ಮುಂಬೈ ಬಂದರಿನಿಂದ ಏಕಕಾಲಕ್ಕೆ ದಾಖಲೆಯ 6316 ಕಾರುಗಳ ರಫ್ತು!

By Nagaraja

ವಾಣಿಜ್ಯ ನಗರಿ ಮುಂಬೈನಲ್ಲಿರುವ ಬಂದರು ಮಗದೊಮ್ಮೆ ಗಮನ ಸೆಳೆದಿದ್ದು, ಏಕಕಾಲಕ್ಕೆ 6316 ಕಾರುಗಳ ರಫ್ತು ಮಾಡುವ ಮೂಲಕ ದಾಖಲೆಗೆ ಪಾತ್ರವಾಗಿದೆ.

ಹಿಂದಿನಿಂದಲೂ ಮುಂಬೈ ಪೋರ್ಟ್ ಟ್ರಸ್ಟ್ ಬಂದರು, ವಾಹನಗಳ ರಫ್ತಿಗೆ ಹೆಸರು ಮಾಡಿದೆ. ಈಗ ತನ್ನ ಹಳೆಯ ದಾಖಲೆಯನ್ನು ಅಳಿಸಿ ಹಾಕಿರುವ ಮುಂಬೈ ಬಂದರು ಮೆಚ್ಚುಗೆಗೆ ಪಾತ್ರವಾಗಿದೆ.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಹಡಗು ಸಚಿವಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಮುಂಬೈ ಬಂದರಿನಿಂದ ಏಕಕಾಲಕ್ಕೆ 6316ರಷ್ಟು ಕಾರುಗಳನ್ನು ರಫ್ತು ಮಾಡಲಾಗಿದೆ.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಹೊಸತಾದ ಲಂಗರುದಾಣ ಒಸಿಟಿ-2 ಕಣದಿಂದ 6316ರಷ್ಟು ಕಾರುಗಳನ್ನು ರಫ್ತು ಮಾಡಲಾಗಿದೆ. ಈ ಹಿಂದೆ ಒಂದೇ ಸಮಯದಲ್ಲಿ 5376 ಕಾರುಗಳನ್ನು ರಫ್ತು ಮಾಡಿರುವುದು ಇದುವರೆಗಿನ ದಾಖಲೆಯಾಗಿತ್ತು.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಎಂ.ವಿ. ಹೋಗ್ ಸೈಂಟ್ ಪೀಟರ್ಸ್ ಬರ್ಗ್ ಎಂಬ ಹಡಗು ದಾಖಲೆಯ ಕಿರೀಟ ಧರಿಸಿದ್ದು, 2016 ಆಗಸ್ಟ್ 6ರಂದು ಟಿಕಾಣಿ ಹೂಡಿದ್ದ ಹಡಗು ಆಗಸ್ಟ್ 9ರಂದು 6316 ಕಾರುಗಳೊಂದಿಗೆ ಪ್ರಯಾಣ ಬೆಳೆಸಿತ್ತು.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಈ ಪೈಕಿ 3115 ಕಾರುಗಳು ಜನರಲ್ ಮೋಟಾರ್ಸ್ ಮತ್ತು 3093 ಕಾರುಗಳು ಫೋಕ್ಸ್ ವ್ಯಾಗನ್ ಸಂಸ್ಥೆಗೆ ಸೇರಿದ್ದಾಗಿದೆ. ಈ ಎಲ್ಲ ಕಾರುಗಳನ್ನು ಮೆಕ್ಸಿಕೊಗೆ ರಫ್ತು ಮಾಡಲಾಗಿದೆ.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

'ಮೇಕ್ ಇನ್ ಇಂಡಿಯಾ' ಯೋಜನೆಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಮುಂಬೈ ಪೋರ್ಟ್ ಟ್ರಸ್ಟ್, ದೇಶದಿಂದ ಕಾರು ರಫ್ತು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಮೂಲ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಸರಕು ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವುದತ್ತವೂ ಮುಂಬೈ ಬಂದರು ಗಮನ ಕೇಂದ್ರಿಕರಿಸಿದೆ.

ಮುಂಬೈ ಬಂದರಿನಿಂದ ದಿನವೊಂದರಲ್ಲೇ ದಾಖಲೆಯ 6316 ಕಾರುಗಳ ರಫ್ತು!

ಪಶ್ಚಿಮ ಭಾರತದ ಸಮುದ್ರ ತಟದಲ್ಲಿ ಸ್ಥಿತಗೊಂಡಿರುವ ಮುಂಬೈ ಬಂದರು ಕಳೆದ ಕೆಲವು ವರ್ಷಗಳಲ್ಲಿ ಶೇಕಡಾ 25ರಷ್ಟು ವೃದ್ಧಿಯನ್ನು ಸಾಧಿಸಿದೆ.

More from DriveSpark

Article Published On: Friday, August 19, 2016, 18:00 [IST]
English summary
One More Record Broken — Mumbai Port Ships 6,316 Cars In A Go
Read more on ಮುಂಬೈ mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+