ಮಾರುತಿ ಹೊಸ ಕಾಂಪಾಕ್ಟ್ ಎಸ್‌ಯುವಿ ಸದ್ಯದಲ್ಲೇ ಬಿಡುಗಡೆಗೆ
ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವೊಂದನ್ನು (ಎಸ್‌ಯುವಿ) ಬಿಡುಗಡೆ ಮಾಡಲಿದೆ.
ಮಾರುತಿಯ ನೂತನ ಕಾಂಪಾಕ್ಟ್ ಎಸ್‌ಯುವಿ 'ವಿಟಾರಾ ಬ್ರಿಝಾ' ಎಂದು ಹೆಸರಿಸಿಕೊಳ್ಳಲಿದೆ.

ಮುಂದಿನ ತಿಂಗಳಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ವಿಟಾರಾ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿ ಜಾಗತಿಕ ಅನಾವರಣಗೊಳ್ಳಲಿದೆ.

ಇಟಲಿಯಲ್ಲಿ ತಾಜಾ ಹವಾ ಎಂಬ ಅರ್ಥವನ್ನು ನೀಡುವ ಮಾರುತಿ ಬ್ರಿಝಾ ಆಟೋ ಎಕ್ಸ್ ಪೋ ಬಳಿಕ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಆರಂಭದಲ್ಲಿ ವೈಬಿಎ ಎಂಬ ಕೋಡ್ ಪಡೆದುಕೊಂಡಿರುವ ಮಾರುತಿ ವಿಟಾರಾ ಬ್ರಿಝಾ, 1.2 ಲೀಟರ್ ಕೆ ಸಿರೀಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಅಲ್ಲದೆ 1.3 ಲೀಟರ್ ಡೀಸೆಲ್ಎಂಜಿನ್ ಕೂಡಾ ಇರಲಿದೆ.

ನೂತನ ಮಾರುತಿ ವಿಟಾರಾ ಬ್ರಿಝಾ ದೇಶದಲ್ಲಿ ಐದು ಲಕ್ಷ ರು.ಗಳಿಂದ 8.5 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.


Click it and Unblock the Notifications