ಬಿಡುಗಡೆಗೂ ಮೊದಲೇ ಮಾರುತಿ ವಿಟಾರಾ ಬ್ರಿಝಾ ಲೀಕ್

By Nagaraja

ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನಕ್ಕಿಂತಲೂ ಮುಂಚಿತವಾಗಿ ದೇಶದ ಅತಿ ದೊಡ್ಡ ಮಾರುತಿ ಸುಜುಕಿ ಸಂಸ್ಥೆ ಪರಿಚಯಿಸಲಿರುವ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿ ಕಾರಿನ ಸಂಪೂರ್ಣ ಮಾಹಿತಿ ಹಾಗೂ ಚಿತ್ರಗಳು ಬಹಿರಂಗವಾಗಿದೆ.

ನೂತನ ವಿಟಾರಾ ಬ್ರಿಝಾ ಸಂಪೂರ್ಣವಾಗಿಯೂ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ರಚಿಸಲಾಗಿದೆ. ಇದು ಕಾಂಪಾಕ್ಟ್ ಎಸ್‌‍ಯುವಿ ವಿಭಾಗದಲ್ಲಿ ಮತ್ತಷ್ಟು ಪೈಪೋಟಿಗೆ ಸಾಕ್ಷಿಯಾಗಲಿದೆ. ನೂತನ ವಿಟಾರಾ ಬ್ರಿಝಾ ಅತ್ಯುತ್ತಮ ವಿನ್ಯಾಸವನ್ನು ಕಾಪಾಡಿಕೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದಕ್ಕನುಗುಣವಾಗಿ ಮುಂಭಾಗದಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ಮಾರುತಿ ವಿಟಾರಾ ಬ್ರಿಝಾ


ನೂತನ ವಿಟಾರಾ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿ ಆರು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ, LDi, LDi (O), VDi, VDi (O), ZDi ಮತ್ತು ZDi+. ಭಾರತದಲ್ಲಿ ಸಂಸ್ಥೆಯು ತೆರೆದುಕೊಂಡಿರುವ ನೂತನ ನೆಕ್ಸಾ ಶೋ ರೂಂಗಳ ಮುಖಾಂತರ ಮಾರಾಟವಾಗಲಿರುವ ನೂತನ ವಿಟಾರಾ ಬ್ರಿಝಾ 6ರಿಂದ 9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಎಲ್‌ಡಿಐ
ಡಬಲ್ ಬ್ಯಾರೆಲ್ ಹೆಡ್ ಲ್ಯಾಂಪ್, ಬಂಪರ್‌ನಲ್ಲಿ ಟರ್ನ್ ಇಂಡಿಕೇಟರ್, 15 ಇಂಚುಗಳ ಅಲಾಯ್ ವೀಲ್, ಎಸ್‌ಯುವಿ ದೇಹ ರೇಖೆ, ಫ್ರಂಟ್ ಪವರ್ ವಿಂಡೋ, ಮ್ಯಾನುವಲ್ ಎಸಿ, ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಮ್ಯಾನುವಲ್ ಡೇ/ನೈಟ್ ಐಆರ್‌ವಿಎಂ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಡೆಡ್ ಪೆಡಲ್, ಎಂಜಿನ್ ಇಂಮೊಬಿಲೈಜರ್, ಚಾಲಕ ಏರ್ ಬ್ಯಾಗ್ ಇತ್ಯಾದಿ.

ಎಲ್‌ಡಿಐ (ಐಚ್ಛಿಕ)
ವಿಟಾರಾ ಬ್ರಿಝ್ ಎಲ್‌ಡಿಐ ಸೇರಿದಂತೆ ಹೆಚ್ಚುವರಿಯಾಗಿ ಪ್ರಯಾಣಿಕ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಫ್ರಂಟ್ ಪ್ರಿ ಟೆನ್ಷನರ್ ಸೀಟ್ ಬೆಲ್ಟ್ ಆಯ್ಕೆಯೂ ಲಭ್ಯವಾಗಲಿದೆ.

