂ ತಯಾರಾಗದ ಮಾರುತಿ ಬ್ರಿಝಾ ಟಾಪ್ ಎಂಡ್ ವೆರಿಯಂಟ್ ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಡ್ಯುಯಲ್ ಏರ್ ಬ್ಯಾಗ್ ವ್ಯವಸ್ಥೆಗಳನ್ನು ಪಡೆದಿದೆ.

ಎಂಜಿನ್ ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ 1.3 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿರುತ್ತದೆ.

ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ನೀಡಲಿದೆ.

ಅಂತಿಮವಾಗಿ ಈ ಜನ ಮೆಚ್ಚುಗೆಯ ಕಾರು ದೇಶದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 7.19 ಲಕ್ಷ ರು.ಗಳಿಂದ 9.66 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.


Click it and Unblock the Notifications








