ಈ ಬೇಸಿಗೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾರು ಆಫರ್ ಗಳು
ನೀವು ನೂತನ ಕಾರು ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಪ್ರಸಕ್ತ ಎಪ್ರಿಲ್ ತಿಂಗಳಲ್ಲಿ ಕಾರುಗಳಿಗೆ ಲಭ್ಯವಿರುವ ಗರಿಷ್ಠ ಆಫರ್ ಗಳನ್ನು ಅರಿಯಿರಿ. ಪ್ರಸ್ತುತ ಆಫರ್ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿರುವುದರಿಂದ ಈ ಲೇಖನವನ್ನು ತಪ್ಪದೇ ಓದಲು ಮರೆಯದಿರಿ.
ಭಾರತೀಯ ವಾಹನ ಮಾರುಕಟ್ಟೆ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, ಗರಿಷ್ಠ ಮಾರಾಟವನ್ನು ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಈ ಬೇಸಿಗೆ ಕಾಲದಲ್ಲಿ ಭಾರಿ ರಿಯಾಯಿತಿ ದರಗಳನ್ನು ನಿರ್ದಿಷ್ಟ ಮಾದರಿಗಳಿಗೆ ಒದಗಿಸಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ 11 ಮಾದರಿಗಳಿಗೆ ಲಭ್ಯವಿರುವ ಆಫರ್ ಗಳನ್ನು ಚಿತ್ರಪುಟದ ಮುಖಾಂತರ ಅರಿಯಿರಿ.

01. ಫಿಯೆಟ್ ಪುಂಟೊ ಇವೊ
ಇಟಲಿಯ ಐಕಾನಿಕ್ ಫಿಯೆಟ್ ಸಂಸ್ಥೆಯ ಡೀಲರುಗಳು ತನ್ನ ಜನಪ್ರಿಯ ಪುಂಟೊ ಇವೊ ಕಾರಿಗೆ 65,000 ರು.ಗಳಿಂದ 85,000 ರು.ಗಳ ವರೆಗೆ ರಿಯಾಯಿತಿ ದರಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

02. ನಿಸ್ಸಾನ್ ಮೈಕ್ರಾ
ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ನಿಸ್ಸಾನ್ ಮೈಕ್ರಾ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಐಚ್ಛಿಕ ಸಿವಿಟಿ ಗೇರ್ ಬಾಕ್ಸ್ ಸಹ ಪಡೆದಿದೆ. ಪ್ರಸ್ತುತ ಕಾರಿಗೀಗ ಗರಿಷ್ಠ 70,000 ರು.ಗಳ ವರೆಗೆ ರಿಯಾಯಿತಿ ಲಭ್ಯವಿರುತ್ತದೆ.

03. ಮಾರುತಿ ವ್ಯಾಗನಾರ್ ಸ್ಟ್ರೀಂಗ್ರೇ
ವ್ಯಾಗನಾರ್ ಹೊಸ ಸ್ವರೂಪವಾದ ಸ್ಟ್ರೀಂಗ್ರೇ ಮಾರುಕಟ್ಟೆಯಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಇದರಿಂದ ಎಚ್ಚೆತ್ತುಕೊಂಡಿರುವ ಮಾರುತಿಯ ಕೆಲವು ಸ್ಥಳೀಯ ಡೀಲರ್ ಶಿಪ್ ಗಳು ಈ ನೂತನ ಕಾರು ಖರೀದಿ ವೇಳೆಯಲ್ಲಿ 70,000 ರು.ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದಾರೆ.

04. ಮಾರುತಿ ಆಲ್ಟೊ 800
ದೇಶದ ನಂ.1 ಕಾರು ಆಗಿರುವ ಮಾರುತಿ ಆಲ್ಟೊ ಖರೀದಿ ವೇಳೆಯಲ್ಲಿ 55,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಇದು ರೆನೊ ಕ್ವಿಡ್ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿದೆ.

05. ಮಹೀಂದ್ರ ಎಕ್ಸ್‌ಯುವಿ500
ಮಹೀಂದ್ರ ಎಕ್ಸ್‍ಯುವಿ500 ಕಾರಿನ ಆಯ್ದ ವೆರಿಯಂಟ್ ಗಲಿಗೆ 75,000 ರು.ಗಳ ವರೆಗೆ ರಿಯಾಯಿತಿ ಬೆಲೆಯನ್ನು ಒದಗಿಸಲಾಗುತ್ತಿದೆ.