ವಿಡಿಐ
ಎಲ್‌ಡಿಐ (ಐಚ್ಛಿಕ) ಜೊತೆಗೆ ಹೊರಗಡೆ ಕಪ್ಪು ವರ್ಣದ ಪಿಲ್ಲರ್, ಬ್ಲ್ಯಾಕ್ ರೂಫ್ ರೈಲ್, ಸ್ಕಿಡ್ ಪ್ಲೇಟ್, ದೇಹ ಬಣ್ಣದ ಡೋರ್ ಹ್ಯಾಂಡಲ್ ಹಾಗೂ ವೀಲ್ ಕವರ್ ಇರಲಿದೆ. ಕಾರಿನ ಒಳಮೈಯಲ್ಲಿ ಗೇರ್ ಶಿಫ್ಟ್ ಇಂಡಿಕೇಟರ್, ಕೀಲೆಸ್ ಎಂಟ್ರಿ, ರಿಯರ್ ಪವರ್ ವಿಂಡೋ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರೊಮ್ಯಾಗ್ನೆಟಿಕ್ ಟೈಲ್ ಗೇಟ್, ಪ್ಯಾಸೆಂಜರ್ ವ್ಯಾನಿಟಿ ಮಿರರ್, ಫ್ಯಾಬ್ರಿಕ್ ಲೈನಿಂಗ್ ಮತ್ತು ಸೆಕ್ಯೂರಿಟಿ ಅಲರಾಂ.


ವಿಡಿಐ (ಐಚ್ಛಿಕ)
ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ.

ಝಡ್‌ಡಿಐ
ಮಾರುತಿ ವಿಟಾರಾ ಬ್ರಿಝಾ ಟಾಪ್ ವೆರಿಯಂಟ್ 16 ಇಂಚುಗಳ ಅಲಾಯ್ ವೀಲ್, ಗನ್ ಮೆಟಲ್ ಗ್ರೇ ರೂಫ್ ರೈಲ್, ಸಿಲ್ವರ್ ಫಿನಿಶ್ ಸ್ಕಿಡ್ ಪ್ಲೇಟ್, ಕ್ರೋಮ್ ಗ್ರಿಲ್, ರಿಯರ್ ವೈಪರ್ ಹಾಗೂ ವಾಶರ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಫಾಗ್ ಲ್ಯಾಂಪ್ ಇರಲಿದೆ. ಇನ್ನು ಕಾರಿನೊಳಗೆ ಕ್ಲೈಮೇಟ್ ಕಂಟ್ರೋಲ್, ಪಿಯಾನೊ ಬ್ಲ್ಯಾಕ್ ಮತ್ತು ಅಲ್ಯೂಮಿನಿಯಂ ಸ್ಪರ್ಶದ ಕ್ಯಾಬಿನ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು, ಸ್ಟೀರಿಂಗ್ ನಲ್ಲೇ ಆಡಿಯೋ ಕಂಟ್ರೋಲ್, ಬ್ಲೂಟೂತ್ ಕಂಟ್ರೋಲ್, ಮೂಡ್ ಲೈಟ್ ಸ್ಪಿಡೋಮೀಟರ್, 60:40 ವಿಭಜಿತ ಸೀಟು, ಡೋರ್ ಹ್ಯಾಂಡಲ್ ನಲ್ಲಿ ಕ್ರೋಮ್ ಸ್ಪರ್ಶ, ಫ್ಯಾಬ್ರಿಕ್ ಸೀಟು ಮತ್ತು, ಬೂಟ್ ಆಕ್ಸೆಸರಿ ಸಾಕೆಟ್ ಕಂಡುಬರಲಿದೆ.

ಝಡ್‌ಡಿಐ ಪ್ಲಸ್
ಅಂತೆಯೇ ಝಡ್‌ಡಿಐ ಪ್ಲಸ್ ವೆರಿಯಂಟ್ ಸಹ ಆಟೋ ಹೆಡ್ ಲ್ಯಾಂಪ್ ಜೊತೆ ಟರ್ನ್ ಇಂಡಿಕೇಟರ್, ಆಡಿಯೋ ವಿಡಿಯೋ ನೇವಿಗೇಷನ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಜೊತೆ ಆಪಲ್ ಕಾರ್ ಪ್ಲೇ, ಇನ್ ಬಿಲ್ಟ್ ನೇವಿಗೇಷನ್ ಜೊತೆ ಮ್ಯಾಪ್ ಕೇರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಪುಶ್ ಬಟನ್ ಬಟನ್, ಕ್ರೂಸ್ ಕಂಟ್ರೋಲ್, ಕೂಲ್ಡ್ ಅಪ್ಪರ್ ಗ್ಲೋವ್ ಬಾಕ್ಸ್, ಸ್ಲೈಡಿಂಗ್ ಫ್ರಂಟ್ ಆರ್ಮ್ ರೆಸ್ಟ್ ಮುಂತಾದ ವ್ಯವಸ್ಥೆಗಳಿರಲಿದೆ.

Article Published On: Saturday, January 30, 2016, 15:50 [IST]
English summary
Maruti Baleno RS To Be Showcased At 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+