ಸದ್ಯದಲ್ಲೇ ವಿಟಾರಾ ಬ್ರಿಝಾ ಬಿಡುಗಡೆ; ಈ 10 ಅಂಶಗಳು ನೆನಪಿರಲಿ!

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಅತಿ ನೂತನ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಇದೇ ಮುಂಬರುವ 2016 ಮಾರ್ಚ್ 21ರಂದು ಬಿಡುಗಡೆ ಮಾಡಲಿದೆ.

ವಿಟಾರಾ ಬ್ರಿಝಾ ಎಂಟ್ರಿಯೊಂದಿಗೆ ಆಟೋ ಎಕ್ಸ್ ಪೋಗೆ ಭರ್ಜರಿ ಚಾಲನೆ

2016 ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಂಡಿರುವ ಮಾರುತಿ ವಿಟಾರಾ ಬ್ರಿಝಾ ಮಾರುಕಟ್ಟೆಯಲ್ಲಿ ಹೊಸ ಹವಾ ಎಬ್ಬಿಸುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಈ ಸಂಬಂಧ ವಾಹನ ಪ್ರೇಮಿಗಳು ವಿಟಾರಾ ಬ್ರಿಝಾ ಬಗ್ಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದ 10 ಅಂಶಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಿಕೊಡಲಿದ್ದೇವೆ.

ಮಾರುತಿ ವಿಟಾರಾ ಬ್ರಿಝಾ; ಈ 10 ಅಂಶಗಳು ನೆನಪಿರಲಿ!

ನೂತನ ಮಾರುತಿ ಕ್ರೆಟಾ ಮಿನಿ ಎಸ್ ಯುವಿ 6.5 ಲಕ್ಷ ರು.ಗಳಿಂದ 8.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್ ಮತ್ತು ಮಹೀಂದ್ರ ಟಿಯುವಿ300 ಮಾದರಿಗಳಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಪ್ರತಿಸ್ಪರ್ಧಿಯಾಗಲಿದೆ.

ಮಿನಿ ಎಸ್‌ಯುವಿ

ಮಿನಿ ಎಸ್‌ಯುವಿ

ಕಾಂಪಾಕ್ಟ್ ಎಸ್ ಯುವಿ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಅಮೋಘ ಮಾರಾಟವನ್ನು ಕಾಯ್ದುಕೊಂಡಿದೆ. ಆದರೆ ನೂತನ ಬ್ರಿಝಾ ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಎಂಜಿನ್

ಎಂಜಿನ್

ಅಂದ ಹಾಗೆ ದೇಶದಲ್ಲಿ ಡೀಸೆಲ್ ಎಂಜಿನ್ ಆವೃತ್ತಿಯಲ್ಲಿ ಮಾತ್ರ ವಿಟಾರಾ ಬ್ರಿಝಾ ಲಭ್ಯವಾಗಲಿದೆ. ಇದರ 1.3 ಲೀಟರ್ ಡೀಸೆಲ್ ಎಂಜಿನ್ 200 ಎನ್‌ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೆರಿಯಂಟ್

ವೆರಿಯಂಟ್

ನಾಲ್ಕು ವೆರಿಯಂಟ್ ಗಳು ಇಂತಿದೆ: ಎಲ್ ಡಿಐ, ವಿಡಿಐ, ಝಡ್ ಡಿಐ ಮತ್ತು ಝಡ್ ಡಿಐ ಪ್ಲಸ್

ಹೂಡಿಕೆ

ಹೂಡಿಕೆ

ವಿಟಾರಾ ಬ್ರಿಝಾ ಅಭಿವೃದ್ಧಿಗಾಗಿ ಮಾರುತಿ ಸುಜುಕಿ ಬರೋಬ್ಬರಿ 860 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಅಲ್ಲದೆ ಶೇಕಡಾ 98ರಷ್ಟು ನಿರ್ಮಾಣವನ್ನು ಸ್ಥಳೀಯಗೊಳಿಸಲಾಗಿದ್ದು, ಹೆಚ್ಚು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ಸುರಕ್ಷತೆ

ಸುರಕ್ಷತೆ

ವಿಟಾರಾ ಬ್ರಿಝಾ ಎಲ್ಲ ವೆರಿಯಂಟ್ ಗಳಿಗೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಭದ್ರತಾ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.

ಮುಂಗಡ ಬುಕ್ಕಿಂಗ್

ಮುಂಗಡ ಬುಕ್ಕಿಂಗ್

ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದ್ದು ಆಸಕ್ತರು ರು. 21,000 ಗಳನ್ನು ಪಾವತಿಸಿ ತಮ್ಮ ಕನಸಿನ ಕಾರಿಗಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಇನ್ನುಳಿದಂತೆ ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಆಪಲ್ ಕಾರ್ ಪ್ಲೇ, ಇನ್ ಬಿಲ್ಟ್ ನೇವಿಗೇಷನ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಂಜಿನ್ ಸ್ಟ್ಯಾರ್ಟರ್ ಬಟನ್, ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲೈಟ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಆಟೋಮ್ಯಾಟಿಕ್ ಹೆಡ್ ಲೈಟ್ ಸೇವೆಗಳಿರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 3995

ಅಗಲ: 1790

ಎತ್ತರ: 1640

ಚಕ್ರಾಂತರ: 2500

ಗ್ರೌಂಡ್ ಕ್ಲಿಯರನ್ಸ್: 198

Most Read Articles

Kannada
English summary
Maruti Vitara Brezza To Be Launched On 21st March; 10 things to know
Story first published: Saturday, February 27, 2016, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X