06. ನಿಸ್ಸಾನ್ ಟೆರನೊ
ರೆನೊ ಡಸ್ಟರ್ ಆಧಾರಿತ ಟೆರನೊ ಕಾರಿಗೆ ಗರಿಷ್ಠ 65,000 ರು.ಗಳ ವರೆಗೆ ಪ್ರಯೋಜನವನ್ನು ಜಪಾನ್ ಮೂಲದ ನಿಸ್ಸಾನ್ ಸಂಸ್ಥೆ ಒದಗಿಸುತ್ತಿದೆ. ಇದು ಕೂಡಾ ರೆನೊ ಡಸ್ಟರ್ ಗೆ ಸಮಾನವಾದ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡುತ್ತದೆ.

07. ರೆನೊ ಲೊಡ್ಜಿ
ಸಾಕಷ್ಟು ಭರವಸೆಗಳೊಂದಿಗೆ ರೆನೊ ಲೊಡ್ಜಿ ಬಹು ಬಳಕೆಯ ವಾಹನವು ಭಾರತ ಮಾರುಕಟ್ಟೆ ಪ್ರವೇಶಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟ ಗಳಿಸುವಲ್ಲಿ ವಿಫಲವಾಗಿತ್ತು. ಇದನ್ನು ಮನಗಂಡಿರುವ ಸಂಸ್ಥೆಯು ಕೆಲವು ಆಯ್ದ ನಗರಗಳಲ್ಲಿ ರೆನೊ ಲೊಡ್ಜಿ ಕಾರಿಗೆ ಎರಡು ಲಕ್ಷ ರು.ಗಳಷ್ಟು ರಿಯಾಯಿತಿ ದರವನ್ನು ಒದಗಿಸುತ್ತಿದೆ. ಇದರಲ್ಲೂ ಡಸ್ಟರ್ ಗೆ ಸಮಾನವಾದ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ.

08. ಫಿಯೆಟ್ ಲಿನಿಯಾ
ಫಿಯೆಟ್ ಲಿನಿಯಾ ಕಾರಿಗೂ ಕೆಲವೊಂದು ಡೀಲರ್ ಶಿಪ್ ಗಳಲ್ಲಿ ಗರಿಷ್ಠ 1.25 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನ ಮಾಡಾಲಾಗುತ್ತದೆ.

09. ರೆನೊ ಸ್ಕಾಲಾ
ರೆನೊ ಸ್ಕಾಲಾ ಮಾರಾಟ ಸಹ ಭಾರಿ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು 85,000 ರು.ಗಳ ವರೆಗೆ ಆಫರ್ ಒದಗಿಸುತ್ತಿದೆ.

10. ನಿಸ್ಸಾನ್ ಸನ್ನಿ
ರೆನೊ ಸ್ಕಾಲಾದ ನಿಸ್ಸಾನ್ ತದ್ರೂಪವಾಗಿರುವ ಸನ್ನಿ ಕಾರಿಗೂ ಕೆಲವು ಡೀಲರ್ ಶಿಪ್ ಗಳಲ್ಲಿ 75,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

11. ಮಾರುತಿ ಸುಜುಕಿ ಡಿಜೈರ್
ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಅಗ್ರ ಎರಡು ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರಿಗೆ 15,000 ರು.ಗಳ ರಿಯಾಯಿತಿ ದರ ನೀಡಲಾಗುತ್ತಿದೆ. ಇದಲ್ಲದೆ 35,000 ರು.ಗಳ ಎಕ್ಸ್ ಚೇಂಜ್ ಬೋನಸ್ ಮತ್ತು ಕೆಲವು ನಗರಗಳಲ್ಲಿ ಎಎಂಟಿ ಮಾದರಿಗೆ 25,000 ರು.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ ಎನ್ನಲಾಗಿದೆ.

ವಿ.ಸೂ: ಮೇಲೆ ತಿಳಿಸಿದ ರಿಯಾಯಿತಿ ದರಗಳ ನಿಖರ ಹಾಗೂ ಖಚಿತ ಮಾಹಿತಿಗಾಗಿ ಸಂಬಂಧಪಟ್ಟ ಡೀಲರ್ ಶಿಪ್ ಗಳನ್ನು ಸಂಪರ್ಕಿಸತಕ್ಕದ್ದು.


Click it and Unblock the Notifications








