ಬಹುನಿರೀಕ್ಷಿತ ಮಾರುತಿ ವಿಟಾರಾ ಬ್ರಿಝಾ ಮಾರ್ಚ್ 08ರಂದು ಬಿಡುಗಡೆ
ಪ್ರಸಕ್ತ ಸಾಲಿನ ಅತಿ ದೊಡ್ಡ ಬಿಡುಗಡೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮುಂಬರುವ 2016 ಮಾರ್ಚ್ 08ರಂದು ಬಿಡುಗಡೆಯಾಗಲಿದೆ. ಈ ನಡುವೆ ವಿಟಾರಾ ಬ್ರಿಝಾ ಕ್ರೀಡಾ ಬಳಕೆಯ ವಾಹನವು ಟೆಸ್ಟಿಂಗ್ ವೇಳೆ ಪತ್ತೆ ಹಚ್ಚಲಾಗಿದೆ.
Also Read: ಮಾರುತಿ ಸುಜುಕಿ ವಿಟಾರಾ ಬ್ರಿಝಾ; ಈ 10 ಅಂಶಗಳು ನೆನಪಿರಲಿ!
ಇತ್ತೀಚೆಗಷ್ಟೇ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಭರ್ಜರಿ ಪ್ರದರ್ಶನ ಕಂಡಿತ್ತು. ಈಗ ವಾಹನ ಪ್ರೇಮಿಗಳ ಮನ ಕದಿಯಲು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ನೂತನ ಮಾರುತಿ ಕ್ರೆಟಾ ಮಿನಿ ಎಸ್ ಯುವಿ 6.5 ಲಕ್ಷ ರು.ಗಳಿಂದ 8.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ಮಹೀಂದ್ರ ಟಿಯುವಿ300 ಮಾದರಿಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರತಿಸ್ಪರ್ಧಿಯಾಗಲಿದೆ.

ಸದ್ಯಕ್ಕೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದೆ. ಇದರ 1.3 ಲೀಟರ್ ಡೀಸೆಲ್ ಎಂಜಿನ್ 200 ಎನ್‌ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂತೆಯೇ ಎಲ್ ಡಿಐ, ವಿಡಿಐ, ಝಡ್ ಡಿಐ ಮತ್ತು ಝಡ್ ಡಿಐ ಪ್ಲಸ್ ಗಳೆಂಬ ನಾಲ್ಕು ವೆರಿಯಂಟ್ ಗಳಲ್ಲಿ ಬಿಡುಗಡೆಯಾಗಲಿದೆ.

ವಿಟಾರಾ ಬ್ರಿಝಾ ನಿರ್ಮಾಣವನ್ನು ಶೇಕಡಾ 98ರಷ್ಟು ಸ್ಥಳೀಯವಾಗಿಸಿರುವ ಮಾರುತಿ ಈ ನಿಟ್ಟಿನಲ್ಲಿ ಬರೋಬ್ಬರಿ 860 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ.

ಇನ್ನು ವೈಶಿಷ್ಟ್ಯಗಳ ಬಗ್ಗೆ ಚರ್ಚಿಸುವುದಾದ್ದಲ್ಲಿ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ, ಇನ್ ಬಿಲ್ಟ್ ನೇವಿಗೇಷನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಂಜಿನ್ ಸ್ಟ್ಯಾರ್ಟರ್ ಬಟನ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲೈಟ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಆಟೋಮ್ಯಾಟಿಕ್ ಹೆಡ್ ಲೈಟ್ ಸೌಲಭ್ಯಗಳಿರಲಿದೆ.

ಕಣ್ಮಣ ಸೆಳೆದ ಮಾರುತಿ ಬಲೆನೊ ಆರ್‌ಎಸ್ ಕಾನ್ಸೆಪ್ಟ್ ಕಾರು
ವಾಹನ ಪ್ರೇಮಿಗಳಲ್ಲಿ ಕಿಚ್ಚು ಹಚ್ಚಿದ ಮಾರುತಿ ಇಗ್ನಿಸ್
ವಿಟಾರಾ ಬ್ರಿಝಾ ಎಂಟ್ರಿಯೊಂದಿಗೆ ಆಟೋ ಎಕ್ಸ್ ಪೋಗೆ ಭರ್ಜರಿ ಚಾಲನೆ


Click it and Unblock the Notifications