ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

By Nagaraja

ಬಿಡುಗಡೆಯಾದ ಎರಡು ದಿನಗಳೊಳಗೆ 5,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಿಸಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಆರಂಭಿಕ ಯಶಸ್ಸಿನಿಂದ ಪುಳಕಿತಗೊಂಡಿರುವ ದೇಶದ ಅಗ್ರ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ವಿಟಾರಾ ಸಾಲಿಗೆ ಪೆಟ್ರೋಲ್ ಎಂಜಿನ್ ಸೇರಿಸುವ ಆಸಕ್ತಿಯನ್ನು ಹೊಂದಿದೆ.

2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ವಿಟಾರಾ ಬ್ರಿಝಾ ಈಗಷ್ಟೇ ಬಿಡುಗಡೆ ಭಾಗ್ಯ ಕಂಡಿತ್ತು. ಬಿಡುಗಡೆ ವೇಳೆ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಿದ್ದ ವಿಟಾರಾ ಬ್ರಿಝಾ ಈಗ ಪೆಟ್ರೋಲ್ ಮಾದರಿಯಲ್ಲೂ ಆಗಮನವಾಗುವ ಸಾಧ್ಯತೆಯಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಬಲ್ಲ ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲೇ ಮಾರುತಿ ಸುಜುಕಿ ವಿಟಾರಾ ಬ್ರಿಝಾ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಇದು ಕಾಂಪಾಕ್ಟ್ ಕ್ರೀಡಾ ಬಳಕೆಯ ವಿಭಾಗದಲ್ಲಿ ಮತ್ತಷ್ಟು ಶಕ್ತಿಶಾಲಿ ಎನಿಸಿಕೊಳ್ಳಲು ನೆರವಾಗಲಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಇನ್ನೊಂದೆಡೆ ಮಾರುತಿಯ ಜನಪ್ರಿಯ ಸ್ವಿಫ್ಟ್ ಮಾದರಿಯಲ್ಲಿ 83.1 ಅಶ್ವಶಕ್ತಿ ಉತ್ಪಾದಿಸಬಲ್ಲ 1.2 ಲೀಟರ್ ಎಂಜಿನ್ ಆಳವಡಿಸಲಾಗಿದೆ. ಆದರೆ ಇದು ಎಸ್ ಯುವಿ ಕಾರಿನಲ್ಲಿ ಆಳವಡಿಸಿದರೆ ಕಡಿಮೆ ಶಕ್ತಿಶಾಲಿಯಾಗಿರಲಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಹಾಗಿದ್ದರೂ ಕ್ರೀಡಾ ಬಳಕೆಯ ವಾಹನಕ್ಕೆ ಹೆಚ್ಚಿನ ಶಕ್ತಿ ಅಗತ್ಯವಿರುವುದರಿಂದ ಶಕ್ತಿಶಾಲಿ ಎಂಜಿನ್ ಆಳವಡಿಸಲಾಗುವುದೇ ಎಂಬುದು ಇನ್ನು ತಿಳಿದು ಬಂದಿಲ್ಲ. ಮಾರುತಿಯ ಪ್ರೀಮಿಯಂ ಕಾರುಗಳಾಗಿರುವ ಸಿಯಾಝ್ ಮತ್ತು ಎರ್ಟಿಗಾದಲ್ಲಿ 1.4 ಲೀಟರ್ ಎಂಜಿನ್ ಬಳಕೆಯಾಗಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಅತ್ತ 1200 ಸಿಸಿ ಮೇಲ್ಪಟ್ಟ ಎಂಜಿನ್ ಕಾರುಗಳು ಹೆಚ್ಚಿನ ತೆರಿಗೆ ಪಾವತಿಸಬೇಕಾಗಿರುವುದರಿಂದ ಮಾರುತಿ ಇಂತಹದೊಂದು ನಡೆ ಅನುಸರಿಸುವ ಸಾಧ್ಯತೆ ಕಡಿಮೆಯಾಗಿದೆ. ಇವೆಲ್ಲದರಿಂದ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೆಚ್ಚು ಸೂಕ್ತವೆನಿಸಲಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಬಲೆನೊ ಆರ್‌ಎಸ್ ಕಾರಿನಲ್ಲೂ ಬೂಸ್ಟರ್ ಜೆಟ್ ಎಂಜಿನ್ ಆಳವಡಿಕೆಯಾಗಲಿದೆ. ಇಲ್ಲಿಂದಲೇ ಜಾಗತಿಕ ಮಾರುಕಟ್ಟೆಗೂ ರಫ್ತು ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಪೆಟ್ರೋಲ್ ಆವೃತ್ತಿಯಲ್ಲೂ ಬರಲಿರುವ ಮಾರುತಿ ವಿಟಾರಾ ಬ್ರಿಝಾ

ಸುಜುಕಿಯ ಬೂಸ್ಟರ್ ಜೆಟ್ ಫ್ಯಾಮಿಲಿಗೆ ಸೇರಿದ 1.0 ಲೀಟರ್ ಪೆಟ್ರೋಲ್ ಎಂಜಿನ್, 996 ಸಿಸಿ ಟರ್ಬೊ ಪೆಟ್ರೋಲ್ ಎಂಜಿನ್ 110 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಗರಿಷ್ಠ ಇಂಧನ ಕ್ಷಮತೆ ಕಾಪಾಡುವುದರತ್ತ ಮಾರುತಿ ಕಾರ್ಯ ಮಗ್ನವಾಗಿದೆ.

Article Published On: Wednesday, March 16, 2016, 18:13 [IST]
English summary
Maruti Vitara Brezza To Get The 1.0-Litre Turbocharged BoosterJet Engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+