ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

By Nagaraja

ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ಬಿಡುಗಡೆ ಮಾಡಿರುವ ಮಾರುತಿ ವಿಟಾರಾ ಬ್ರಿಝಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ (ಎಸ್‌ಯುವಿ) ಭಾರಿ ಬೇಡಿಕೆ ದಾಖಲಾಗಿದೆ.

Also Read: ವಿಟಾರಾ ಬ್ರಿಝಾ ಎಂಟ್ರಿಯೊಂದಿಗೆ ಆಟೋ ಎಕ್ಸ್ ಪೋಗೆ ಭರ್ಜರಿ ಚಾಲನೆ

ಬಿಡುಗಡೆಯಾದ 48 ತಾಸಿನೊಳಗೆ 5,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿರುವ ವಿಟಾರಾ ಬ್ರಿಝಾ, ಎರಡು ವಾರಗಳಲ್ಲೇ 25,000 ಯುನಿಟ್ ಗಳನ್ನು ದಾಟಿತ್ತು. ಇದಾದ ಬೆನ್ನಲ್ಲೇ ಕಾಯುವಿಕೆ ಅವಧಿ ಐದು ತಿಂಗಳ ವರೆಗೆ ವಿಸ್ತರಣೆಯಾಗಿದೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ವಿಟಾರಾ ಬ್ರಿಝಾ ಜೋಡಿ ಬಣ್ಣಗಳ ಆಯ್ಕೆಯಿರುವ ಟಾಪ್ ಎಂಡ್ ಝಡ್ ಡಿಐ ಪ್ಲಸ್ ವೆರಿಯಂಟ್ ಗೆ ಕಾಯುವಿಕೆ ಅವಧಿ ಐದು ತಿಂಗಳಿಗೆ ವಿಸ್ತರಣೆಯಾಗಿದೆ ಎಂದು ಆಟೋ ಮೂಲಗಳು ತಿಳಿಸಿವೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ಮಾರುತಿ ವಿಟಾರಾ ಬ್ರಿಝಾ ಏಳು ವೆರಿಯಂಟ್ ಗಳಲ್ಲಿ ಲಭ್ಯವಿದ್ದು, ಈ ಪೈಕಿ ಎಲ್‌ಡಿಐಷ ಎಲ್‌ಡಿಐ (ಐಚ್ಛಿಕ), ಝಡ್‌ಡಿಐ, ಝಡ್‌ಡಿಐ ಪ್ಲಸ್ ವೆರಿಯಂಟ್ ಗಳಿಗೆ ಕಾಯುವಿಕೆ ಅವಧಿ ನಾಲ್ಕು ತಿಂಗಳಷ್ಟಿದೆ. ಇನ್ನುಳಿದಂತೆ ವಿಡಿಐ ಮತ್ತು ವಿಡಿಐ (ಐಚ್ಛಿಕ) ವೆರಿಯಂಟ್ ಗಾಗಿ ಮೂರು ತಿಂಗಳು ಕಾಯಬೇಕಾಗಿದೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿಯುವಿ300 ಮುಂತಾದ ಮಾದರಿಗಳಿಗೆ ಪೈಪೋಟಿ ಒಡ್ಡುತ್ತಿರುವ ಮಾರುತಿ ವಿಟಾರಾ ಬ್ರಿಝಾ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 7.17 ಲಕ್ಷ ರು.ಗಳಿಂದ 9.95 ಲಕ್ಷ ರು.ಗಳಷ್ಟಿದೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ಮಾರುತಿ ವಿಟಾರಾ ಬ್ರಿಝಾದಲ್ಲಿರುವ ಡಿಡಿಐಎಸ್ 200 ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 89 ಅಶ್ವಶಕ್ತಿಯನ್ನು ಉತ್ಪಾದಿಸುತ್ತಿದ್ದು ಐದು ಸ್ಪೀಡ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ಈ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿರುವುದು ವಿಟಾರಾ ಬ್ರಿಝಾ ಕಾಂಪಾಕ್ಟ್ ಎಸ್‌ಯುವಿಗೆ ವರದಾನವಾಗಿ ಪರಿಣಮಿಸಿದೆ.

ಬುಕ್ ಮಾಡಿದ್ರೂ ಸಿಗಲ್ಲ ಅಂತೆ ಮಾರುತಿ ವಿಟಾರಾ ಬ್ರಿಝಾ

ಸದ್ಯದಲ್ಲೇ ವಿಟಾರಾ ಬ್ರಿಝಾ ಬಿಡುಗಡೆ; ಈ 10 ಅಂಶಗಳು ನೆನಪಿರಲಿ!

ಇಕೊಸ್ಪೋರ್ಟ್‌ಗೆ ಎಚ್ಚರಿಕೆಯ ಕರೆ ಗಂಟೆ ನೀಡಿದ ವಿಟಾರಾ ಬ್ರಿಝಾ

Most Read Articles

Kannada
English summary
Maruti Suzuki Vitara Brezza Waiting Period Up To 4-5 Months
Story first published: Thursday, March 31, 2016, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X